Ad Widget

ಉಬರಡ್ಕ : ಮಂಜಿಕಾನ – ಬದನಕಜೆ ರಸ್ತೆ ಜಲಾವೃತ

ಉಬರಡ್ಕ ಗ್ರಾಮದ ಮಂಜಿಕಾನ ದಿಂದ ಬದನೆಕಜೆಗೆ ಹೋಗುವ ರಸ್ತೆ ಜಲಾವೃತಗೊಂಡು ಬ್ಲಾಕ್ ಆಗಿದೆ. ತೋಡೊಂದು ಹರಿಯುತ್ತಿದ್ದ ನೀರು ವಿಪರೀತವಾಗಿದ್ದರಿಂದ ರಸ್ತೆ ಬ್ಲಾಕ್ ಆಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ಸಣ್ಣದಾದ ಕಾಲು ಸೇತುವೆ ಮಾಡಲಾಗಿದ್ದು, ಇದನ್ನು ಬಳಸಿ ಈ ಭಾಗದ ಜನರು ಸಂಚರಿಸುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ : ಹಿಂದಿ ಚಲನಚಿತ್ರ ನಟಿ ಏಕ್ತಾ ಕಪೂರ್ ಭೇಟಿ

ಸುಬ್ರಹ್ಮಣ್ಯ: ಹಿಂದಿ ಚಲನಚಿತ್ರ ರಂಗದ ನಿರ್ದೇಶಕಿ ಹಾಗೂ ನಟಿ ಏಕ್ತ ಕಪೂರ್ ಜು.18 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಆಗಮಿಸಿ ಆಶ್ಲೇಷ ಬಲಿ, ನಾಗ ಪ್ರತಿಷ್ಠಾ ಪೂಜೆಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಅವರೊಂದಿಗೆ ಮುಂಬೈ ರವಿ ಕೋಟಿಯನ್ ಜೊತೆಗಿದ್ದರು.ದೇವಸ್ಥಾನದ ವತಿಯಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್ ಹಾಗೂ ಕೃಷ್ಣಮೂರ್ತಿ ಭಟ್ ಬರಮಾಡಿಕೊಂಡರು.
Ad Widget

ನಾಳೆ (ಜು.19) ದ.ಕ.ಜಿಲ್ಲೆಯ 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ದಿನಾಂಕ 19-07-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು (12ನೇ ತರಗತಿವರೆಗೆ) ದಿನಾಂಕ 19-07-2024 ರಂದು...

ತುಳು ಒಕ್ಕೂಟ ಕುವೈತ್ ವತಿಯಿಂದ ಅಜ್ಜಾವರದಲ್ಲಿ ವಿದ್ಯಾರ್ಥಿ ವೇತನ ವಿತರಣೆ

ಅಜ್ಜಾವರ ಸರಕಾರಿ ಪ್ರೌಢಶಾಲೆಯಯಲ್ಲಿ ೨೦೨೪ರಲ್ಲಿ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ  ಅತೀ ಹೆಚ್ಚು ಅಂಕ ಗಳಿಸಿದ ಫಾತಿಮತ್ ಜುಮೈಲಾ ಮೇನಾಲ ಮತ್ತು ವೈಷ್ಣವಿ ಮೇನಾಲ ರವರಿಗೆ ತುಳು ಒಕ್ಕೂಟ ಕುವೈತ್ ವತಿಯಿಂದ ರೂ.೧೦ ಸಾವಿರದಂತೆ ವಿದ್ಯಾರ್ಥಿ ವೇತನ ವಿತರಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಗೋಪಿನಾಥ್ ಮೆತ್ತಡ್ಕ ವಹಿಸಿದ್ದರು. ತುಳು ಒಕ್ಕೂಟ ಕುವೈತ್...

ಜು. 21: ಬೆಳ್ಳಾರೆಯಲ್ಲಿ ಆಟಿದ ಪೊಲಬು ಮತ್ತು ಕೆಸರುಗದ್ದೆ ಕ್ರೀಡಾಕೂಟ

ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ,ಸ್ನೇಹಿತರ ಕಲಾ ಸಂಘ ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಜಂಟಿ ಆಶ್ರಯದಲ್ಲಿ ಜು.21ರಂದು ಆದಿತ್ಯವಾರ ಆಟಿದ ಪೊಲಬು ಮತ್ತು ಕೆಸರುಗದ್ದೆ ಕ್ರೀಡಾಕೂಟ ಬೆಳ್ಳಾರೆ ಸಮೀಪದ ಪಡ್ಪು ಕೃಷಿಕ ಶೇಷಪ್ಪ ಗೌಡರ ಮನೆಯಲ್ಲಿ ನಡೆಯಲಿದೆ. ಆ ದಿನ ಬೆಳಿಗ್ಗೆ  ರಂಗ ಕಲಾವಿದ, ಚಲನಚಿತ್ರ ನಟ ರವಿ ರಾಮಕುಂಜ ಕಾರ್ಯಕ್ರಮವನ್ನು ಉದ್ಘಾಟೀಸಲಿದ್ದಾರೆ....

ಅಜ್ಜಾವರ : ತುಳು ಒಕ್ಕೂಟ ಕುವೈತ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಅಜ್ಜಾವರ ಸರಕಾರಿ ಪ್ರೌಢಶಾಲೆಯಯಲ್ಲಿ ೨೦೨೪ರಲ್ಲಿ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಫಾತಿಮತ್ ಜುಮೈಲಾ ಮೇನಾಲ ಮತ್ತು ವೈಷ್ಣವಿ ಮೇನಾಲ ರವರಿಗೆ ತುಳು ಒಕ್ಕೂಟ ಕುವೈತ್ ವತಿಯಿಂದ ರೂ.೧೦ ಸಾವಿರದಂತೆ ವಿದ್ಯಾರ್ಥಿ ವೇತನ ವಿತರಿಸಿ, ಗೌರವಿಸಲಾಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಗೋಪಿನಾಥ್ ಮೆತ್ತಡ್ಕ ವಹಿಸಿದ್ದರು. ತುಳು ಒಕ್ಕೂಟ ಕುವೈತ್ ಇದರ...

