Ad Widget

ಸುಳ್ಯ ದಸರಾ 2024 ಶ್ರೀ ಶಾರದಾಂಬಾ ಮಹಿಳಾ ಸಮಿತಿ ಸಭೆ

ಸುಳ್ಯ ದಸರಾ ಉತ್ಸವದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಶಾರದಾಂಬಾ ಮಹಿಳಾ ಸಮಿತಿಯ ಸಭೆ ಇಂದು ಬೂಡು ಶ್ರೀ ಭಗವತಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಮಹಿಳಾ ಸಮಿತಿಯ ಅಧ್ಯಕ್ಷೆ ಯಾದ ಶ್ರೀಮತಿ ಶಶಿಕಲಾ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಗೆ ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಮುಂದಿನ ಭಾನುವಾರ ನಡೆಯಲಿರುವ ಕ್ರೀಡಾ ದಸರಾದ ಅಂಗವಾಗಿ ನಡೆಯುವ...

ಸುಳ್ಯ ತಾಲೂಕು ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ವೀಣಾ ಕರ್ತವ್ಯಕ್ಕೆ ಹಾಜರು - ನಿಟ್ಟುಸಿರು ಬಿಟ್ಟ ಬಡ ಜನತೆ ಸುಳ್ಯ ಸರಕಾರಿ ಆಸ್ಪತ್ರೆಯ ಸ್ಟಾಪ್ ನರ್ಸ್ ಗಳ ಆರೋಪದಿಂದ ಬೇಸತ್ತು ಕರ್ತವ್ಯಕ್ಕೆ ಗೈರಾಗಿದ್ದ  ಪ್ರಸೂತಿ ತಜ್ಞೆಯಾಗಿರುವ ಡಾ. ವೀಣಾ ರವರು ಜು.16 ರಿಂದ ಸರಕಾರಿ ಆಸ್ಪತ್ರೆಗೆ ಕರ್ತವ್ಯಕ್ಕೆ ಮರು ಹಾಜರಾಗಿರುವುದಾಗಿ ತಿಳಿದುಬಂದಿದೆ.ತನ್ನ ಮೇಲೆ ಬಂದ ಆರೋಪದಿಂದ...
Ad Widget

ಜು.21 : ಗುರುಪೂರ್ಣಿಮಾ (ವ್ಯಾಸ ಪೂರ್ಣಿಮಾ) – ಈ ದಿನದ ಮಹತ್ವವೇನು?

ಯಾಂತ್ರಿಕೃತ ಬದುಕಿನಲ್ಲಿ ನೊಂದವರ ಮನಸ್ಸಿಗೆ ಮುದ, ನೆಮ್ಮದಿ ಶಾಂತಿ ಸಂತಸ ತರುವಲ್ಲಿ ಹಬ್ಬಗಳ ಪಾತ್ರ ಬಹಳ ಹಿರಿದಾಗಿದೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವೂ ಒಂದಲ್ಲ ಒಂದು ಹಬ್ಬ ಇರುವುದು ಬಹಳ ಸಂತಸದ ವಿಚಾರ. ಈ ಹಬ್ಬಗಳು ನಮ್ಮ ಜೀವನಕ್ಕೆ ನವಚೈತನ್ಯ, ಉಲ್ಲಾಸ, ಸಡಗರ ಮತ್ತು ಸಂಭ್ರಮವನ್ನು ತರುತ್ತದೆ. ಭಾರತದಲ್ಲಿ ನಾವು ವಿಶೇಷವಾಗಿ ನಾಲ್ಕು...

ಬಾಳಿಲ:ಬ್ಯಾಂಕ್ ಆಫ್ ಬರೋಡಾದಿಂದ ಕೊಡುಗೆ

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಕ್ ಆಫ್ ಬರೋಡಾ ಬೆಳ್ಳಾರೆ ಶಾಖೆಯ ವತಿಯಿಂದ ಬ್ಯಾಂಕಿನ 117ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಜು.20ರಂದು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ (CSR) ನಿಧಿಯಿಂದ ರೂ 10,000 ಮೌಲ್ಯದ (Ryak) ತೆರೆದ ಕಪಾಟನ್ನು ಕೊಡುಗೆಯಾಗಿ ನೀಡಿದರು. ಈ ಕೊಡುಗೆಯನ್ನು ಬೆಳ್ಳಾರೆ ಶಾಖೆಯ ಹಿರಿಯ ಅಧಿಕಾರಿಯಾಗಿರುವ ಶ್ರೀಮತಿ ಶುಭಶ್ರೀ ಅವರು...

