Ad Widget

ಆಟೋದಲ್ಲಿ ಮರೆತು ಹೋದ ಮೊಬೈಲ್, ಪ್ರಾಮಾಣಿಕವಾಗಿ ಹಿಂದುರುಗಿಸಿದ ಆಟೋ ಚಾಲಕ ನಾರಾಯಣ್

ಸುಳ್ಯ: ಸುಳ್ಯ ನಗರದಲ್ಲಿ ಬಾಡಿಗೆ ರಿಕ್ಷಾ ಓಡಿಸುತ್ತಿರುವ ಆಟೋ ಚಾಲಕ ತನ್ನ ಆಟೋ ರಿಕ್ಷಾ ದಲ್ಲಿ ಅಜ್ಜಾವರ ಗ್ರಾಮದ ಮಹಿಳೆಯೊಬ್ಬರು ಮೊಬೈಲ್ ಅನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದು ಇದನ್ನು ಗಮನಿಸಿದ  ವೀರ ಕೇಸರಿ ಆಟೋ ರಿಕ್ಷಾ ಪಾರ್ಕಿಂಗ್ ಚಾಲಕರಾದ ನಾರಾಯಣ ಎಸ್  ಎಂ ಪ್ರಾಮಾಣಿಕವಾಗಿ ಹಿಂದುರುಗಿಸಿದ್ದು ಇವರು  ಬಿಎಂಎಸ್ ಸದಸ್ಯರು ಹಾಗು ಭಾಜಪದ ಸುಳ್ಯ ನಗರ...

ಸಂಪರ್ಕ ಕಡಿತದ ಭೀತಿಯಲ್ಲಿ ಕಮಿಲ ಮೊಗ್ರ ರಸ್ತೆ

ಗುತ್ತಿಗಾರು ಗ್ರಾಮದ ಕಮಿಲ ಮೊಗ್ರ  ರಸ್ತೆಯ  ಕಾಂತಿಲ ಚೈಪೆ  ಎಂಬಲ್ಲಿ ಹೊಳೆಬದಿ ರಸ್ತೆ ಕುಸಿದಿದೆ. ಸುಮಾರು 40 ಅಡಿಗಳಷ್ಟು ಕೆಳಗಿನ ತನಕ ಕುಸಿದಿದ್ದು ಅಪಾಯ ಆಹ್ವಾನಿಸುತ್ತಿದೆ.  ಇಲ್ಲಿ  ನಿರಂತರ ಅನೇಕ  ವಾಹನಗಳು ಹಾದು ಹೋಗುತ್ತಿದ್ದು ಅನಾಹುತ ಸಂಭವಿಸುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.
Ad Widget

ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕದ್ರವ್ಯ ಚಟುವಟಿಕೆಗಳ ಕುರಿತು ಲೋಕಸಭೆಯ ಗಮನಸೆಳೆದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ದೆಹಲಿ: ಸಂಸತ್ತು ನಿಯಮ 377ರ ಪ್ರಕಾರ ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಸಂಸದರಿಗೆ ತಮ್ಮ ವಿಷಯಗಳನ್ನು ಸದನದ ಮುಂದಿಡುವ ಅವಕಾಶವಿದ್ದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರೆ ಮೀರಿರುವ ಮಾದಕದ್ರವ್ಯ ವ್ಯಸನೆ ಮತ್ತು ಮಾರಾಟದ ಚಟುವಟಿಗೆಗಳ' ಕುರಿತು ಸದನದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ."ಪ್ರತಿ ತಿಂಗಳ ಮಾಧ್ಯಮಗಳ...

ಅಜ್ಜಾವರ : ಮನೆಯ ಮೇಲೆ ಮುರಿದು ಬಿದ್ದ ಮರ – ತಪ್ಪಿದ ಅನಾಹುತ

ಅಜ್ಜಾವರ ಗ್ರಾಮದ ಅಡ್ಪoಗಾಯ ಮಾವಿನಪಳ್ಳ ಎಂಬಲ್ಲಿ ಮಹಿಳೆಯೋರ್ವರ ಮನೆಗೆ ಮರ ಬಿದ್ದು ಹಾನಿಯಾದ ಘಟನೆ ಇಂದು ವರದಿಯಾಗಿದೆ.   ಮೊನ್ನಿ ಎಂಬುವವರ  ಮನೆ ಮೇಲೆ ಮರ  ಬಿದ್ದು ಮನೆಯ ಹಂಚುಗಳು ಮತ್ತು ಅಲ್ಪ ಪ್ರಮಾಣದಲ್ಲಿ ಗೋಡೆಗಳಿಗೂ ಕೂಡ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

