- Saturday
- November 23rd, 2024
" ಅಭಿನಯ ಎಂಬುದು ಒಂದು ಸುಂದರ ಪರಿಕಲ್ಪನೆ " ಎಂಬ ಧ್ಯೇಯ ವಾಕ್ಯದೊಂದಿಗೆ 25 ಜುಲೈ 2024 ಗುರುವಾರ ಗುತ್ತಿಗಾರಿನಲ್ಲಿ ವಿದ್ಯಾರ್ಥಿಗಳ ಅಭಿನಯ ರಂಗ ಶಿಕ್ಷಣ ತರಗತಿಗಳು ಪ್ರಾರಂಭಗೊಳ್ಳಲಿದೆ. ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದ, ರಂಗ ಭೂಮಿಯ ಹಲವು ಪ್ರಕಾರಗಳು ಹಾಗೂ ಸ್ಪಷ್ಟ ಮಾತುಗಾರಿಕೆ, ಸ್ಪಷ್ಟ ಉಚ್ಚಾರಣೆ, ವೇದಿಕೆ ಧೈರ್ಯ, ರಂಗ...
ಏನೆಕಲ್ಲು ಗ್ರಾಮದ ದೇವರಹಳ್ಳಿ ದೊಡ್ಡಮನೆ ಲಿಂಗಪ್ಪ ಗೌಡ(ಜಯರಾಮ ಮಾಣಿಬೈಲು) ಎಂಬುವವರು ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರಿಗೆ 64 ವರ್ಷ ವಯಸ್ಸಾಗಿತ್ತು.ಇವರು ದೇವರಹಳ್ಳಿಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು. ಅಲ್ಲದೇ ಮಾಣಿಬೈಲು ಕುಟುಂಬದ ಊರಿನ ದೈವದ ಪೂಜಾರಿಯಾಗಿ ಸೇವೆ ಮಾಡಿದ್ದರು.ಮೃತರು ಪತ್ನಿ, ಓರ್ವ ಪುತ್ರ, ಸಹೋದರ-ಸಹೋದರಿಯರು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಹರಿಹರ ಪಲ್ಲತ್ತಡ್ಕ ಕರಂಗಲ್ಲು ರಸ್ತೆಯ ಮುಳ್ಳುಬಾಗಿಲು ಬಳಿ ತೆರಳುವ ಸಂದರ್ಭದಲ್ಲಿ ಬೈಕ್ ಸವಾರನ ಮೇಲೆ ಕಡವೆಯೊಂದು ಹಾರಿದ ಘಟನೆ ಇಂದು ರಾತ್ರಿ ನಡೆದಿದ್ದು, ಬೈಕ್ ಬಿದ್ದು ಜಖಂಗೊಂಡಿದ್ದು, ಸವಾರನ ಕಾಲಿಗೆ ಸ್ವಲ್ಪ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮೆಸ್ಕಾಂ ಸಿಬ್ಬಂದಿ ಜಯಪ್ರಕಾಶ್ ಕಜ್ಜೋಡಿ ಚಲಾಯಿಸುತ್ತಿದ್ದ ಬೈಕ್ ನ ಎದುರು ಭಾಗ ಜಖಂಗೊಂಡಿದ್ದು , ಅವರ ಕಾಲಿಗೂ ಸ್ವಲ್ಪ...
ದೇವಚಳ್ಳ ಗ್ರಾಮದ ಜಬಳೆ -- ಬಾಜಿನಡ್ಕ ಕಾಂಕ್ರೀಟ್ ರಸ್ತೆ ಯನ್ನು ಮಾಜಿ ಪಂಚಾಯತ್ ಅಧ್ಯಕ್ಷರಾದ ನಾರಾಯಣ ಬಾಳೆತೋಟ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಶ್ರೀಪತಿ ಭಟ್ ಚಳ್ಳ ದೀಪ ಬೆಳಗಿಸಿದರುಹುಕ್ರಪ್ಪ ಬಾಜಿನಡ್ಕ ತೆಂಗಿನಕಾಯಿ ಒಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಹೇಮನಾಥ ಕೊಡ್ತುಗುಳಿ, ದೇವಿಪ್ರಸಾದ್ ಸುಳ್ಳಿ, ಉದಯ ಟೈಲರ್, ಬೆಳ್ಳಿಯಪ್ಪ ಮಾಸ್ಟರ್...
ಗೌಡರ ಯುವ ಸೇವಾ ಸಂಘ ಸುಳ್ಯ ಇದರ ತರುಣ ಘಟಕದ ಸಭೆಯು ಜು.22ರಂದು ಸುಳ್ಯ ಶ್ರೀವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ನಡೆಯಿತು.ತರುಣ ಘಟಕದ ನೂತನ ಅಧ್ಯಕ್ಷರಾಗಿ ಪ್ರೀತಮ್ ಡಿ.ಕೆ. , ಪ್ರಧಾನ ಕಾರ್ಯದರ್ಶಿ ಯಾಗಿ ಹೇಮಂತ್ ನಾರ್ಕೋಡು ಹಾಗೂ ಕೋಶಾಧಿಕಾರಿಯಾಗಿ ರೂಪೇಶ್ ಪೂಜಾರಿಮನೆ ಆಯ್ಕೆಯಾದರು.
