- Tuesday
- December 3rd, 2024
ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ವತಿಯಿಂದ ನಾಳೆ (ಆ.2 ) ಸುಬ್ರಹ್ಮಣ್ಯದಲ್ಲಿ ನಡೆಯಲಿದ್ದ ಪತ್ರಿಕಾ ದಿನಾಚರಣೆ ಕಾರ್ಯಾಕ್ರಮ ಮುಂದೂಡಲಾಗಿದ್ದು, ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಎಸ್.ಎಸ್.ಪಿ.ಯು ಕಾಲೇಜಿ ನಲ್ಲಿ ನಡೆಯಬೇಕಾಗಿದ್ದ ಪತ್ರಿಕಾ ದಿನಾಚರಣೆ, ತರಬೇತಿ, ಸಂವಾದ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್ 1 ರಂದು ಸಂಜೆ ಸುರಿದ ಭಾರೀ ಮಳೆಗೆ ದೊಡ್ಡತೋಟ ಮರ್ಕಂಜ ರಸ್ತೆಯ ಹೈದಂಗೂರು ಬಳಿ ಮರವೊಂದು ರಸ್ತೆಗೆ ಬಿದ್ದು ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ಸದಸ್ಯರು ಬಂದು ಮರ ತೆರವುಗೊಳಿಸಿ ರಸ್ತೆಸಂಚಾರ ಸುಗಮಗೊಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನಾಳೆ ಆಗಸ್ಟ್ 02ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ & ಪ್ರೌಢಶಾಲೆ, ಪದವಿಪೂರ್ವ ಕಾಲೇಜು(12ನೇ ತರಗತಿಯವರೆಗೆ) ಗಳಿಗೆ ದ.ಕ ಜಿಲ್ಲಾಧಿಕಾರಿಗಳು ರಜೆ ಘೋಷಿಸಿ ಆದೇಶಿಸಿದ್ದಾರೆ.
ಕಳೆದ ವಾರ ಗಾಂಧಿನಗರದಲ್ಲಿ ಸ್ಕೂಟಿ ಮತ್ತು ರಿಕ್ಷಾ ಅಪಘಾತವಾದಾಗ ಸುಳ್ಯದ ಶಾಂತಿಭವನ ಹೋಟೆಲ್ ಮಾಲಕ ಪ್ರಕಾಶ್ ಅವರ ಉಂಗುರ ಕಾಣೆಯಾಗಿತ್ತು. ಈ ಸಂದರ್ಭದಲ್ಲಿ ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಇಂದು ಸುಳ್ಯದ ಗಾಂಧಿನಗರದಲ್ಲಿ ರಾಕೇಶ್ ಮದುವೆಗದ್ದೆಯವರಿಗೆ ಚಿನ್ನದ ಉಂಗುರ ಬಿದ್ದು ಸಿಕ್ಕಿದ್ದು ಅದನ್ನು ನ.ಪಂ.ಸದಸ್ಯ ಶರೀಫ್ ಕಂಠಿಯವರ ಮುಖಾಂತರ ಶಾಂತಿಭವನ ಹೋಟೆಲ್ ನ ಪ್ರಕಾಶ್ ಅವರಿಗೆ ಹಿಂತಿರುಗಿಸಿದ್ದಾರೆ.
ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ,ಉಪವಿಭಾಗ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ಬೆಳ್ಳಾರೆಯ ಗ್ರಾಮ ಪಂಚಾಯತ್ ಕಟ್ಟಡದ ರಾಜೀವ ಗಾಂಧೀ ಸೇವಾ ಕೇಂದ್ರದಲ್ಲಿ ನಡೆಯಿತು. ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅದೀಕ್ಷಕ ಹರೀಶ್ ಜಿ...
