ಆಗಸ್ಟ್ 1: ಸುಳ್ಯ ತಾಲೂಕಿನ
ಮುರುಳ್ಯ ಸಮಹಾದಿ ಮಸೀದಿಯ ತಡೆಗೋಡೆ ಕುಸಿದು, ಪಕ್ಕದ ಮಹಮ್ಮದ್ ರಾಗಿಪೇಟೆ ಯವರ ಮನೆಯ ಮೇಲೆ ಬಿದ್ದು ಮನೆಯು ಭಾಗಶಃ ಹಾನಿಯಾಗಿದ್ದು, ಇಂದು ಸುಳ್ಯ ಶಾಸಕಿಯಾದ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಪರಿಶೀಲಿಸಿದರು,
ಸಮಹಾದಿ ಮಸೀದಿ ಸಮಿತಿಯ ಅಧ್ಯಕ್ಷರಾದ ಸಾದಿಕ್ ಸಮಾಹಾದಿ, ಕೋಶಾಧಿಕಾರಿ ಉಮ್ಮರ್ ಫಾರೂಕ್ ಸಮಿತಿ ಸದಸ್ಯರಾದ ಸಾಬುಕುಂಞಿ ಹುದೇರಿ,ಪಿ.ಎಂ ಅಬ್ದುಲ್ ರಹ್ಮಾನ್, ಮುಸ್ತಫಾ ,ಸೈಫುದ್ದೀನ್ ಜೊತೆಗಿದ್ದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ ಮುರುಳ್ಯ,ಸದಸ್ಯೆ ಶೀಲಾವತಿ ಗೋಳ್ತಿಲ,ಸ್ಥಳೀಯ ಪ್ರಮುಖರಾದ ವಸಂತ ನಡುಬೈಲು,ಹಸನ್ ಕುಂಞಿ ಹಾಜಿ ಸಮಹಾದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.