ಸುಳ್ಯ : ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರಿಗೆ ಬೀಳ್ಕೊಡುಗೆ –  ಸನ್ಮಾನ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ ಈ ರವರ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭವು ಸುಳ್ಯದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  ಜು 30 ರಂದು ನಡೆಯಿತು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಬೆಳಗಿ ಉದ್ಘಾಟಿಸಿ, ನಿವೃತ್ತರಾದ ಬಿಇಓ ರಮೇಶ್ ಅವರಿಗೆ ಶುಭಹಾರೈಸಿದರು. ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಮಂಜುನಾಥ್ ಜಿ ವಹಿಸಿದ್ದರು.  ನಿವೃತ್ತ...

ಕಾಟಿಪಳ್ಳ ತೋಟಗಳಿಗೆ ನುಗ್ಗಿದ ಪಯಸ್ವಿನಿ – ಮನೆಗೆ ನೀರು ನುಗ್ಗುವ ಆತಂಕ !

ಅಜ್ಜಾವರ: ಅಜ್ಜಾವರ ಗ್ರಾಮದ ಕಾಟಿಪಳ್ಳದಲ್ಲಿ ಸುಳ್ಯ ಜೀವನದಿ ಪಯಸ್ವಿನಿ ಒಡಲು ತುಂಬಿ ಹರಿಯುತ್ತಿದ್ದು ಇದೀಗ ಪಕ್ಕದಲ್ಲಿನ ತೋಟಗಳಿಗೆ ನೀರು ನುಗ್ಗಿದ ಘಟನೆ ವರದಿಯಾಗಿದೆ. ಕಾಟಿಪಳ್ಳ ನಿವಾಸಿಗಳಾದ ವಿಶ್ವನಾಥ ರಾವ್ , ರಾಮ್ ಪ್ರಸಾದ್ , ಹಾಗೂ ದಿನೇಶ್ ಎಂಬುವವರ ತೋಟಗಳಿಗೆ ನೀರು ನುಗ್ಗಿದ್ದು ಇದೇ ರೀತಿಯಲ್ಲಿ ಮಳೆ ಮುಂದುವರೆದರೆ ನಾಲ್ಕು ವರ್ಷಗಳ ಹಿಂದಿನಂತೆ ಈ ಭಾರಿಯು...

ಕವನ : ಒಳ್ಳೆಯತನವೇ ಗೆಲ್ಲುವುದಿಲ್ಲಿ, ಒಳ್ಳೆಯ ಮನಕೆ ಒಳಿತಾಗುವುದಿಲ್ಲಿ…

ಒಳ್ಳೆಯ ಗುಣಕೆ, ಒಳ್ಳೆಯ ತನಕೆ ಬೆಲೆಯೇ ಇಲ್ಲ ಅನಿಸುವುದಿಲ್ಲಿ, ಕೆಲವೊಮ್ಮೆ ಅನಿಸುವುದಿಲ್ಲಿ...ಆದರೆ ಒಳ್ಳೆಯತನವೇ, ಒಳ್ಳೆಯ ಗುಣವೇ ಕೈ ಹಿಡಿಯುವುದಿಲ್ಲಿ, ಪ್ರತಿಕ್ಷಣವೂ ಕೈ ಹಿಡಿಯುವುದಿಲ್ಲಿ...ನಾವು ಮಾಡಿದ ಪಾಪ-ಪುಣ್ಯಗಳೇ ನಮ್ಮ ಬದುಕಿನ ಲೆಕ್ಕಾಚಾರಗಳು, ಹುಟ್ಟು-ಸಾವಿನ ಮಧ್ಯದಲ್ಲೇ ನಮಗೆ ಸಿಗುವವು ನಮ್ಮ ಕರ್ಮದ ಪ್ರತಿಫಲಗಳು...ಮೇಲ್ನೋಟಕ್ಕೆ ಎಲ್ಲರೂ ಒಳ್ಳೆಯವರಂತೆ ಕಾಣಿಸುವರಿಲ್ಲಿ, ಮನದೊಳಗಿನ ಹುಳುಕನ್ನು ಬಲ್ಲವರಾರು ಅಲ್ಲವೇ ಇಲ್ಲಿ...!?ಹಾಗೆಂದು ಎಲ್ಲರೂ ಇಲ್ಲಿ ಕೆಟ್ಟವರಲ್ಲ,...

