Ad Widget

ದಂಡಕಜೆ ಮನೆಯ ಹಿಂಬದಿಯ ಗೋಡೆ ಕುಸಿತ , ಅದೃಷ್ಟವಶಾತ್ ಪಾರು.

ಅತೀವವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಹಿಂಬದಿಯ ಗೋಡೆ ಕುಸಿತಗೊಂಡು ಮನೆಯವರು ಕೂದಲೆಳೆಯ ಅಂತರದಲ್ಲಿ ಭಾರೀ ಅಪಾಯದಿಂದ ಪಾರಾಗಿರುವ ಘಟನೆ ಇದೀಗ ವರದಿಯಾಗಿದೆ.ಕಲ್ಲುಗುಂಡಿ ದಂಡಕಜೆಯ ಮಧುಸೂದನ ಎಂಬವರ ಮನೆಯ ಹಿಂಬದಿಯಲ್ಲಿ ಗೋಡೆ ಕುಸಿತಗೊಂಡಿದ್ದು, ಅಡುಗೆ ಕೋಣೆಗೆ ಸಂಪೂರ್ಣ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಮಾಜಿ ಗ್ರಾ.ಪಂ ಅಧ್ಯಕ್ಷರು ಮತ್ತು ವಿಪತ್ತು ನಿರ್ವಹಣಾ ತಂಡ ಮತ್ತು ಸ್ಥಳೀಯರು ತೆರಳಿದ್ದು...

ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ – ನೂತನ ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ, ಕಾರ್ಯದರ್ಶಿಯಾಗಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಪುಷ್ಪರಾಜ್ ಶೆಟ್ಟಿ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದಯಾನಂದ ಕಲ್ನಾರ್ ವಹಿಸಿದ್ದರು. ಸಭೆಯ ಕಾರ್ಯಕಲಾಪಗಳ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷತೆಗೆ ಲೋಕೇಶ್ ಪೆರ್ಲಂಪಾಡಿ ಮತ್ತು ಪ್ರಜ್ಞಾ ಎಸ್. ನಾರಾಯಣ್ ಸ್ಪರ್ಧಿಸಿದ್ದರು.‌ ಅಧ್ಯಕ್ಷತೆಗೆ ಚುನಾವಣೆ ನಡೆದು ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ...
Ad Widget

ಕನಕಮಜಲು:  ಸರಣಿ ಕಳ್ಳತನದ ಬಗ್ಗೆ ಸ್ವರ್ಣ ಮಹಿಳಾ ಮಂಡಲದಿಂದ ಮಹಿಳಾ ಆಯೋಗಕ್ಕೆ ದೂರು

2023ರಿಂದ ಇದುವರೆಗೆ ಕನಕಮಜಲಿನಲ್ಲಿ ನಡೆದ ಸರಣಿ ಕಳ್ಳತನದ ಬಗ್ಗೆ ಸ್ವರ್ಣ ಮಹಿಳಾ ಮಂಡಲದಿಂದ ಕರ್ನಾಟಕ ಮಹಿಳಾ ಆಯೋಗಕ್ಕೆ ಹಾಗೂ ದ.ಕ ಎಸ್.ಪಿ ಯವರಿಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರವಾಗಿ ಅಪರಾಧಿಗಳನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದು, ಮನವಿಗೆ ಸ್ಪಂದಿಸಿದ ಮಹಿಳಾ ಆಯೋಗ ಪೋಲಿಸ್ ವರಿಷ್ಠಾಧಿಕಾರಿಯವರ ಮೂಲಕ ಸುಳ್ಯ ಠಾಣೆಗೆ ಶೀಘ್ರವಾಗಿ ತನಿಖೆ ನಡೆಸುವಂತೆ ಆದೇಶಿಸಿದೆ ಎಂದು ತಿಳಿದು...

