ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕಾರ್ಗಿಲ್ ದಿನಾಚರಣೆ ಹಾಗೂ ಯೋಧರಿಗೆ ಸನ್ಮಾನ ಸಮಾರಂಭ
ಸುಬ್ರಹ್ಮಣ್ಯ ಜುಲೈ 27: ಸುಬ್ರಹ್ಮಣ್ಯ ರೋಟರಿ ಕ್ಲಬ್, ರೈತ ಯುವಕ ಮಂಡಲ ಏನೆಕಲ್ಲು, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಹಾಗೂ ಇನ್ನರ್ವೀಲ್ ಕ್ಲಬ್ ಸುಬ್ರಹ್ಮಣ್ಯ ಇವುಗಳ ಜಂಟಿ ಆಶಯದಲ್ಲಿ ಏನೇಕಲ್ಲಿನ ರೈತ ಯುವಕ ಮಂಡಲದ ಸಭಾಭವನದಲ್ಲಿ ಕಾರ್ಗಿಲ್ ವಿಜಯ ದಿವಸದ ದಿನಾಚರಣೆ ಹಾಗೂ ಯೋಧರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಚಂದ್ರಶೇಖರ ನಾಯರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ನೌಕಾಪಡೆ ಅಧಿಕಾರಿಗಳಾದ ನಾರಾಯಣ ಭಟ್ ಉಪಸ್ಥಿತರಿದ್ದು ಕಾರ್ಗಿಲ್ ಯುದ್ಧದ ಸನ್ನಿವೇಶಗಳನ್ನು ಹಾಗೂ ವಿಜಯ ದಿವಸದ ಆನಂದವನ್ನು ತಿಳಿಸುತ್ತಾ “ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಪರಾಕ್ರಮಗೈದು ವಿಜಯದ ಸಂಕೇತವಾಗಿ ಪಾಕಿಸ್ತಾನದ ಹಿಜಬುದ್ದೀನ್ ಸೈನಿಕರನ್ನು ಒದ್ದೋಡಿಸಿ ಕಾರ್ಗಿಲ್ ಅನ್ನು ಭಾರತಕ್ಕೆ ವಶಪಡಿಸಿಕೊಟ್ಟ ಯೋಧರನ್ನ ಗುರುತಿಸಿ ಗೌರಿಸುವುದು ಶ್ರೇಷ್ಠ ಕಾರ್ಯ” ಎಂದರು. ವೇದಿಕೆಯಲ್ಲಿ ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲೀಜನ್ ಅಧ್ಯಕ್ಷರಾದ ಡಾ.ರವಿ ಕಕ್ಕೆ ಪದವು , ಇನ್ನರ್ವೀಲ್ ಕ್ಲಬ್ ಸುಬ್ರಹ್ಮಣ್ಯ ಇದರ ಅಧ್ಯಕ್ಷೆ ಶೃತಿ ಮಂಜುನಾಥ್, ರೋಟರಿ ಜೊನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಏನೆಕಲ್ಲು ರೈತ ಯುವಕ ಮಂಡಲ ಕಟ್ಟಡ ರಚನಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ ಗೌಡ ಕೋಟಿ ಗೌಡನ ಮನೆ, ರೋಟರಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಪ್ರಶಾಂತ ಕೊಡಿಬೈಲು, ಕಾರ್ಯದರ್ಶಿ ಚಿದಾನಂದ ಕುಳ ಉಪಸ್ಥಿತರಿದ್ದರು. ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೀರ ಮರಣವನ್ನು ಹೊಂದಿದ ಅಧಿಕಾರಿಗಳಿಗೆ ಹಾಗೂ ಸೈನಿಕರಿಗೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹೋರಾಡಿದ ಹಾಗೂ ಪರಾಕ್ರಮಗೈದ ಸೇನಾಧಿಕಾರಿಗಳು ಹಾಗೂ ಸೈನಿಕರಾದ ನೇವಿ ಅಧಿಕಾರಿ ನಾರಾಯಣ ಭಟ್, ಸುಬೇದಾರ್ ವಾಸುದೇವ ಗೌಡ ಬಾನಡ್ಕ, ಸುಬೇದಾರ್ ಗೋಪಾಲ್ ಗೌಡ ಓಗ್ಗು ,ಸುಬೇದಾರ್ ಹೊನ್ನಪ್ಪ ಗೌಡ ಎನೆಕಲ್ಲು, ಕೆ.ಎಂ ಜಯರಾಮಗೌಡ, ಭವಾನಿಶಂಕರ ಪೂಂಬಾಡಿ ಹಾಗೂ ಸುಬ್ರಹ್ಮಣ್ಯ ಆತ್ಯಾಡಿ ಅವರುಗಳನ್ನ ಗೌರವ ಪೂರಕವಾಗಿ ಸನ್ಮಾನಿಸಲಾಯಿತು. ಸುಬೇದಾರ್ ವಾಸುದೇವ ಗೌಡ ಬಾನಡ್ಕ ಅನಿಸಿಕೆ ವ್ಯಕ್ತಪಡಿಸಿದರು .ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ಸೀನಿಯರ್ ಚೆಂಬರ್ಸ್ ಹಾಗೂ ರೈತ ಯುವಕಮಂಡಲದ ಪೂರ್ವ ಅಧ್ಯಕ್ಷರು ಹಾಗೂ ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ನ ಶಿವರಾಮ ಏನೇಕಲ್ಲು ಸ್ವಾಗತಿಸಿದರು. ಭರತ್ ನೆಕ್ರಾಜೆ ವೇದಿಕೆಗೆ ಆಹ್ವಾನಿಸಿದರು. ಚಿದಾನಂದ ಕುಳ ಧನ್ಯವಾದ ಸಮರ್ಪಿಸಿದರು.