ಸುಳ್ಯದ ಕುರುಂಜಿಭಾಗ್ ನಲ್ಲಿರುವ ಮಧುವನ ಹೋಟೇಲ್ ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಯುವಕನೋರ್ವ ಅಲ್ಪ ಕಾಲದ ಅನಾರೋಗ್ಯದಿಂದ ಜು.21 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ದಿ.ರಾಮಣ್ಣ ಗೌಡರ ಪುತ್ರ ಶಿವಪ್ರಕಾಶ್ (32) ಮೃತಪಟ್ಟ ದುರ್ದೈವಿ. ಮೃತರು ಸಹೋದರರಾದ ಪದ್ಮನಾಭ, ಸುಳ್ಯದಲ್ಲಿ ಹೋಟೆಲ್ ಉದ್ಯಮಿಗಳಾಗಿರುವ ಚಿದಾನಂದ, ಲವಕುಮಾರ್, ಕುಶಾಲಪ್ಪ ಹಾಗೂ ಸಹೋದರಿ ಶ್ರೀಮತಿ ರಜನಿಯವರನ್ನು ಅಗಲಿದ್ದಾರೆ.