Ad Widget

ಸುಳ್ಯ : ಸರಕಾರಿ ಆಸ್ಪತ್ರೆಯ ಅಡುಗೆ ಸಿಬ್ಬಂದಿ ವೆಂಕಟ್ರಮಣ ಬೇರ್ಪಡ್ಕ ನಿವೃತ್ತಿ – ಸನ್ಮಾನ

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅಡುಗೆದಾರರಾಗಿ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವೆಂಕಟ್ರಮಣ ಬೇರ್ಪಡ್ಕರವರು ಜು.31ರಂದು ನಿವೃತ್ತಿ ಹೊಂದಿದ್ದು,ಅವರಿಗೆ ಅಭಿನಂದನಾ ಸಮಾರಂಭ ಸುಳ್ಯ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.

. . . . .

ತಾಲೂಕು ಆಸ್ಪತ್ರೆಯಲ್ಲಿ ನಡೆದ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಡಾ. ಪದ್ಮನಾಭ ಎಂ ಕೆ ವಹಿಸಿದ್ದರು. ಸಭಾ ವೇದಿಕೆಯಲ್ಲಿ ನಿವೃತ್ತರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ.ಅರ್ಚನಾ ಜಿ ಎಸ್ , ಡಾ.ರಜನಿ ಎ ಜೆ , ಡಾ. ಸೌಮ್ಯ , ಡಾ.ಶಿವಕುಮಾರ್ ಎ ಸಿ , ಡಾ.ಜೋತ್ನ್ಸಾ ಕರ್ಕಡಾ , ಡಾ. ವೀಣಾ, ನಳಿನಾಕ್ಷಿ ಹೆಚ್ ಸುರಕ್ಷಾ ಅಧಿಕಾರಿ, ಪದ್ಮಾವತಿ ಶುಶ್ರೂಕಿಯರ ಅಧಿಕಾರಿ, ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಾನಾ ವಿಭಾಗಗಳ ನೌಕರರಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಜೀವನಕ್ಕೆ ನಿವೃತ್ತ ನೌಕರರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು , ಹಿತೈಷಿಗಳು ಶುಭಹಾರೈಸಿದರು. ಮುರಳಿ ನಳಿಯಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!