ಕಾಸರಗೋಡು ಜಾಲ್ಸೂರು ರಸ್ತೆಯ ಮುರೂರು ಬಳಿ ರಸ್ತೆ ಹೊಂಡಬಿದ್ದು ವಾಹನ ಸಂಚಾರ ತೊಂದರೆಯಾಗಿತ್ತು. ಇದೀಗ ಮರ ಸಾಗಾಟದ ಲಾರಿಯ ಚಕ್ರ ಹೂತು ಹೋಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ಕೂಡ ರಸ್ತೆಯಲ್ಲಿ ಗುಂಡಿ ಬಿದ್ದು ನೀರು ಒರತೆ ಬರುತ್ತಿದ್ದು ಘನ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ವತಿಯಿಂದ ಆಗಸ್ಟ್ 02 ಶುಕ್ರವಾರದಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯ ಇಲ್ಲಿ ಪತ್ರಿಕಾ ದಿನಾಚರಣೆ, ತರಬೇತಿ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.ಬೆಳಿಗ್ಗೆ 11:00 ಗಂಟೆಯಿಂದ ಮದ್ಯಾಹ್ನ 1:00 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಪ್ರೊಬೇಷನರಿ ಐಎಎಸ್ ಅಧಿಕಾರಿಗಳಾದ ಶ್ರವಣ್ ಕುಮಾರ್...
ಆಗಸ್ಟ್ 1: ಸುಳ್ಯ ತಾಲೂಕಿನಮುರುಳ್ಯ ಸಮಹಾದಿ ಮಸೀದಿಯ ತಡೆಗೋಡೆ ಕುಸಿದು, ಪಕ್ಕದ ಮಹಮ್ಮದ್ ರಾಗಿಪೇಟೆ ಯವರ ಮನೆಯ ಮೇಲೆ ಬಿದ್ದು ಮನೆಯು ಭಾಗಶಃ ಹಾನಿಯಾಗಿದ್ದು, ಇಂದು ಸುಳ್ಯ ಶಾಸಕಿಯಾದ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಪರಿಶೀಲಿಸಿದರು,ಸಮಹಾದಿ ಮಸೀದಿ ಸಮಿತಿಯ ಅಧ್ಯಕ್ಷರಾದ ಸಾದಿಕ್ ಸಮಾಹಾದಿ, ಕೋಶಾಧಿಕಾರಿ ಉಮ್ಮರ್ ಫಾರೂಕ್ ಸಮಿತಿ ಸದಸ್ಯರಾದ ಸಾಬುಕುಂಞಿ ಹುದೇರಿ,ಪಿ.ಎಂ ಅಬ್ದುಲ್...
ಆಗಸ್ಟ್ 1: ಸುಳ್ಯ ತಾಲೂಕಿನಮುರುಳ್ಯ ಸಮಹಾದಿ ಮಸೀದಿಯ ತಡೆಗೋಡೆ ಕುಸಿದು, ಪಕ್ಕದ ಮಹಮ್ಮದ್ ರಾಗಿಪೇಟೆ ಯವರ ಮನೆಯ ಮೇಲೆ ಬಿದ್ದು ಮನೆಯು ಭಾಗಶಃ ಹಾನಿಯಾಗಿದ್ದು, ಇಂದು ಸುಳ್ಯ ಶಾಸಕಿಯಾದ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಪರಿಶೀಲಿಸಿದರು, ಸಮಹಾದಿ ಮಸೀದಿ ಸಮಿತಿಯ ಅಧ್ಯಕ್ಷರಾದ ಸಾದಿಕ್ ಸಮಾಹಾದಿ, ಕೋಶಾಧಿಕಾರಿ ಉಮ್ಮರ್ ಫಾರೂಕ್ ಸಮಿತಿ ಸದಸ್ಯರಾದ ಸಾಬುಕುಂಞಿ ಹುದೇರಿ,ಪಿ.ಎಂ...
ಸುಳ್ಯ ತಾಲೂಕಿನಾಧ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಈ ಹಿನ್ನಲೆಯಲ್ಲಿ ಹಾನಿಗಳಾದ ಕೆಲ ಗ್ರಾಮಗಳಿಗೆಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು . ಕಲ್ಲುಗುಂಡಿ ಮತ್ತು ತೊಡಿಕಾನ ಭಾಗದಲ್ಲಿ ಬರೆ ಜರಿದು ಹಾನಿಯಾದ ಸ್ಥಳಗಳಿಗೆ ಭೇಟಿಮಾಡಿದರು.ಈ ಸಂದರ್ಭದಲ್ಲಿ ಆರಂತೋಡು ಗ್ರಾಮಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ. ಪಿ.ಡಿ.ಓ.ಜಯಪ್ರಕಾಶ್ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ...
Loading posts...
All posts loaded
No more posts