ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅಡುಗೆದಾರರಾಗಿ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವೆಂಕಟ್ರಮಣ ಬೇರ್ಪಡ್ಕರವರು ಜು.31 ರಂದು ನಿವೃತ್ತಿ ಹೊಂದಲಿದ್ದಾರೆ. 1988 ಮಾರ್ಚ್ 21 ರಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಿನಗೂಲಿ ನೌಕರರಾಗಿ ಕೆಲಸಕ್ಕೆ ಸೇರಿದ್ದರು ಬಳಿಕ 1996 ರಿಂದ ಹುದ್ದೆ ಖಾಯಮಾತಿಗಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿ 2016 ಸೆಪ್ಟೆಂಬರ್‌ನಿಂದ ಸರಕಾರಿ ನೌಕರನಾಗಿ ಪರಿಗಣಿತರಾಗಿದ್ದರು. ಇದೀಗ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೇವೆಯಿಂದ ನಿವೃತ್ತರಾಗುತಿದ್ದಾರೆ. ವೆಂಕಟ್ರಮಣರು ಉಬರಡ್ಕ ಗ್ರಾಮದ ಬೇರ್ಪಡ್ಕ ನಿವಾಸಿಯಾಗಿದ್ದು ಇವರ ಪತ್ನಿ ಲಕ್ಷ್ಮೀಯವರು ಗೃಹಿಣಿಯಾಗಿದ್ದು, ಪುತ್ರ ಕೇವಲ್‌ರಾಂ ಬೆಂಗಲೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಕು.ದೇವಿಕಾ ಪದವಿ ತರಗತಿಯಲ್ಲಿ ಓದುತ್ತಿದ್ದಾರೆ.
- Tuesday
- December 3rd, 2024