
ಅಜ್ಜಾವರ ಗ್ರಾಮದ ಅಡ್ಪoಗಾಯ ಮಾವಿನಪಳ್ಳ ಎಂಬಲ್ಲಿ ಮಹಿಳೆಯೋರ್ವರ ಮನೆಗೆ ಮರ ಬಿದ್ದು ಹಾನಿಯಾದ ಘಟನೆ ಇಂದು ವರದಿಯಾಗಿದೆ. ಮೊನ್ನಿ ಎಂಬುವವರ ಮನೆ ಮೇಲೆ ಮರ ಬಿದ್ದು ಮನೆಯ ಹಂಚುಗಳು ಮತ್ತು ಅಲ್ಪ ಪ್ರಮಾಣದಲ್ಲಿ ಗೋಡೆಗಳಿಗೂ ಕೂಡ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಶ್ರೀಕಲಾ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.
