- Tuesday
- May 13th, 2025

ಸಂಪಾಜೆ ಗ್ರಾಮದ ಪಡುಮಜಲು ಮನೆಯವರಾಗಿದ್ದು, ಮಂಗಳೂರಿನಲ್ಲಿ ನೆಲೆಸಿರುವ ಅವಿನ್ ಎಂಬವರ ಪತ್ನಿ ಶಿಲ್ಪಾ ಅಸೌಖ್ಯದಿಂದಾಗಿ ಇಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 32 ವರ್ಷ ವಯಸ್ಸಾಗಿತ್ತು.ಅವರು ಕೆಲ ಸಮಯಗಳಿಂದ ಅಸೌಖ್ಯತೆಯಿಂದ ಬಳಲುತ್ತಿದ್ದರೆನ್ನಲಾಗಿದೆ.ಕೊಲ್ಲಮೊಗ್ರು ಗ್ರಾಮದ ಆಲ್ಕಬೆ ಚೆನ್ನಪ್ಪ ಗೌಡ ಎಂಬವರ ಪುತ್ರಿ. ಇವರ ಪತಿ ಅವಿನ್ ಮಂಗಳೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಲ್ಪಾರವರು ನರ್ಸ್ ಕೆಲಸ ಮಾಡುತ್ತಿದ್ದರು.ಮೃತರು...

ಕುಂಬರ್ಚೋಡು ಮಾಣಿ ಮೈಸೂರು ಹೆದ್ದಾರಿ ಬಳಿ ರಸ್ತೆಗೆ ವಾಲಿಕೊಂಡು ಬೀಳುವ ಸ್ಥಿತಿಯಲ್ಲಿ ಅಪಾಯಕಾರಿ ಮರವೊಂದು ಅಪಾಯದ ಮುನ್ಸೂಚನೆ ನೀಡುತ್ತಿದೆ. ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಮರವು ವಾಹನಗಳ ಮೇಲೆ ಬಿದ್ದರೆ ಜೀವ ಹಾನಿ ಸಂಭವಿಸುವ ಸಂದರ್ಭ ಇದ್ದು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಮರವನ್ನು ತೆರೆಗುಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವಾರ್ಷಿಕ ಮಹಾಸಭೆ ಮತ್ತು ಮಾಹಿತಿ ಕಾರ್ಯಾಗಾರವು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ 16.07.2024 ಮಂಗಳವಾರದಂದು ಜರುಗಿತು.ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಜಿಲ್ಲಾ ಸ್ಕೌಟ್ ಆಯುಕ್ತರಾದ ಮಹಮ್ಮದ್ ತುಂಬೆ ಉದ್ಘಾಟಿಸಿ, ಪಂಜ ಸ್ಥಳೀಯ ಸಂಸ್ಥೆಯ ಕಾರ್ಯಕ್ರಮಗಳ...

ಭಾರೀ ಮಳೆ ಸುರಿಯುತ್ತಿರುವ ಕಾರಣ ಸೋಣಂಗೇರಿ ಅಂಗನವಾಡಿ ಕೇಂದ್ರವು ಮಳೆ ನೀರಿನಿಂದ ಜಲಾವೃತಗೊಂಡಿದೆ. ಅಂಗನವಾಡಿ ಕೇಂದ್ರವು ತಗ್ಗುಪ್ರದೇಶದಲ್ಲಿರುವುದರಿಂದ ನೀರು ಆವರಿಸಿದೆ. ರಸ್ತೆ ಮತ್ತು ಪರಿಸರದ ಮೇಲ್ಭಾಗದಿಂದ ಹರಿದು ಬಂದ ನೀರು ಕಟ್ಟಡದ ಸುತ್ತ ಆವರಿಸಿ ಅಂಗನವಾಡಿಯ ಒಳ ಭಾಗಕ್ಕೆ ನೀರು ನುಗ್ಗಿ, ಪುಸ್ತಕ ಪರಿಕರಗಳು, ಟೇಬಲ್, ಕುರ್ಚಿ ನೆನೆದಿದ್ದು, ಸ್ಥಳೀಯರಾದ ಸತ್ಯ ಶಾಂತಿ ತ್ಯಾಗ...

