ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ನಿವೃತ್ತ ಯೋಧ ಲೋಕೆಶ್ ಇರಂತಮಜಲುರವರಿಗೆ ಸನ್ಮಾನ
ಸುಳ್ಯ:ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ (ರಿ) ಸುಳ್ಯ ಇದರ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹಾಗೂ ಕಾರ್ಗಿಲ್ ಯುದ್ಧದಲ್ಲಿ ವೀರಸ್ವರ್ಗವನ್ನು ಪಡೆದ ಯೋಧರಿಗೆ ಅರ್ಪಿತವಾಗಿ ಸಾಮಾಜಿಕ ಸೇವಾ ಸಂಕಲ್ಪದೊಂದಿಗೆ ಶ್ರಮದಾನ ಕಾರ್ಯಕ್ರಮವು ಜುಲೈ 28 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಡಿಯಾಲಬೈಲು ಇಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಪನ್ನೆಯವರ ನೇತೃತ್ವದಲ್ಲಿ ನಡೆಯಿತು. ಶ್ರಮದಾನ ಕಾರ್ಯಕ್ರಮದ ಪ್ರಾರಂಭದಲ್ಲಿ ನಿವೃತ್ತ ಸೈನಿಕರಾದ ಲೋಕೇಶ್ ಇರಂತಮಜಲು ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಶ್ರಮದಾನಕ್ಕೆ ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ ಸೂಂತೋಡು ಚಾಲನೆ ನೀಡಿದರು, ಶ್ರಮದಾನ ಕಾರ್ಯದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಕುದ್ಪಾಜೆ, ಶಾಲಾಭಿವೃದ್ಧಿ ಸಮಿತಿಯು ಅಧ್ಯಕ್ಷರಾದ ಚಂದ್ರಕಲಾ ಕೊಡಿಯಾಲಬೈಲು, ಶಾಲಾ ಮುಖ್ಯ ಶಿಕ್ಷಕಿಯಾಗಿರುವ ಸವಿತಾ ಸುಬ್ಬಯ್ಯ ಹಾಗೂ ಗೌರವ ಉಪಸ್ಥಿತರಾದ ವೆಂಕಟ್ರಮಣ ಬೇರ್ಪಡ್ಕ ಅವರು ಸಹಕರಿಸಿದರು ಇವರೊಂದಿಗೆ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಶಾಲಾ ಮಕ್ಕಳ ಪೋಷಕರು, ಅಕ್ಷರ ದಾಸೋಹದ ಸಿಬ್ಬಂದಿಗಳು, ಹಾಗೂ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಬೈಲುವಾರು ಸಮಿತಿ ಸದಸ್ಯರು ಹಾಗೂ ಮಹಿಳಾ ಸಮಿತಿ ಸಂಚಾಲಕರು ಹಾಗೂ ಸದಸ್ಯರು ಹಾಗೂ ಸಮುದಾಯ ಬಾಂಧವರು ಪಾಲ್ಗೊಂಡರು ಸಂಘದ ಕಾರ್ಯದರ್ಶಿ ಸಚಿತ್ ಕಲ್ಮಡ್ಕ ಎಲ್ಲರನ್ನು ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.