- Thursday
- November 21st, 2024
ಪೆರಾಜೆ ಗ್ರಾಮದ ಬಂಗಾರಕೋಡಿ ದರ್ಬೆಮಜಲಿನ ಯುವಕನೋರ್ವ ಮನೆಗೆ ಹಿಂತಿರುಗದೆ ಮನೆಯವರಿಗೆ ದೂರವಾಣಿ ಸಂಪರ್ಕಕ್ಕೂ ಸಿಗದ ಹಿನ್ನೆಯಲ್ಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ ಘಟನೆ ವರದಿಯಾಗಿದೆ. ಪೆರಾಜೆಯ ಬಂಗಾರಕೋಡಿ ದರ್ಬೆಮಜಲಿನ ಚಂದ್ರಶೇಖರ ಹಾಗೂ ಶ್ರೀಮತಿ ಅನಂತೇಶ್ವರಿ ಎಂಬವರ ಪುತ್ರ ಶಿವರಾಜ್ ಕುಮಾರ್ ಜ.26ರಂದು ಮನೆಯಿಂದ ಹೋದವರು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.ಶಿವರಾಜ್ ಕುಮಾರ್ ಅವರಿಗೆ...
ಸುಳ್ಯದ ಕುರುಂಜಿಭಾಗ್ ನಲ್ಲಿರುವ ಮಧುವನ ಹೋಟೇಲ್ ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಯುವಕನೋರ್ವ ಅಲ್ಪ ಕಾಲದ ಅನಾರೋಗ್ಯದಿಂದ ಜು.21 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ದಿ.ರಾಮಣ್ಣ ಗೌಡರ ಪುತ್ರ ಶಿವಪ್ರಕಾಶ್ (32) ಮೃತಪಟ್ಟ ದುರ್ದೈವಿ. ಮೃತರು ಸಹೋದರರಾದ ಪದ್ಮನಾಭ, ಸುಳ್ಯದಲ್ಲಿ ಹೋಟೆಲ್ ಉದ್ಯಮಿಗಳಾಗಿರುವ ಚಿದಾನಂದ, ಲವಕುಮಾರ್,...
ಜೇಸೀಐ ಮಂಗಳೂರು ಶ್ರೇಷ್ಠ ಆತಿಥ್ಯದಲ್ಲಿ ನಡೆದ "ವೈಭವ" ವಲಯ ವ್ಯವಹಾರ ಸಮ್ಮೇಳನದಲ್ಲಿ ಸಮಾಜದಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ಕೊಡ ಮಾಡುವ ಸಾಧನಾ ಶ್ರೀ ಪ್ರಶಸ್ತಿಯನ್ನು ಜೇಸಿಐ ಸುಳ್ಯ ಸಿಟಿಯ ಪೂರ್ವ ಅಧ್ಯಕ್ಷರಾದ ಜೇಸಿ ಚಂದ್ರಶೇಖರ ಕನಕಮಜಲು ರವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಲಯಾದ್ಯಕ್ಷ ಗಿರೀಶ್ ಎಸ್ಪಿ, ವಲಯ ಉಪಾಧ್ಯಕ್ಷ ಅಭಿಷೇಕ್, ಜೇಸಿ ರವಿಚಂದ್ರ ಪಾಟಾಳಿ,...
ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ 54ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಮೊಗ್ರ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಯಶೋಧಕೃಷ್ಣ ನೂಚಿಲ, ಭರತ್ ನೆಕ್ರಾಜೆ, ವಿನ್ಯಾಸ್ ಹೊಸೋಳಿಕೆ, ನಿತೀನ್ ಭಟ್, ಮಹೇಶ್ ಗುಡ್ಡೆಮನೆ, ಭಾರತಿ ದಿನೇಶ್ ನೇಮಕಗೊಂಡರು. ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್ ಮತ್ತು ರಾಜೇಶ್ ಎನ್.ಎಸ್ ಸಮಿತಿಯ ಸಂಚಾಲಕರಾಗಿ ಮುಂದುವರೆದರು. 53ನೇ ವರ್ಷದ...
ಸುಳ್ಯ ಕಸಬಾ ನಿವಾಸಿ ಕಾನತ್ತಿಲ ದಿ.ಸುಬ್ಬಪ್ಪ ಗೌಡರ ಧರ್ಮಪತ್ನಿ ರಾಮಕ್ಕ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ದಾಮೋದರ, ವಸಂತ ಪುತ್ರಿಯರಾದ ನಾಗವೇಣಿ, ಶೇಷಮ್ಮ, ಮಲ್ಲಮ್ಮ, ಶಾರದಾ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಕೆ. ಆರ್. ಎಲ್. ಪಿ.ಎಸ್ (ಸಂಜೀವಿನಿ) ಬೆಂಗಳೂರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಕೃಷಿ ಇಲಾಖೆ ಸುಳ್ಯ, ತೋಟಗಾರಿಕಾ ಇಲಾಖೆ ಸುಳ್ಯ, ರೈತ ಉತ್ಪಾದಕ ಕಂಪೆನಿ(ರಿ)ಸುಳ್ಯ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿ (sc)ರೈತ ಬಾಂಧವರಿಗೆ ಎಸ್.ಸಿ.ಎಸ್.ಪಿ. ಯೋಜನೆಯಡಿ 'ವೈಜ್ಞಾನಿಕ ತೆಂಗು ಕೃಷಿ ಕುರಿತು ತರಭೇತಿ'...
ಕಡಬದಿಂದ ಮರ್ದಾಳ, ಪಂಜ,ಬಳ್ಪ, ಕಮಿಲ, ಗುತ್ತಿಗಾರು ಹಾಲೆಮಜಲು ರಸ್ತೆಯ ಮಧ್ಯೆ ಅಮೂಲ್ಯ ದಾಖಲೆಗಳು ಇದ್ದ ಪರ್ಸ್ ಕಳೆದು ಹೋಗಿರುತ್ತದೆ. ಸಿಕ್ಕಿದವರು ಈ ನಂಬರಿಗೆ ಸಂಪರ್ಕಿಸಬೇಕಾಗಿ ವಿನಂತಿ. ಮೋಹನ ಕೆ.ಜಿ. ಕಡೆಪಾಲ94800419917022214949
ಜಾಗತಿಕವಾಗಿ ವಿಶ್ವದಾದ್ಯಂತ ಜುಲೈ 28ರಂದು “ವಿಶ್ವ ಹೆಪಟೈಟಿಸ್ ದಿನ” ಎಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷವಾದ ಜಾಗ್ರತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ, ವರ್ಷವೊಂದರಲ್ಲಿ ಹೆಪಟೈಟಿಸ್...