
ಗುತ್ತಿಗಾರು ಗ್ರಾಮದ ಕಮಿಲ ಮೊಗ್ರ ರಸ್ತೆಯ ಕಾಂತಿಲ ಚೈಪೆ ಎಂಬಲ್ಲಿ ಹೊಳೆಬದಿ ರಸ್ತೆ ಕುಸಿದಿದೆ. ಸುಮಾರು 40 ಅಡಿಗಳಷ್ಟು ಕೆಳಗಿನ ತನಕ ಕುಸಿದಿದ್ದು ಅಪಾಯ ಆಹ್ವಾನಿಸುತ್ತಿದೆ. ಇಲ್ಲಿ ನಿರಂತರ ಅನೇಕ ವಾಹನಗಳು ಹಾದು ಹೋಗುತ್ತಿದ್ದು ಅನಾಹುತ ಸಂಭವಿಸುವ ಮೊದಲು ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.
