ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಕೆ. ಆರ್. ಎಲ್. ಪಿ.ಎಸ್ (ಸಂಜೀವಿನಿ) ಬೆಂಗಳೂರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಕೃಷಿ ಇಲಾಖೆ ಸುಳ್ಯ, ತೋಟಗಾರಿಕಾ ಇಲಾಖೆ ಸುಳ್ಯ, ರೈತ ಉತ್ಪಾದಕ ಕಂಪೆನಿ(ರಿ)ಸುಳ್ಯ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿ (sc)ರೈತ ಬಾಂಧವರಿಗೆ ಎಸ್.ಸಿ.ಎಸ್.ಪಿ. ಯೋಜನೆಯಡಿ ‘ವೈಜ್ಞಾನಿಕ ತೆಂಗು ಕೃಷಿ ಕುರಿತು ತರಭೇತಿ’ ಕಾರ್ಯಕ್ರಮವು ತಾಲೂಕು ಪಂಚಾಯತ್ ‘ ಮಿನಿ ಸಭಾಂಗಣ ‘ ಸುಳ್ಯ ಇಲ್ಲಿ ನಡೆಯಿತು.
ಕೇಂದ್ರ ಸರಕಾರದ ಎಸ್.ಸಿ.ಎಸ್.ಪಿ ಯೋಜನೆಯನ್ನು ICAR ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ( CPCRI ) ಕಾಸರಗೋಡು ಇವರು ಕೃಷಿ ವಿಜ್ಞಾನ ಕೇಂದ್ರ , NRLM (ಸಂಜೀವಿನಿ) ಒಕ್ಕೂಟ ಗಳ ನೇತೃತ್ವ ದಲ್ಲಿ
ಕೃಷಿ ಸಖಿಯರ ಮುಖಾಂತರ ಯೋಜನೆಯನ್ನು ಸುಳ್ಯ ತಾಲೂಕಿನ 25 ಗ್ರಾಮಗಳ ಪರಿಶಿಷ್ಟ ಜಾತಿ ರೈತರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಜಿ.ಪಂ.ಯೋಜನಾ ನಿರ್ದೇಶಕ ಜಯರಾಮ ಕೆ. ಇ. ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟ ಜಾತಿ (SC) ಫಲಾನುಭವಿಗಳಿಗೆ SCSP ಯೋಜನೆಯಡಿ ವೈಜ್ಞಾನಿಕ ತೆಂಗು ಕೃಷಿಯ ಬಗ್ಗೆ ಮತ್ತು ಇತರ ಯೋಜನೆಗಳನ್ನು ಹೆಚ್ಚಿನ ಬಡ ರೈತರಿಗೆ ತಲುಪುವಂತೆ ‘ಕೃಷಿ ಸಖಿಯರು ‘ಮತ್ತು NRLM ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿದರು. ತೆಂಗು ಕೃಷಿ ಸಂಬಂಧಿಸಿದ SCSP ಕೇಂದ್ರ ಸರ್ಕಾರದ ಯೋಜನೆ ಇದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡು ತುಂಬಾ ಒಳ್ಳೆಯ ಕಾರ್ಯಕ್ರಮ, ಇದಕ್ಕೆ ಶ್ರಮಿಸಿದ ಎಲ್ಲಾ ಕೃಷಿ ಸಖಿಯರ ಮತ್ತು NRLM ಸಿಬ್ಬಂದಿ ಗಳ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಲಾನುಭವಿಗಳಿಗೆ ‘ತೆಂಗು ಕೃಷಿಯ’ ಬಗ್ಗೆ “ತೆಂಗು ಒಂದು ಕಲ್ಪವೃಕ್ಷ ಅದನ್ನು ಚೆನ್ನಾಗಿ ಬೆಳೆಸಿ ಪೋಷಿಸಿದರೆ ಮುಂದೆ ಅದು ನಮ್ಮನ್ನು ಬೆಳೆಸುತ್ತದೆ” ಎನ್ನುವ ಹಿತನುಡಿಯೊಂದಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ
ಶ್ರೀಮತಿ ಡಾ|| ಸುರೇಖಾ ವಿಜ್ಞಾನಿ, CPCRI ಕಾಸರಗೋಡು ಹಾಗೂ ಡಾ||ರಾಜಕುಮಾರ್ ವಿಜ್ಞಾನಿ, CPCRI ಕಾಸರಗೋಡು ಇವರು ವೈಜ್ಞಾನಿಕ ರೀತಿಯಲ್ಲಿ ತೆಂಗು ಕೃಷಿ ಮಾಡುವ ಬಗ್ಗೆ ಮಾಹಿತಿಯನ್ನು ನೀಡುವುದರೊಂದಿಗೆ, ಗುಂಡಿ, ಆಳ-ಅಳತೆ, ಮತ್ತು ಕೀಟಬಾಧೆ ಬಾರದಂತೆ ತಡೆಯುವ ವಿಧಾನವನ್ನು ತಿಳಿಸಿದರು. ಗಿಡಗಳಿಗೆ ಯಾವೆಲ್ಲಾ ಪೋಷಕಾಂಶಗಳನ್ನು ನೀಡಿ ಬೆಳೆಸಬೇಕು ಎಂಬುದನ್ನು ಸವಿವರವಾಗಿ ತಿಳಿಸಿದರು.
