Ad Widget

ಕೊಡಗು ಜಿಲ್ಲೆಯಲ್ಲಿ ಮುಂದಿನ ಎರಡು ದಿನ ರೆಡ್ ಅಲರ್ಟ್ – ಪ್ರಯಾಣ ಮುಂದೂಡಲು ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜು.31 ಮತ್ತು ಆ. 01ರಂದು ಭಾರತೀಯ ಹವಾಮಾನ ಇಲಾಖೆಯಿಂದ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಕೆಲವು ರಸ್ತೆ ಸಂಪರ್ಕಗಳು ಅಲ್ಲಲ್ಲಿ ಕಡಿತಗೊಂಡಿದ್ದು, ಜು.31 ಮತ್ತು ಆ. 01ರಂದು ಜಿಲ್ಲೆಗೆ ಭೇಟಿ ನೀಡಲು ಇಚ್ಛಿಸಿರುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು  ಸುರಕ್ಷತೆಯ ಹಿತದೃಷ್ಟಿಯಿಂದ ಮುಂದೂಡುವಂತೆ ಕೊಡಗು...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ: ನಾಳೆ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ನಾಳೆ 31-07-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ  ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು,...
Ad Widget

ಐವರ್ನಾಡು : ಮನೆ ಸಮೀಪ ಗುಡ್ಡ ಕುಸಿತ 

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಐವರ್ನಾಡು ಗ್ರಾಮದ ಚೆಮ್ನೂರು ತಿಮ್ಮಪ್ಪ ಗೌಡ ಎಂಬವರ ಮನೆ ಸಮೀಪ  ಗುಡ್ಡ ಕುಸಿತಗೊಂಡಿದೆ. ಮನೆಯವರು ನೋಡಾ-ನೋಡುತ್ತಿದ್ದಂತೆ ಗುಡ್ಡ ಕುಸಿತಗೊಂಡಿದೆ. ನಿರಂತರ ಮಳೆಯಿಂದಾಗಿ ಮಣ್ಣು ಕುಸಿಯುತ್ತಲೇ ಇದೆ. ಇನ್ನೂ ಗುಡ್ಡ ಕುಸಿದರೇ ರಬ್ಬರ್ ಮರಗಳು ಜತೆಗೆ ಬಿದ್ದರೇ ಮನೆಗೂ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.

ದೇರಾಜೆ – ಕೋಡ್ತೀಲು – ಕೊಪ್ಪತ್ತಡ್ಕ ರಸ್ತೆ ಬದಿ ಕುಸಿತ : ಸಂಪರ್ಕ ಕಡಿತದ ಭೀತಿ

ಐವರ್ನಾಡು ಗ್ರಾಮದ ದೇರಾಜೆ ಕೋಡ್ತೀಲು ಕೊಪ್ಪತ್ತಡ್ಕ ರಸ್ತೆಯ ಚಂದ್ರಕಾಂತ ಎಂಬವರ ಮನೆಯ ಹಿಂಬದಿ ಬರೆ ಜರಿದು ಬಿದ್ದಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.ರಸ್ತೆ ಬದಿಯ ಬರೆ ಇನ್ನಷ್ಟು ಜರಿದು ಬಿದ್ದರೆ ಸಂಪರ್ಕ ಕಡಿತಗೊಳ್ಳಲಿದೆ.ಈಗ ಘನ ವಾಹನಗಳಿಗೆ ಸಂಚಾರ ನಿಷೇಧಿಸಿದ್ದು ಬೈಕ್ ಗಳು ಮಾತ್ರ ಸಂಚಾರ ಮಾಡಬಹುದು.

ಕಡಬ : ಅಕ್ರಮ ಸಕ್ರಮ ಸಮಿತಿ ಸಭೆ

ಕಡಬ ತಾಲೂಕು ಕಚೇರಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಜು.30ರಂದು ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಪಿ.ಪಿ.ವರ್ಗೀಸ್,ಗೀತಾ ಕೋಲ್ಚಾರ್,ಹೆಚ್ .ಆದಂ ರಾಮಕುಂಜ ,ಕಡಬ ತಹಶಿಲ್ದಾರ್ ಪ್ರಭಾಕರ ಖಜೂರೆ,ಉಪತಹಶೀಲ್ದಾರರಾದ ಮನೋಹರ, ಗೋಪಾಲ್,ಕಂದಾಯ ನಿರೀಕ್ಷಕ ಪೃಥ್ವಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

ಆಲೆಟ್ಟಿ ಮೊಸರು ಕುಡಿಕೆ ಉತ್ಸವ ಸಮಿತಿ ರಚನೆ : ಅಧ್ಯಕ್ಷರಾಗಿ ಉದಯ ಕುಡೆಕಲ್ಲು, ಕಾರ್ಯದರ್ಶಿಯಾಗಿ ಸುರೇಶ್ ಆಲೆಟ್ಟಿ, ಖಜಾಂಜಿಯಾಗಿ ಶ್ರೀನಾಥ್ ಆಲೆಟ್ಟಿ

ಜನನಿ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಕಳೆದ ವರ್ಷದಿಂದ ಆಲೆಟ್ಟಿಯಲ್ಲಿ ಪ್ರಾರಂಭಿಸಿದ ಮೊಸರು ಕುಡಿಕೆ ಉತ್ಸವದ ಎರಡನೇ ವರ್ಷದ ಉತ್ಸವವನ್ನು ಗ್ರಾಮ ಮಟ್ಟದಲ್ಲಿ ಇರುವ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಿಂದ ಆಚರಿಸುವ ಸಲುವಾಗಿ ನೂತನ ಉತ್ಸವ ಸಮಿತಿಯನ್ನು ಜು.28 ರಂದು ರಚಿಸಲಾಯಿತು.ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ...

ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೀರಸ್ವರ್ಗವನ್ನು ಪಡೆದ ಯೋಧರಿಗೆ ಸೇವಾ ಸಕಲ್ಪದೊಂದಿದೆ ಶ್ರಮದಾನ

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ನಿವೃತ್ತ ಯೋಧ ಲೋಕೆಶ್ ಇರಂತಮಜಲುರವರಿಗೆ ಸನ್ಮಾನಸುಳ್ಯ:ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ (ರಿ) ಸುಳ್ಯ ಇದರ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹಾಗೂ ಕಾರ್ಗಿಲ್ ಯುದ್ಧದಲ್ಲಿ ವೀರಸ್ವರ್ಗವನ್ನು ಪಡೆದ ಯೋಧರಿಗೆ ಅರ್ಪಿತವಾಗಿ ಸಾಮಾಜಿಕ ಸೇವಾ ಸಂಕಲ್ಪದೊಂದಿಗೆ ಶ್ರಮದಾನ ಕಾರ್ಯಕ್ರಮವು ಜುಲೈ 28 ರಂದು...

ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಮತ್ತು ಸಿ. ಡಿ. ದಿನೇಶ್ ಚೆನ್ನೂರು ಹವಾಲ್ದಾರ ಇವರಿಗೆ ಸನ್ಮಾನ ಕಾರ್ಯಕ್ರಮ

ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಮತ್ತು ಸಿ. ಡಿ. ದಿನೇಶ್ ಚೆನ್ನೂರು ಹವಾಲ್ದಾರ ಇವರಿಗೆ ಸನ್ಮಾನ ಕಾರ್ಯಕ್ರಮವು ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಕುಶಾಲಪ್ಪ ತುಂಬತ್ತಾಜೆ ಇವರ ಅಧ್ಯಕ್ಷತೆಯಲ್ಲಿ ಜು.29 ರಂದು ಜರಗಿತು. ಸನ್ಮಾನ ಸ್ವೀಕರಿಸಿದ ದಿನೇಶ್ ರವರು ಕಾರ್ಗಿಲ್ ಯುದ್ಧದ ವಿವರಣೆಯನ್ನು ಹೇಳಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸೇನೆಗೆ...

ಸಂಪಾಜೆ : ಪೇರಡ್ಕ ಸೇತುವೆ ಮುಳುಗಡೆ – ಬದಲಿ ಮಾರ್ಗ ಬಳಕಗೆ ಸೂಚನೆ

ಸಂಪಾಜೆ ಗ್ರಾಮದ ಪೇರಡ್ಕ ಎಂಬಲ್ಲಿ ಸೇತುವೆಯು ಮುಳುಗಿದ್ದು ಇದೀಗ ರಸ್ತೆಯಲ್ಲಿ ಸಂಚಾರವನ್ನು ತಡೆಯುವ ಹಿನ್ನಲೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಬದಲಿ ಮಾರ್ಗವನ್ನು ಸೂಚಿಸಲಾಗಿದೆ.ಗೂನಡ್ಕದಿಂದ ದರ್ಖಾಸು ಪೇರಡ್ಕ ಸಂಪರ್ಕಿಸುವ ರಸ್ತೆಯು ಇದೀಗ ಪೇರಡ್ಕ ಮುಳುಗು ಸೇತುವೆಯಲ್ಲಿ ನೀರು ಅಪಾರ ಪ್ರಮಾಣದಲ್ಲಿ ಬಂದು ಸೇತುವೆ ಮುಳುಗಡೆಯಾಗಿದ್ದು ಗ್ರಾಮ ಪಂಚಾಯತ್ ವತಿಯಿಂದ ಬದಲಿ ಮಾರ್ಗ ಸೂಚಿಸಿ ಬ್ಯಾನರ್ ಮತ್ತು ಬ್ಯಾರಿಕೇಡ್ ಆಳವಡಿಕೆ...

ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆ- ಪೆರುವಾಜೆಯ ಜಲದುರ್ಗಾದೇವಿ ದೇವಸ್ಥಾನಕ್ಕೆ ನುಗ್ಗಿದ ನೀರು

ತಾಲೂಕಿನಾದ್ಯಂತ  ಭಾರಿ ಮಳೆ ಸುರಿಯುತ್ತಿದ್ದು ಪೆರುವಾಜೆಯ ಜಲದುರ್ಗಾ ದೇವಸ್ಥಾನಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಹಿಂಬದಿಯ ಹೊಳೆಯಿಂದ ನೀರು ದೇವಸ್ಥಾನಕ್ಕೆ ಬಂದಿದೆ.
Loading posts...

All posts loaded

No more posts

error: Content is protected !!