Ad Widget

ಪಂಜಿಕಲ್ಲು : ನವಜಾತ ಶಿಶು ಪತ್ತೆ

ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿರುವ ಪಂಜಿಕಲ್ಲು ಶಾಲೆಯ ಜಗಲಿಯಲ್ಲಿ ನವಜಾತ ಶಿಶುವೊಂದನ್ನು ಬಿಟ್ಟು ಪರಾರಿಯಾಗಿದ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಹತ್ತಿರದ ಮನೆಯವರಿಗೆ ಮಗು ಅಳುವ ಧ್ವನಿ ಕೇಳಿ ಬಂದಿದ್ದರಿಂದ ವಿಷಯ ಗೊತ್ತಾಗಿದೆ. ನವಜಾತ ಶಿಶು ಹೆಣ್ಣು ಮಗುವೆಂದು ಹೇಳಲಾಗುತ್ತಿದೆ. ಇದೀಗ ಮಗುವನ್ನು ಆದೂರು ಪೋಲೀಸರು ತೆಗೆದುಕೊಂಡು ಹೋಗಿದ್ದು ತನಿಖೆ ನಡೆಸುತ್ತಿದ್ದಾರೆ.

ಕೌಡಿಚಾರ್ ನಲ್ಲಿ ಮತ್ತೆ ಮರ ಬಿದ್ದು ಹಾನಿ – ವಿದ್ಯುತ್ ವಿಳಂಬ ಸಾಧ್ಯತೆ

33 ಕೆವಿ ವಿದ್ಯುತ್ ಲೈನ್ ಗೆ ಇಂದು ಬೆಳಿಗ್ಗೆ ಕದಿಕಡ್ಕದಲ್ಲಿ ಬೃಹತ್ ಮರ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮಧ್ಯಾಹ್ನ ವೇಳೆಗೆ ಲೈನ್ ದುರಸ್ತಿಗೊಂಡಿತಾದರೂ ಮತ್ತೆ ಕೌಡಿಚಾರ್ ನಲ್ಲಿ ಮರ ಬಿದ್ದು ಪರಿಣಾಮವಾಗಿ ವಿದ್ಯುತ್ ಲೈನ್ ಗೆ ಹಾನಿಯಾಗಿದ್ದು ಸಂಜೆ ವೇಳೆಗೆ ಸರಿಯಾಗಬಹುದೆಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
Ad Widget

ಜಾಲ್ಸೂರು : ಮರ ಬಿದ್ದು 33 ಕೆವಿ ಲೈನ್ ಗೆ ಹಾನಿ – ವಿದ್ಯುತ್ ಕಡಿತ

ಜಾಲ್ಸೂರಿನ ಕದಿಕಡ್ಕದಲ್ಲಿ ಇಂದು ಬೆಳಿಗ್ಗೆ ಬೃಹತ್ ಮರ ಬಿದ್ದ ಪರಿಣಾಮ 33 ಕೆ.ವಿ. ವಿದ್ಯುತ್ ಲೈನ್ ಗೆ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಲೈನ್ ಮೇಲೆ ಬಿದ್ದ ಪರಿಣಾಮವಾಗಿ ವಿದ್ಯುತ್ ಲೈನ್ ಹಾಗೂ ಇನ್ಸೂಲೇಟರ್ ಗಳಿಗೆ ಹಾನಿಯಾಗಿದ್ದು ಮೆಸ್ಕಾಂ ಸಿಬ್ಬಂದಿಗಳು ಬಂದು ದುರಸ್ತಿ ಕಾರ್ಯ ಮಾಡುತ್ತಿದ್ದು ಮಧ್ಯಾಹ್ನದ ವೇಳೆಗೆ ಸರಿಯಾಗಬಹುದೆಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ
ಉಚಿತ ಮನೆ ಮದ್ದು ತರಬೇತಿ  ಶಿಬಿರ

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಪಾದೆ , ನರಿಮೊಗರು, ಪುತ್ತೂರು -ಇದರ ಆಶ್ರಯದಲ್ಲಿ ಹಾಗೂ ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ  ಇದರ ಸಹಯೋಗದಲ್ಲಿ, ಅರೋಗ್ಯ ಭಾರತಿಯ ರಾಷ್ಟೀಯ ಯೋಗ ಪ್ರಮುಖ್ ಹಾಗೂ ಆಯುರ್ವೇದ ವೈದ್ಯ ಡಾ . ಟಿ . ಎನ್ . ಮಂಜುನಾಥ್ ಮತ್ತು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಯುರ್ವೇದ...

ಅರಂತೋಡು : ಬಿಳಿಯಾರು ತಿರುವಿನಲ್ಲಿ  ಕಾರು ಅಪಘಾತ

ಬೆಂಗಳೂರಿನಿಂದ ಅಡೂರು ಕಡೆಗೆ  ತೆರಳುತ್ತಿದ್ದ  ಕಾರೊಂದು (ka51MO 2420)ಅರಂತೋಡು ಸಮೀಪದ ಬಿಳಿಯಾರು ತಿರುವಿನಲ್ಲಿ  ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿ ಮೇಲೆ ಹತ್ತಿದ್ದು  ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಏರ್ ಬ್ಯಾಗ್ ತೆರೆದಿದ್ದರಿಂದ  ಚಾಲಕ ಮತ್ತು ಸಹಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಬಲಭಾಗದ...

