- Friday
- November 22nd, 2024
ಕಡಬದಿಂದ ಮರ್ದಾಳ, ಪಂಜ,ಬಳ್ಪ, ಕಮಿಲ, ಗುತ್ತಿಗಾರು ಹಾಲೆಮಜಲು ರಸ್ತೆಯ ಮಧ್ಯೆ ಅಮೂಲ್ಯ ದಾಖಲೆಗಳು ಇದ್ದ ಪರ್ಸ್ ಕಳೆದು ಹೋಗಿರುತ್ತದೆ. ಸಿಕ್ಕಿದವರು ಈ ನಂಬರಿಗೆ ಸಂಪರ್ಕಿಸಬೇಕಾಗಿ ವಿನಂತಿ. ಮೋಹನ ಕೆ.ಜಿ. ಕಡೆಪಾಲ94800419917022214949
ಜಾಗತಿಕವಾಗಿ ವಿಶ್ವದಾದ್ಯಂತ ಜುಲೈ 28ರಂದು “ವಿಶ್ವ ಹೆಪಟೈಟಿಸ್ ದಿನ” ಎಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷವಾದ ಜಾಗ್ರತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ, ವರ್ಷವೊಂದರಲ್ಲಿ ಹೆಪಟೈಟಿಸ್...
ನಿಮ್ಮೂರಿನ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಸಮಸ್ಯೆಗಳಿದ್ದರೇ, ಟವರ್ ನ ಸಮಸ್ಯೆಗಳಿದ್ದಲ್ಲಿ ನಿಮ್ಮ ಊರಿನ ಟವರ್ ಇರುವ ಸ್ಥಳದ ಮಾಹಿತಿಯನ್ನು ಶಾಸಕರ ಕಛೇರಿ ನಂಬರ್ 9972034089 ಸಂಖ್ಯೆಗೆ 3 ದಿನದ ಒಳಗಾಗಿ ಕಳುಹಿಸಿಕೊಡಿ.
ಸಂಸದರ ಉಪಸ್ಥಿತಿಯಲ್ಲಿ ಸಂಸದರ ಕಛೇರಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಿ.ಎಸ್.ಎನ್.ಎಲ್, ಟವರ್ ಗಳ ಸಮಸ್ಯೆಗಳನ್ನು ಸರಿಪಡಿಸುವಂತೆ ಮತ್ತು ನೂತನ ಟವರ್ ಗಳ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಮುಗಿಸಿ ಜನತೆಗೆ ಉಪಯೋಗಕ್ಕೆ ಬರುವಂತೆ ಅಧಿಕಾರಿಗಳೊಂದಿಗೆ ಶಾಸಕಿ ಭಾಗೀರಥಿ ಮುರುಳ್ಯ ಚರ್ಚೆ ನಡೆಸಿದರು. ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕಾರ್ಗಿಲ್ ದಿನಾಚರಣೆ ಹಾಗೂ ಯೋಧರಿಗೆ ಸನ್ಮಾನ ಸಮಾರಂಭ ಸುಬ್ರಹ್ಮಣ್ಯ ಜುಲೈ 27: ಸುಬ್ರಹ್ಮಣ್ಯ ರೋಟರಿ ಕ್ಲಬ್, ರೈತ ಯುವಕ ಮಂಡಲ ಏನೆಕಲ್ಲು, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಹಾಗೂ ಇನ್ನರ್ವೀಲ್ ಕ್ಲಬ್ ಸುಬ್ರಹ್ಮಣ್ಯ ಇವುಗಳ ಜಂಟಿ ಆಶಯದಲ್ಲಿ ಏನೇಕಲ್ಲಿನ ರೈತ ಯುವಕ ಮಂಡಲದ ಸಭಾಭವನದಲ್ಲಿ ಕಾರ್ಗಿಲ್ ವಿಜಯ ದಿವಸದ ದಿನಾಚರಣೆ...