ದಂಡಕಜೆ ಮನೆಯ ಹಿಂಬದಿಯ ಗೋಡೆ ಕುಸಿತ , ಅದೃಷ್ಟವಶಾತ್ ಪಾರು.

ಅತೀವವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಹಿಂಬದಿಯ ಗೋಡೆ ಕುಸಿತಗೊಂಡು ಮನೆಯವರು ಕೂದಲೆಳೆಯ ಅಂತರದಲ್ಲಿ ಭಾರೀ ಅಪಾಯದಿಂದ ಪಾರಾಗಿರುವ ಘಟನೆ ಇದೀಗ ವರದಿಯಾಗಿದೆ.ಕಲ್ಲುಗುಂಡಿ ದಂಡಕಜೆಯ ಮಧುಸೂದನ ಎಂಬವರ ಮನೆಯ ಹಿಂಬದಿಯಲ್ಲಿ ಗೋಡೆ ಕುಸಿತಗೊಂಡಿದ್ದು, ಅಡುಗೆ ಕೋಣೆಗೆ ಸಂಪೂರ್ಣ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಮಾಜಿ ಗ್ರಾ.ಪಂ ಅಧ್ಯಕ್ಷರು ಮತ್ತು ವಿಪತ್ತು ನಿರ್ವಹಣಾ ತಂಡ ಮತ್ತು ಸ್ಥಳೀಯರು ತೆರಳಿದ್ದು...

ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ – ನೂತನ ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ, ಕಾರ್ಯದರ್ಶಿಯಾಗಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಪುಷ್ಪರಾಜ್ ಶೆಟ್ಟಿ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದಯಾನಂದ ಕಲ್ನಾರ್ ವಹಿಸಿದ್ದರು. ಸಭೆಯ ಕಾರ್ಯಕಲಾಪಗಳ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷತೆಗೆ ಲೋಕೇಶ್ ಪೆರ್ಲಂಪಾಡಿ ಮತ್ತು ಪ್ರಜ್ಞಾ ಎಸ್. ನಾರಾಯಣ್ ಸ್ಪರ್ಧಿಸಿದ್ದರು.‌ ಅಧ್ಯಕ್ಷತೆಗೆ ಚುನಾವಣೆ ನಡೆದು ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ...

ಕನಕಮಜಲು:  ಸರಣಿ ಕಳ್ಳತನದ ಬಗ್ಗೆ ಸ್ವರ್ಣ ಮಹಿಳಾ ಮಂಡಲದಿಂದ ಮಹಿಳಾ ಆಯೋಗಕ್ಕೆ ದೂರು

2023ರಿಂದ ಇದುವರೆಗೆ ಕನಕಮಜಲಿನಲ್ಲಿ ನಡೆದ ಸರಣಿ ಕಳ್ಳತನದ ಬಗ್ಗೆ ಸ್ವರ್ಣ ಮಹಿಳಾ ಮಂಡಲದಿಂದ ಕರ್ನಾಟಕ ಮಹಿಳಾ ಆಯೋಗಕ್ಕೆ ಹಾಗೂ ದ.ಕ ಎಸ್.ಪಿ ಯವರಿಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರವಾಗಿ ಅಪರಾಧಿಗಳನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗ ಪೋಲಿಸ್ ವರಿಷ್ಠಾಧಿಕಾರಿಯವರ ಮೂಲಕ ಸುಳ್ಯ ಠಾಣೆಗೆ ಶೀಘ್ರವಾಗಿ ತನಿಖೆ ನಡೆಸುವಂತೆ ಆದೇಶಿಸಿದೆ ಎಂದು ತಿಳಿದು...
Loading posts...

All posts loaded

No more posts

error: Content is protected !!