ಸುಳ್ಯದ ಕುಂ..ಕುಂ.. ಫ್ಯಾಷನ್ ನಲ್ಲಿ ರೈನ್‌ಕೋಟ್ ಮೇಳಶೇ.15 ರಿಂದ 50 ರವರೆಗೆ ಭರ್ಜರಿ ರಿಯಾಯಿತಿ

ಜು.31ರೊಳಗೆ ಮಾನ್ಸೂನ್ ಮೇಳ ಮುಂದುವರಿಕೆಸುಳ್ಯದ ಮುಖ್ಯ ರಸ್ತೆಯಲ್ಲಿರುವ ದ್ವಾರಕಾ ಹೋಟೆಲ್‌ನ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕುಂ..ಕುಂ.. ಪ್ಯಾಷನ್‌ನಲ್ಲಿ ರೈನ್ ಕೋಟ್‌ಗಳಿಗೆ ಭರ್ಜರಿ ಆಫರ್ ನೀಡಲಾಗುತ್ತಿದೆ. ಪ್ರತಿಷ್ಠಿತ ಕಂಪೆನಿಗಳಾದ ಝೀಲ್, ರಿಯಲ್, ಡಕ್‌ಬ್ಯಾಗ್, ಬಾಸ್ ಸೇರಿದಂತೆ ಆಲ್ ಬ್ರಾಂಡೆಂಡ್ ರೈನ್‌ಕೋಟು ಲಭ್ಯವಿದ್ದು ಖರೀದಿಯಲ್ಲಿ ಗ್ರಾಹಕಕರಿಗೆ ಶೇ. ೧೫ ರಿಂದ ಶೇ.೫೦ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.ಮಾನ್ಸೂನ್ ಮೇಳ : ಕುಂ..ಕುಂ… ಫ್ಯಾಶನ್‌ನಲ್ಲಿ...

ಆಲೆಟ್ಟಿ ಸೊಸೈಟಿ ನಿವೃತ್ತ ಸಿ.ಇ.ಒ ರಾಮಣ್ಣ ಗೌಡ ಕುಂಚಡ್ಕ ನಿಧನ

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಹಿರಿಯರು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ರಾಮಣ್ಣ ಗೌಡ ಕುಂಚಡ್ಕ ರವರು ಇಂದು ಬೆಳಗ್ಗೆ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಚಂದ್ರಾವತಿ ಹಾಗೂ ಓರ್ವ ಪುತ್ರ. ಶಿವಪ್ರಸಾದ್, ಓರ್ವ ಪುತ್ರಿ ಮಹಾಲಕ್ಷ್ಮಿ ಮತ್ತು ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.

ವಿವೇಕಾನಂದ ವೃತ್ತದ ಬಳಿ ಚಿಮ್ಮುತಿದೆ ನೀರು – ವಾಹನ ಸವಾರರಿಗೆ ತೊಂದರೆ

ಸುಳ್ಯದ ವಿವೇಕಾನಂದ ವೃತ್ತದ ಬಳಿಯಲ್ಲಿ ಕುಡಿಯುವ ನೀರು ಸರಬರಾಜಿನ ಪೈಪ್ ಒಡೆದು ನೀರು ಚಿಮ್ಮುತ್ತಿದ್ದು ಈ ಮಾರ್ಗವಾಗಿ ಸಾಗುವ ದ್ವಿಚಕ್ರ ಸವಾರರಿಗೆ, ಕಾಲ್ನಡಿಗೆಯಲ್ಲಿ ಸಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕಿದೆ ಸ್ಥಳೀಯಾಡಳಿತ

ರಸ್ತೆ ಬದಿ ತ್ಯಾಜ್ಯ ಎಸೆದ ಇಬ್ಬರಿಗೆ ದಂಡ ವಿಧಿಸಿದ ಅಜ್ಜಾವರ ಪಂಚಾಯತ್

ಅಜ್ಜಾವರ : ಸುಳ್ಯ ಮಂಡೆಕೋಲು ಅಡೂರು ಅಂತರ್ ರಾಜ್ಯ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಯಮಾಲ ಎ.ಕೆ. ರವರು ಪ್ರತ್ಯೇಕವಾಗಿ ಇಬ್ಬರಿಗೆ ದಂಡ ವಿಧಿಸಿದ ಘಟನೆ ವರದಿಯಾಗಿದೆ. ಸುಳ್ಯ ಅಡೂರು ಸಂಪರ್ಕಿತ ರಸ್ತೆಯು ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು ಇಲ್ಲಿ ವಾಹನದಲ್ಲಿ ಆಗಮಿಸಿ...

ಜು.13 : ಪೆರುವಾಜೆ ಪ್ರ.ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಭೆ

ಕಳೆದ 33 ವರ್ಷಗಳಿಂದ ಶಿಕ್ಷಣ ಸೇವೆ ನೀಡುತ್ತಿರುವ ಪೆರುವಾಜೆಯ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಭೆ ಜು.13 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ವಾಸುದೇವ ಪೆರುವಾಜೆ ಹಾಗೂ ಕಾರ್ಯದರ್ಶಿ ರಜನೀಶ್ ಸವಣೂರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!