ಪ್ರಾಯೋಗಿಕ ಮಾಹಿತಿಯಾದ ಗಿಡಗಳನ್ನು ನೆಡುವ ವಿಧಾನ ಹಾಗೂ ಫಲ ಬರುವವರೆಗೆ ಯಾವ ರೀತಿ ಪೋಷಣೆ ಮಾಡಿ ರಕ್ಷಿಸಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು
ಡಾ|| ರಾಜಕುಮಾರ್ ಅವರು ತಿಳಿಸಿದರು.
ಶ್ರೀಮತಿ ಸುಹಾನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಸುಳ್ಯ ಇವರು ತೋಟಗಾರಿಕಾ ಬೆಳೆಗಳು, ಯೋಜನೆಗಳು, ಸಬ್ಸಿಡಿಯಲ್ಲಿ ಸಿಗುವ ಯಂತ್ರೋಪಕರಣಗಳ ಬಗ್ಗೆ ಉತ್ತಮ ಮಾಹಿತಿ ನೀಡಿದರು.
*ಡಾ||ಟಿ.ಜೆ ರಮೇಶ್ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು* ಇವರು ಫಲಾನುಭವಿಗಳಿಗೆ ಸಿಗಲಿರು ವ ಯೋಜನೆಗಳು, ಫಲಾನುಭವಿಗಳೇ ಗಿಡಗಳನ್ನು ಉಪಯೋಗಿಸಬೇಕು ಮತ್ತು ಯಾವುದೇ ಕಾರಣಕ್ಕೂ ಬೇರೆಯವರಿಗೆ ಗಿಡಗಳನ್ನು ನೀಡಬಾರದೆಂದು ಸಲಹೆ ನೀಡಿದರು. ಕೃಷಿ ಸಖಿಯರು ಮತ್ತು NRLM ಸಿಬ್ಬಂದಿಗಳ ಕಾರ್ಯವೈಖರಿಯ ಬಗ್ಗೆ, ಹಾಗೂ ಉತ್ತಮ ಯೋಜನೆಯನ್ನು ರೈತರಿಗೆ ತಲುಪಿಸಲು ಮಾಡಿರುವ ಕೆಲಸಗಳ ಬಗ್ಗೆ ಶ್ಲಾಘಿಸಿದರು.
ಶ್ರೀ ಶೈಲ ಜಿಲ್ಲಾ ವ್ಯವಸ್ಥಾಪಕರು (ಕೃಷಿ) NRLM ಜಿಲ್ಲಾ ಪಂಚಾಯತ್ ಮಂಗಳೂರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಫಲಾನುಭವಿಗಳಾದ ಪರಿಶಿಷ್ಟ ಜಾತಿ ರೈತ ಬಾಂಧವರು ಮತ್ತು ಕೃಷಿ ಸಖಿಗಳು ಹಾಗೂ NRLM ಸಿಬ್ಬಂದಿಗಳು , ಬಿ.ಆರ್. ಪಿ.ಇ.ಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಲೂಕು ಪಂಚಾಯತ್ ಸಿಬ್ಬಂದಿ ಗಳು ಸಹಕರಿಸಿದರು..
ಶ್ರೀಮತಿ ಶ್ವೇತಾ ತಾಲೂಕು ವ್ಯವಸ್ಥಾಪಕರು NRLM ಸುಳ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಅತಿಥಿ ಗಳನ್ನು ಸ್ವಾಗತಿಸಿ, ವಂದಿಸಿದರು.