ಸುಬ್ರಹ್ಮಣ್ಯ ಜುಲೈ 18: “ತಂದೆ ತಾಯಿಯರು ತಮ್ಮ ಮಕ್ಕಳು ಒಳ್ಳೆಯವರಾಗಬೇಕು, ಭವಿಷ್ಯದಲ್ಲಿ ಉಜ್ವಲ ಭವಿಷ್ಯವನ್ನು ಕಾಣಬೇಕು, ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಬೇಕೆಂದು, ಆಶಿಸಿ ಅವರನ್ನು ಪೋಷಿಸಿ, ಸಾಕುತ್ತಾರೆ. ಆದರೆ ಕೆಲವು ಮಕ್ಕಳು ಹಿಂದಿನದನ್ನೆಲ್ಲ ಮರೆತು ತಂದೆ ತಾಯಿಯರನ್ನು ಗೌರವಿಸದೆ ಅವರನ್ನ ಮೂಲೆಗುಂಪು ಮಾಡುತ್ತಿರುವುದು ವಿಷಾದನೀಯ. ಮನುಷ್ಯರು ಮನುಷ್ಯರಂತೆ ವರ್ತಿಸಬೇಕು ವಿನಃ ಪ್ರಾಣಿಗಳಂತೆ ವರ್ತಿಸಬಾರದು. ಇದು...
ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ, ಸ್ನೇಹಿತರ ಕಲಾ ಸಂಘ ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಜಂಟಿ ಆಶ್ರಯದಲ್ಲಿ ಜು.21ರಂದು ಆದಿತ್ಯವಾರ ಆಟಿದ ಪೊಲಬು ಮತ್ತು ಕೆಸರುಗದ್ದೆ ಕ್ರೀಡಾಕೂಟ ಬೆಳ್ಳಾರೆ ಸಮೀಪದ ಪಡ್ಪು ಕೃಷಿಕ ಶೇಷಪ್ಪ ಗೌಡರ ಮನೆಯಲ್ಲಿ ನಡೆಯಲಿದೆ. ಆ ದಿನ ಬೆಳಿಗ್ಗೆ ರಂಗ ಕಲಾವಿದ, ಚಲನಚಿತ್ರ ನಟ ರವಿ ರಾಮಕುಂಜಕಾರ್ಯಕ್ರಮವನ್ನು ಉದ್ಘಾಟೀಸಲಿದ್ದಾರೆ....

ದೇವಚಳ್ಳ ಗ್ರಾಮದ ವಾಲ್ತಾಜೆಯ ಮೂರು ಕಡೆಗಳಲ್ಲಿ ಬಹು ಬೇಡಿಕೆಯ ಒಟ್ಟು ನೂರು ಮೀಟರ್ ಗಳ ವಾಲ್ತಾಜೆ ಉಳ್ಳಾಕಳು ರಸ್ತೆಯ ಕಾಂಕ್ರೀಟ್ ಕಾಮಗಾರಿ ಗ್ರಾಮಪಂಚಾಯತ್ ಹಾಗೂ ವಿಶೇಷ ಅನುದಾನದೊಂದಿಗೆ ಪೂರ್ಣಗೊಂಡು ಅದರ ಉದ್ಘಾಟನಾ ಕಾರ್ಯಕ್ರಮ ಜು.17dರಂದು ನೆರವೇರಿತು. ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಗಳನ್ನು ಗ್ರಾಮದ ಹಿರಿಯರಾದ ಶ್ರೀ ಮತಿ ಧರ್ಮಾವತಿ ಮುಂಡೋಡಿ, ಶ್ರೀ ಮಹಾಬಲ ಮುಂಡೋಡಿ, ಶ್ರೀ...

ಸುಳ್ಯದ ಶ್ರೀರಾಂ ಪೇಟೆಯ ಗೋಪಿಕಾ ಬಿಲ್ಡಿಂಗ್ ನಲ್ಲಿ ಅಪೋಲೋ ಹಾಸ್ಪಿಟಲ್ ಗ್ರೂಪ್ ನ ಅಪೋಲೋ ಫಾರ್ಮಸಿ ಇಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೋ.ಯೋಗಿತಾ ಗೋಪಿನಾಥ್ ಉದ್ಘಾಟಿಸಿದರು. ಗೋಪಿಕಾ ಬಿಲ್ಡಿಂಗ್ ನ ಮಾಲಕರಾದ ಎಂ.ಪಿ.ಗೋಪಿನಾಥ್, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲರಾದ ಎಂ.ಬಿ.ಸದಾಶಿವ , ಪ್ರಣಾವ್ ಗೋಪಿನಾಥ್ ಉಪಸ್ಥಿತರಿದ್ದರು.ಸಂಸ್ಥೆಯ ವತಿಯಿಂದ ಎಂ.ಪಿ.ಗೋಪಿನಾಥ್, ಯೋಗಿತಾ...

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಹತ್ತು ಅಡಿ ಆಳದ ಗುಂಡಿಗೆ ಪಲ್ಟಿಯಾಗಿ ಬಿದ್ದ ಘಟನೆ ಪೆರಾಜೆ ಗ್ರಾಮದ ದಾಸರಹಿತ್ಲುವಿನಲ್ಲಿ ಜು.18ರಂದು ಬೆಳಿಗ್ಗೆ ಸಂಭವಿಸಿದೆ.ಕಾಸರಗೋಡಿನಿಂದ ಮಡಿಕೇರಿಗೆ ಮದುವೆ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ಕಾಸರಗೋಡು ಮೂಲದ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.

ಸುಳ್ಯ: ಭಾರೀ ಮಳೆ ಮುಂದುವರಿದಿರು ಕಾರಣ ದ.ಕ.ಜಿಲ್ಲೆಯ 5 ತಾಲೂಕುಗಳ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 18ರಂದು ಗುರುವಾರ ರಜೆ ಘೋಷಣೆ ಮಾಡಲಾಗಿದೆ. ಸುಳ್ಯ, ಪುತ್ತೂರು, ಕಡಬ,ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿಪೂರ್ವ ಕಾಲೇಜು (12ನೇ ತರಗತಿವರೆಗೆ) ರಜೆ ಘೋಷಣೆ ಮಾಡಿ...

All posts loaded
No more posts