ಸುಬ್ರಹ್ಮಣ್ಯ ಜುಲೈ 27 : ಸುಬ್ರಹ್ಮಣ್ಯ ಕುಮಾರಧಾರ ಪಕ್ಕದ ಪರ್ವತಮುಖಿಯಲ್ಲಿ ಬೃಹದಾಕಾರದ ಮರ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿ ಮೇಲೆ ಬಿದ್ದಿದ್ದು ವಿದ್ಯುತ್ ಕಂಬ ತುಂಡಾಗಿ ಕಂಬಗಳು ಕೂಡ ಮುರಿದು ಬಿದ್ದು ಬೆಳಗಿನಿಂದ ತುಂಬಾ ಹೊತ್ತು ಸಂಚಾರಕ್ಕೆ ತೊಡಕುಂಟಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಮೆಸ್ಕಾಂ ಅಧಿಕಾರಿಗಳ ತಂಡ ಹಾಗೂ ಅರಣ್ಯ ಅಧಿಕಾರಿಗಳ ತಂಡವು ಮರವನ್ನು ತೆರವುಗೊಳಿಸುವಲ್ಲಿ ಹಾಗೂ ವಿದ್ಯುತ್ ಕಂಬಗಳನ್ನು...
ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು,ಗ್ರಾಮ ಗೌಡ ಸಮಿತಿ, ಮಹಿಳಾ ಘಟಕ ಮತ್ತು ತರುಣ ಘಟಕ ಅರಂತೋಡು ಇವುಗಳ ಆಶ್ರಯದಲ್ಲಿ ಜು.28ರಂದು ಅರಂತೋಡಿನ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ಆಟಿ ಗೌಜಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ.ಅಧ್ಯಕ್ಷ ಕೇಶವ ಆಡ್ತಲೆ ನೆರವೇರಿಸಲಿದ್ದಾರೆ. ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಸಮಿತಿ...
ಮಡಪಾಡಿ ಗ್ರಾಮದ ತಳೂರು ಹೂವಪ್ಪ ಗೌಡರ ಧರ್ಮಪತ್ನಿ ಕಮಲ ರವರು ಅಲ್ಪ ಕಾಲದ ಅಸೌಖ್ಯದಿಂದ ಕಳೆದ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಇವರು ಪತಿ ಹೂವಪ್ಪ ಗೌಡ ತಳೂರು,ಮಗ ರವಿ ತಳೂರು, ಮಗಳು ಶ್ರೀಮತಿ ರಶ್ಮಿ ಹಾಗೂ ಕುಟುಂಬಸ್ಥರನ್ನು ಅಗಲಿರುತ್ತಾರೆ.
ಮಳೆ ಬಂತೆಂದರೇ ಸಾಕು ವಿದ್ಯುತ್ ಮಾಯಾವಾಗುತ್ತದೆ. ಅದರ ಜತೆಗೆ ಬಿಎಸ್ಎನ್ ಎಲ್ ನೆಟ್ವರ್ಕ್ ಕೂಡ ಮಾಯವಾಗುತ್ತದೆ. ಸುಳ್ಯ ತಾಲೂಕಿನ ಗ್ರಾಮಂತರ ಪ್ರದೇಶಗಳಲ್ಲಿ ಪರ್ಯಾಯ ನೆಟ್ವರ್ಕ್ ಇಲ್ಲದೇ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದ್ದ ಟವರ್ ಗಳನ್ನೇ ಸರಿಯಾಗಿ ಮೈಂಟೆನೆನ್ಸ್ ಮಾಡುತ್ತಿಲ್ಲ, ಇದೀಗ ತಾಲೂಕಿನಾದ್ಯಂತ ಹೊಸ ಟವರ್ ನಿರ್ಮಾಣ ಮಾಡಿದೆ. ಟವರ್ ನಿರ್ಮಾಣಗೊಂಡರೂ ಇದರ ಕಾರ್ಯಾರಂಭಕ್ಕೆ ಅಧಿಕಾರಿಗಳು ಮೀನಾಮೇಷ...
ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ಶಾಸ್ತಾವು ಯುವಕ ಮಂಡಲ(ರಿ.) ರೆಂಜಾಳ ಮರ್ಕಂಜ ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ,ಯೋಧ ನಮನ ಕಾರ್ಯಕ್ರಮವು ಜು.26 ರಂದು ವಿನಾಯಕ ಸಭಾಭವನ ರೆಂಜಾಳದ ಲ್ಲಿ ನಡೆಯಿತು.ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ನಿವೃತ್ತ ಸೈನಿಕ ಉಮೇಶ್ ಮಣಿಯಾಣಿ ನಿಂತಿಕಲ್ಲು ಭಾಗವಹಿಸಿ ಕಾರ್ಗಿಲ್ ಯುದ್ಧದ ಸಮಯದಲ್ಲಿನ ತಮ್ಮ ಅನುಭವವನ್ನು...
Loading posts...
All posts loaded
No more posts