- Sunday
- November 24th, 2024
ಸಂಪಾಜೆ: ಸಂಪಾಜೆ ಗ್ರಾಮದ ರಾಜರಾಂಪುರ ಕಾಲನಿಯಲ್ಲಿ ಮನೆ ಬಳಿ ಭಾರಿ ಗಾತ್ರದ ಗುಂಡಿ ನಿರ್ಮಾಣ ಆಗಿದ್ದು ಗುಂಡಿಯ ಒಳಗಡೆ ದೂರದಿಂದ ಭೂಮಿ ಒಳಗೆ ಹರಿದು ಬರುತ್ತಿರುವ ನೀರು ಕಾಣಿಸುತ್ತಿದ್ದು ಸದ್ಯ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜನಪ್ರತಿನಿಧಿಗಳು ಭೇಟಿ ನೀಡಿ ಇದೀಗ ಮನೆ ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಿಂದ ಸ್ಥಳಾಂತರ...
ನೀರಿನ ಮಟ್ಟವನ್ನು ವೀಕ್ಷಿಸಲು ತೆರಳಿದ್ದವರಿಗೆ ಕಾಣಿಸಿದ ಮೃತದೇಹ ಕುಮಾರಧಾರ ನದಿಯ ನೆರೆ ನೀರಿನಲ್ಲಿ ಆನೆಯ ಮೃತದೇಹ ತೇಲಿ ಬಂದ ಘಟನೆ ಸೋಮವಾರ ತಡರಾತ್ರಿ ನಡೆದಿತ್ತು.ನಿನ್ನೆ(ಜು.15) ಮುಂಜಾನೆಯಿಂದ ಭಾರೀ ಮಳೆಯಾಗುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಕುಮಾರಧಾರ ನದಿಯ ನೀರಿನ ಮಟ್ಟವನ್ನು ವೀಕ್ಷಿಸಲು ತಡರಾತ್ರಿ ಮನ್ಮಥ ಬಟ್ಟೋಡಿ ಮತ್ತಿತರರು ತೆರಳಿದ ಸಂದರ್ಭದಲ್ಲಿ ನೆರೆ ನೀರಿನಲ್ಲಿ ತೇಲಿ...
ಉಷ್ಣವಲಯದ ದೇಶಗಳಲ್ಲಿ, ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮತ್ತು ಗಂಟು ಗಂಟುಗಳನ್ನು ಕಾಡುವ ಇನ್ನೊಂದು ಖಾಯಿಲೆ ಎಂದರೆ ಚಿಕುನ್‍ಗುನ್ಯಾ ಜ್ವರ. ಡೆಂಘೀ ಜ್ವರವನ್ನು ಹರಡುವ ಏಡಿಸ್ ಎಜೆಪ್ಟಿ ಮತ್ತು ಏಡಿಸ್ ಆಲ್ಬೋಪಿಕ್ಟಸ್ ಎಂಬ ಸೊಳ್ಳೆಗಳೇ ಚಿಕುನ್ ಗುನ್ಯಾರೋಗವನ್ನೂ ಹರಡುತ್ತವೆ. ‘ಚಿಕುನ್ ಗುನ್ಯಾ’ ಎಂಬ ವೈರಸ್‍ನ ಸೋಂಕಿನಿಂದ ಬರುವ ಈ ಜ್ವರ, ಸಾಂಕ್ರಾಮಿಕ ರೋಗವಾಗಿದ್ದು, ಏಡಿಸ್ ಸೊಳ್ಳೆಗಳ ಮುಖಾಂತರ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜು. 16 ರಂದು ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ...
ಅಜ್ಜಾವರ: ಅಜ್ಜಾವರ ಗ್ರಾಮದ ಮೇನಾಲ , ಮೇದಿನಡ್ಕ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಕೃಷಿಗಳು ನಾಶವಾಗಿದ್ದು ಇದೀಗ ಕೃಷಿಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮೇನಾಲದ ರಾಜೇಶ್ ಶೆಟ್ಟಿ ಮೇನಾಲ , ರಾಮಕೃಷ್ಣ ರೈ ಮೇನಾಲ ವಿನೋದ್ ಶೆಟ್ಟಿ ಮೇನಾಲ, ಅದ್ರಮ ಡೇಲ್ಮ್, ಪ್ರಸಾದ್ ರೈ ಮೇನಾಲ , ಸುಧಮಾನಿ ಶೆಟ್ಟಿ, ದಿ.ಸುಧೀರ್ ರೈ ಮೇನಾಲ, ಹರಿಪ್ರಸಾದ್ ಸುಲಾಯ...
ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ ಮುಂದುವರಿದಿರುವ ಹಿನ್ನಲೆಯಲ್ಲಿ ನಾಳೆಯು ದಿನಾಂಕ 16-07-2024 ರಂದು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶಿಸಿದ್ದು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ದಿನಾಂಕ:...
ಯಾತ್ರಾರ್ಥಿಗಳಿಗೆ ತೀರ್ಥಸ್ನಾನ ನೆರವೇರಿಸಲು ಪರ್ಯಾಯ ವ್ಯವಸ್ಥೆ ಇಂದು(ಜು.15) ಮುಂಜಾನೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಸ್ನಾನಘಟ್ಟ ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ. ಯಾತ್ರಾರ್ಥಿಗಳಿಗೆ ತೀರ್ಥಸ್ನಾನ ನೆರವೇರಿಸಲು ನದಿ ನೀರನ್ನು ಡ್ರಮ್ ಮೂಲಕ ಸಂಗ್ರಹಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳು ನದಿಪಾತ್ರಕ್ಕೆ ತೆರಳದಂತೆ ಕ್ಷೇತ್ರದ ವತಿಯಿಂದ...
ಕೆರೆಗೆ ಕಾಲು ಜಾರಿ ಬಿದ್ದು ವಯೋವೃದ್ಧೆಯೋರ್ವರು ಮೃತಪಟ್ಟ ಘಟನೆ ಜಾಲ್ಕೂರು ಗ್ರಾಮದ ಸೋಣಂಗೇರಿಯಲ್ಲಿ ಜು.15ರಂದು ಬೆಳಿಗ್ಗೆ ಸಂಭವಿಸಿದೆ.ಸೋಣಂಗೇರಿ ದಿ.ಮಂಜಪ್ಪ ಶೆಟ್ಟಿ ಅವರ ಧರ್ಮಪತ್ನಿ ಮಾನಕ್ಕರವರ ಶವ ಅವರು ಬೆಳಿಗ್ಗೆ ತಮ್ಮ ತೋಟದಲ್ಲಿ ಕೆರೆಗೆ ಬಿದ್ದಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರಿಗೆ 82 ವರ್ಷ ವಯಸ್ಸಾಗಿತ್ತು.ಮೃತರು ಇಬ್ಬರು ಪುತ್ರಿಯರಾದ ಜಯಶ್ರೀ, ಮಂಜುಳ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.
ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ನಡೆದ ವಾಹನ ಅಪಘಾತವೊಂದರ ಬಗ್ಗೆ ಸಾಕ್ಷಿ ಹೇಳಲು ಬಂದಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಐವರ್ನಾಡಿನ ವೆಂಕಟ್ರಮಣ ಎಂದು ಗುರುತಿಸಲಾಗಿದೆ. ಕರಿಯಮೂಲೆಯಲ್ಲಿ ಶನಿವಾರ ನಡೆದ ಪಿಕಪ್ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಆಗಮಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Loading posts...
All posts loaded
No more posts