ಮೇನಾಲ : ಬೈಕ್‌ – ಸ್ಕೂಟಿ ಅಪಘಾತ, ಗಾಯಾಳು ಮಂಗಳೂರಿನ ಆಸ್ಪತ್ರೆಗೆ ಶಿಪ್ಟ್

ಅಜ್ಜಾವರ ಗ್ರಾಮದ ಮೇನಾಲದಲ್ಲಿ ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತವಾಗಿರುವ ಘಟನೆ ಇಂದು ವರದಿಯಾಗಿದೆ. ಅಜ್ಜಾವರ ಕುಡೆಂಬಿ ಸಮಂತ್ ಎಂಬವರು ಕೆಲಸ ಬಿಟ್ಟು ಮನೆಯ ಕಡೆ ಹೋಗುತ್ತಿದ್ದು ಅಜ್ಜಾವರ ಕಡೆಯಿಂದ ಬರುತ್ತಿದ್ದ ಚಿತ್ರಕುಮಾರ್ ಎಂಬವರ ಸ್ಕೂಟಿ ಮೇನಾಲದಲ್ಲಿ ಡಿಕ್ಕಿಯಾಯಿತು. ಪರಿಣಾಮ ಸಮಂತ್ ರ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಚಿತ್ರಕುಮಾರ್ ರ ಕೈಗೂ ಸಣ್ಣಪುಟ್ಟ ಗಾಯವಾಗಿದೆ. ಸಮಂತ್...

ವಳಲಂಬೆ : ಕಾರು ಜೀಪು ಮಧ್ಯೆ ಅಪಘಾತ – ಕಾರಿನಲ್ಲಿದ್ದವರಿಗೆ ಗಾಯ

ಗುತ್ತಿಗಾರು ಕಡೆಗೆ ಬರುತ್ತಿದ್ದ ಪ್ರಸಾದ್ ಆಯಿಲ್ ಮಿಲ್ ಅವರ ಕಾರು ಹಾಗೂ ಎಲಿಮಲೆ ಕಡೆಗೆ ಹೋಗುತ್ತಿದ್ದ ಅರಂತೋಡಿನ ಜೀಪು ಮಧ್ಯೆ ಅಪಘಾತವಾದ ಘಟನೆ ವಳಲಂಬೆ ಸಮೀಪದ ಕಾಜಿಮಡ್ಕದಲ್ಲಿ ಇಂದು ನಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿ ಓರ್ವರಿಗೆ ಗಾಯಗಳಾಗಿದೆ.

ಮಂಗಳೂರು ಮಡಿಕೇರಿ ರಸ್ತೆ ಸಂಚಾರ ರಾತ್ರಿ ವೇಳೆ ಬಂದ್

ಇಂದು ರಾತ್ರಿಯಿಂದ ಜುಲೈ 22ರ  ಬೆಳಿಗ್ಗೆ 6 ಗಂಟೆ ವರೆಗೆ ರಾತ್ರಿ ಎಂಟು ಗಂಟೆಯಿಂದ  ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇದ. ಕೊಡಗು ಜಿಲ್ಲಾಧಿಕಾರಿಗಳ ಆದೇಶಕರ್ತೋಜಿ ಗ್ರಾಮ ಬಳಿ ಹೆದ್ದಾರಿ ದುರಸ್ತಿ ಕಾರ್ಯ ಹಿನ್ನಲೆ ಮಂಗಳೂರು ಮಡಿಕೇರಿ ಹೆದ್ದಾರಿ ಬಂದ್ ಮಾಡಲಾಗುವುದು. ಇಂದು ರಾತ್ರಿ 8 ಗಂಟೆಯಿಂದ 22 ರ ಬೆಳಗ್ಗೆ 6 ಗಂಟೆವರೆಗೆಹೆದ್ದಾರಿ ಯಲ್ಲಿ ...

ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ನದಿ, ಜಲಪಾತಗಳ ಬಳಿ ಹುಚ್ಚಾಟ ಮಾಡದಿರಿ…

ಒಂದು ಕ್ಷಣದ ಖುಷಿಗಾಗಿ ಅಮೂಲ್ಯವಾದ ಪ್ರಾಣವನ್ನು ಅಪಾಯಕ್ಕೆ ಒಡ್ಡದಿರಿ...ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿ, ಚರಾಚರಗಳ ಉಳಿವಿಗೆ ಮಳೆ ಅತ್ಯಗತ್ಯ. ಆದರೆ ಮನುಷ್ಯರಾದ ನಾವುಗಳು ಇಂದು ನಮ್ಮ ಉಳಿವಿಗಾಗಿ ಸುರಿಯುವ ಮಳೆಯಲ್ಲಿಯೇ ಹುಚ್ಚಾಟ ಮಾಡಿ ನಮ್ಮ ಪ್ರಾಣಕ್ಕೆ ನಾವೇ ಕುತ್ತು ತಂದುಕೊಳ್ಳುತ್ತಿದ್ದೇವೆ.ಹೌದು, ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ನದಿ-ಜಲಪಾತ, ಹಳ್ಳ-ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ...
Loading posts...

All posts loaded

No more posts

error: Content is protected !!