ಕನಕಮಜಲು : ಬಾಲಕನಿಗೆ ಗುದ್ದಿದ ಓಮಿನಿ – ತಲೆಗೆ ಗಾಯ

ರಸ್ತೆ ದಾಟುತ್ತಿದ್ದ ಬಾಲಕನಿಗೆ ಓಮಿನಿ ಕಾರೊಂದು ಗುದ್ದಿದ ಘಟನೆ ಇಂದು ಸಂಜೆ ವರದಿಯಾಗಿದೆ. ಕನಕಮಜಲಿನ‌ಲ್ಲಿ ಅಜ್ಜಿ ಮನೆಗೆ ಬಂದಿದ್ದ  ಆಸಿಮ್ ರಸ್ತೆ ದಾಟುತ್ತಿದ್ದಾಗ ಪುತ್ತೂರು ಕಡೆಯಿಂದ  ಬಂದ ಓಮಿನಿ ಕಾರು ಢಿಕ್ಕಿಯಾಗಿದೆ. ತಲೆಗೆ ಸ್ವಲ್ಪ ಗಾಯಗೊಂಡಿರುವ ಬಾಲಕನಿಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕೃತಿ ವಿಕೋಪ

✍️ರವೂಫ್ ಪೈಂಬೆಚ್ಚಾಲ್ ಮಳೆರಾಯ ಹೇಳುತ್ತಾನೆಅಡೆತಡೆ ಇಲ್ಲದೆಹಿಂದೆಯೂ ನಾನು ಬಹಳಷ್ಟು ಸುರಿದಿದ್ದೆ.ಇಂದು ನೀವು ನನ್ನ ದಾರಿಗೆಅಡ್ಡವಾಗಿದ್ದೀರಿ.ನಾ ಹೇಗೆ ಚಲಿಸಲಿ. ನದಿ ಹೇಳುತ್ತಿದೆಹಿಂದೆಯೂ ನಾನುತುಂಬಿ ಹರಿಯುತ್ತಿದ್ದೆ.ಇಂದು ನೀವು ನನ್ನ ಒಡಲನ್ನುಕಟ್ಟಿಹಾಕಿದಿರಿ.ನಾ ಹೇಗೆ ಹರಿಯಲಿ? ಭೂಮಿತಾಯಿ ಹೇಳುತ್ತಾಳೆಹಿಂದೆ ನಾನು ಬಹಳಷ್ಟು ನೀರಹೀರುತ್ತಿದ್ದೆ.ಇಂದು ನೀವು ನನ್ನ ಬಾಯಿಗೆಕಾಂಕ್ರೀಟ್ ಹಾಕಿ ಮುಚ್ಚಿದಿರಿನಾನು ನೀರು ಸಂಗ್ರಹಿಸುತ್ತಿದ್ದಗದ್ದೆ,ಕೆರೆಗಳನ್ನೆಲ್ಲಾ ಮಣ್ಣುಹಾಕಿಸಮತಟ್ಟು ಮಾಡಿದ್ದೀರಿ.ನಾನೇನು ಮಾಡಲಿ. ಪರ್ವತ ಹೇಳುತ್ತಿದೆನಾನು ಯಾವುದೇ...

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಸಹಾಯಧನ ಹಸ್ತಾಂತರ

ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಸುಳ್ಯ ಶಾಖೆಯ ಸಕ್ರಿಯ ಸದಸ್ಯರಾದ ಪ್ರದ್ಯುಮ್ನ ಅವರ ಕೃಷಿ ಸ್ಥಳದಲ್ಲಿ ಕೆಲಸಗಾರರಾಗಿದ್ದ ಯೋಗೀಶ್ ಪಿ ಅವರ ಆಕಸ್ಮಿಕ ಮರಣ ಪರಿಹಾರವಾಗಿ ಸಹಾಯಧನದ ಮೊತ್ತ ರೂ.50,000/- (ರೂಪಾಯಿ ಐವತ್ತು ಸಾವಿರ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಜು 20ರಂದು ದಿ.‌ ಯೋಗೀಶ್ ಪಿ ರವರ...

ಕಂದ್ರಪ್ಪಾಡಿ : ಕನ್ನಡಕಜೆ ಎಂಬಲ್ಲಿ ಕಾಂಕ್ರೀಟೀಕರಣಕ್ಕೆ ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿ ಮಾಡುವಿರಾ?