ಸುಳ್ಯದ ಕ್ಲಿನಿಕ್ ನಲ್ಲಿ ಉತ್ಪತ್ತಿಯಾಗುವ ಕಸವನ್ನು ಎಸೆದ ವೈದ್ಯರೊಬ್ಬರಿಗೆ ಪಟ್ಟಣ ಪಂಚಾಯತ್ ದಂಡನೆ ವಿಧಿಸಿದೆ. ಗಾಂಧಿನಗರ ಶಿವಂ ಕ್ಲಿನಿಕ್ ಎಂಬ ಚಿಕಿತ್ಸಾಲಯದವರು ಉತ್ಪತಿ ಯಾಗುವ ತ್ಯಾಜ್ಯವನ್ನು ಮತ್ತು ಸಿರಿಂಜ್ ಸಹಿತ ಕಸವನ್ನು ರಸ್ತೆ ಬದಿ ಎಸೆದಿರುವುದಕ್ಕೆ ಸುಳ್ಯ ಪಟ್ಟಣ ಪಂಚಾಯತ್ ರೂ.1000 ದಂಡನೆ ವಿಧಿಸಿ ಅವರಿಂದಲೇ ವಿಲೇವಾರಿ ಮಾಡಿಸಿದೆ.
ವಿದ್ಯುತ್ ಲೈನ್ ನ ಕಂಬಗಳು ಮುರಿದು ಬಿದ್ದಾಗ ತುರ್ತು ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ಬಿಲ್ ನಲ್ಲಿ ಮೊದಲಿಗಿಂತ ಕಡಿತ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇಲಾಖೆ ಸ್ಪಂದಿಸಿಲ್ಲವೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಕಾಮಗಾರಿ ನಡೆಸದೇ ಮುಷ್ಕರ ನಡೆಸಲು ನಿರ್ಧರಿಸಿತ್ತು. ಇಂದು ಸುಬ್ರಹ್ಮಣ್ಯದಲ್ಲಿ ನಡೆದ ಜನ ಸಂಪರ್ಕ...
ಸುಳ್ಯಕ್ಕೆ 33ಕೆ.ವಿ. ವಿದ್ಯುತ್ ಲೈನ್ ಹಾದು ಬರುವ ಕನಕಮಜಲು ಗ್ರಾಮದ ಪಂಜಿಗುಂಡಿ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತುರ್ತಾಗಿ ತೆರವುಗೊಳಿಸುವ ಹಿನ್ನೆಲೆಯಲ್ಲಿ ಜು. 24 ಬುಧವಾರ ದಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11ಕೆ.ವಿ ಫೀಡರ್ ಗಳಾದ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ,...
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಾದ ನಂತರದ ಯಾವುದೇ ಗಲಭೆಗಳಲ್ಲಿ ನಾವು ಭಾಗಿಯಾಗಿರುವುದಿಲ್ಲ. ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು13 ಮಂದಿ ಯುವಕರು ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಜು.22ರಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಕಮಲಾಕ್ಷ, ಅರುಣ್ ರೈ, ನಂದಕುಮಾರ್, ಹರೀಶ್ ಬಾಳಿಲ, ಪದ್ಮನಾಭ ತಡಗಜೆ, ಪ್ರಶಾಂತ್, ಆನಂದ ಯು.,ಧರ್ಮಪಾಲ, ಚಿದಾನಂದ ಬಾಳಿಲ, ಡಿಪಿನ್ ಎಡಮಂಗಲ, ಶಿವಾನಂದ,...
ರಾಷ್ಟ್ರೀಯ ಶಿಕ್ಷಣ ನೀತಿ (NEP) ಒಂದು ದೇಶದ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಗೆ ಸಾರ್ವತ್ರಿಕವಾಗಿ ಹರಡುವ ನೀತಿ ಕಾರ್ಯಕ್ರಮ- ಡಾ. ಉಜ್ವಲ್ ಯು.ಜೆಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ತೃತೀಯ ವರ್ಷದ ವಿದ್ಯಾರ್ಥಿಗಳಿಂದ ೨೦೨೪ನೇಸಾಲಿನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ, “ಮಿನಿಪ್ರಾಜೆಕ್ಟ್ ಎಕ್ಸ್ಪೋ–೨೦೨೪” ಜುಂ. ೨೩ರಂದು ನಡೆಯಿತು.ಪ್ರದರ್ಶನದ ಉದ್ಘಾಟನೆಯನ್ನು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಹಾಗೂ ಕಂಪ್ಯೂಟರ್ ಸೈನ್ಸ್ &...
Loading posts...
All posts loaded
No more posts