ಆ.4: ನಗರ ಗೌಡ ಸಮಿತಿ ವತಿಯಿಂದ ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ಆಟಿಯ ಸಂಭ್ರಮ

ಗೌಡರ ಯುವ ಸೇವಾ ಸಂಘ ಸುಳ್ಯ, ತಾಲೂಕು ಮಹಿಳಾ ಘಟಕ, ತಾಲೂಕು ತರುಣ ಘಟಕಗಳ ಸಹಯೋಗದೊಂದಿಗೆ ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಘಟಕ, ತರುಣ ಘಟಕಗಳ ನೇತೃತ್ವದಲ್ಲಿ ಗೌಡ ಸಮಾಜ- ಬಾಂಧವರುಗಳ ಆಟಿ ಸಂಭ್ರಮ ಕಾರ್ಯಕ್ರಮವನ್ನು ಆಗಸ್ಟ್ 4 ರಂದು ಕೊಡಿಯಾಲಬೈಲಿನ ಗೌಡ ಸಮುದಾಯಭವನದಲ್ಲಿ ಏರ್ಪಡಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಆಕರ್ಷಕ ಸ್ಪರ್ಧೆಗಳು...

ಮರ್ಕಂಜ : ರವಿಕುಮಾರ ಪೂಜಾರಿ ಬಳ್ಳಕ್ಕಾನ ನಿಧನ

ಮರ್ಕಂಜ ಗ್ರಾಮದ ಬಳ್ಳಕ್ಕಾನ ಮೋನಪ್ಪ ಪೂಜಾರಿ ಎಂಬವರ ಪುತ್ರ ರವಿಕುಮಾರ ಎಂಬವರು‌ ನಿನ್ನೆ ರಾತ್ರಿ ಅಸೌಖ್ಯದಿಂದ ನಿಧನರಾದರು. ‌ಅವರಿಗೆ 38 ವರ್ಷ ವಯಸ್ಸಾಗಿತ್ತು. ‌ಮೃತರು ತಂದೆ, ತಾಯಿ ಪುಷ್ಪಾವತಿ, ಪತ್ನಿ ಪ್ರೇಮ, ಮಗಳು ವರ್ಷಿಣಿ, ಮಗ ಪ್ರೀತಮ್, ಸಹೋದರಿ ಜಯಶ್ರೀ ಸಹೋದರ ರಾಜೇಶ್ ರನ್ನು ಅಗಲಿದ್ದಾರೆ.

ಜು.29 : ಮರುಜಲೀಕರಣ ದ್ರಾವಣ ದಿನ – ಏನಿದು ಓ.ಆರ್.ಎಸ್.?

ಪತ್ರಿ ವರ್ಷ ಜುಲೈ 29ರಂದು ಭಾರತದಾದ್ಯಂತ “ಮರುಜಲೀಕರಣ ದ್ರಾವಣ ದಿನ ಅಥವಾ ಓಆರ್‍ಯಸ್ ದಿನ” ಎಂದು ಆಚರಿಸಿ ವಾಂತಿ, ಬೇಧಿ ಮತ್ತು ಅತಿಸಾರದಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿ, ಓಆರ್‍ಯಸ್ ಬಳಕೆಯಿಂದ ಉಂಟಾಗುವ ಲಾಭ ಮತ್ತು ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 2001ರಿಂದ ಈ ಆಚರಣೆ ಜಾರಿಗೆ ಬಂದಿತು. ಭಾರತೀಯ ಮಕ್ಕಳ ತಜ್ಞರ...

ಅಜ್ಜಾವರ : ದೊಡ್ಡೇರಿ ಭಾಗದ ವಿದ್ಯುತ್ ಬಳಕೆದಾರರಿಂದ ಶ್ರಮದಾನ – ವಿದ್ಯುತ್ ಲೈನ್ ಟ್ರೀ ಕಟ್ಟಿಂಗ್

ಅಜ್ಜಾವರ ಗ್ರಾಮದ ದೊಡ್ಡೇರಿ ಭಾಗದ ನಿವಾಸಿಗಳು ವಿದ್ಯುತ್ ಲೈನ್ ಟ್ರೀಕಟ್ಟಿಂಗ್ ಕಾರ್ಯವನ್ನು ಶ್ರಮದಾನ ಮೂಲಕ ಮಾಡಿದರು.‌ ಸುಮಾರು 25 ಕ್ಕೂ ಮಿಕ್ಕಿ ಜನ ಶ್ರಮದಾನದಲ್ಲಿ ಭಾಗಿಯಾದರು. ಶ್ರಮದಾನದ ಖರ್ಚುವೆಚ್ಚಗಳಿಗಾಗಿ ದಯಾನಂದ ಡಿ.ಕೆ.ದೊಡ್ಡೇರಿ ರೂ.1000 ಧನಸಹಾಯ ನೀಡಿ ಸಹಕರಿಸಿದರು.
error: Content is protected !!