ಹಳ್ಳಿಗಳ ಅಭಿವೃದ್ಧಿಗೆ ರಸ್ತೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ.‌ ಮಾವಿನಕಟ್ಟೆ ದೇವ ಕಂದ್ರಪ್ಪಾಡಿ ಮುಖಾಂತರ ಗುತ್ತಿಗಾರು ಸಂಪರ್ಕಿಸುವ ರಸ್ತೆಯ ಕನ್ನಡಕಜೆ ಎಂಬಲ್ಲಿ ರಸ್ತೆ ಎರಡು ವರ್ಷಗಳ ಹಿಂದೆ ಕಾಂಕ್ರೀಟಿಕರಣಗೊಂಡು ಅಭಿವೃದ್ದಿ ಕಂಡಿದೆ. ಆದರೇ ಅದರ ಮುಂದುವರಿದ ರಸ್ತೆಯು ಕೇವಲ 100 ಮೀ ನಷ್ಟು ಕಾಂಕ್ರಿಟೀಕರಣಗೊಳ್ಳಲು ಬಾಕಿ ಇದ್ದು ಅಭಿವೃದ್ಧಿಯ ಮಧ್ಯೆ ಕಪ್ಪು ಚುಕ್ಕೆಯಂತಿದೆ. ಕಳೆದ ಎರಡು...

ಬೆಳ್ಳಾರೆ ಟೌನ್‌ ರೋಟರಿ ಕ್ಲಬ್ಬಿಗೆ ನೂತನ ಸಾರಥ್ಯ

ಅಧ್ಯಕ್ಷರಾಗಿ ಚಂದ್ರಶೇಖರ ರೈ, ಕಾರ್ಯದರ್ಶಿ ಎ.ಕೆ.ಮಣಿಯಾಣಿ, ಕೋಶಾಧಿಕಾರಿಯಾಗಿ ಕೇಶವಮೂರ್ತಿ ಆಯ್ಕೆ 2024-25ನೇ ಸಾಲಿಗೆ ‌ಬೆಳ್ಳಾರೆ ಟೌನ್ ರೋಟರಿ ಕ್ಲಬ್ಬಿನ ಅಧ್ಯಕ್ಷರಾಗಿ ರೊ| ಚಂದ್ರಶೇಖರ ರೈ ಬಜನಿ, ಕಾರ್ಯದರ್ಶಿಯಾಗಿ ರೊ| ಎ.ಕೆ. ಮಣಿಯಾಣಿ, ಕೋಶಾಧಿಕಾರಿಯಾಗಿ ರೊ| ಕೇಶವಮೂರ್ತಿ, ನಿಕಟಪೂರ್ವಾಧ್ಯಕ್ಷರಾಗಿ ರೊ| ಶಶಿಧರ್‌, 25-26ರ ನಿಯೋಜಿತ ಅಧ್ಯಕ್ಷರಾಗಿ ರೊ| ವಿಶ್ವನಾಥ, ಸಾರ್ಜೆಂಟ್‌ ಅಟ್‌ ಆರ್ಮ್ಸ್‌ ಆಗಿ ರೊ| ಬಾಲಕೃಷ್ಣ...

ಕಾಂತಮಂಗಲ ಚರಂಡಿ ಅವ್ಯವಸ್ಥೆ –  ರಸ್ತೆಯಲ್ಲಿಯೇ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ

ಕಾಂತಮಂಗಲದ ಜೀಜಾಬಾಯಿ ವೃತ್ತದ ಬಳಿಯಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ನೀರೆಲ್ಲಾ ರಸ್ತೆಯಲ್ಲಿ ಹರಿಯುವಂತಾಗಿದೆ.  ಇಲ್ಲಿ ನಿರ್ಮಾಣ ಹಂತದಲ್ಲಿರುವ ಮರಾಠ ಕ್ಷತ್ರಿಯ ಸೇವಾ ಸಂಘದ ಕಟ್ಟಡ ನಿರ್ಮಾಣವಾಗುತ್ತಿದ್ದು ಚರಂಡಿಯನ್ನು ಮುಚ್ಚಲಾಗಿದೆ. ಇದರಿಂದ ನೀರೆಲ್ಲಾ ರಸ್ತೆಗೆ ಹರಿದು ಬರುತ್ತಿದ್ದು ಪಾದಚಾರಿಗಳು ಮತ್ತು ದ್ವಿಚಕ್ರ , ತ್ರಿಚಕ್ರ , ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.  ತಕ್ಷಣವೇ ಪಿಡಬ್ಲ್ಯೂಡಿ ಇಲಾಖೆ ಮತ್ತು ಗ್ರಾಮ ಪಂಚಾಯತ್ ಕ್ರಮ...
Loading posts...

All posts loaded

No more posts

error: Content is protected !!