ಸುಬ್ರಹ್ಮಣ್ಯ ಜುಲೈ 26 : ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಗುರುವಾರ ಸಂಜೆ ವಾರದ ಸಪ್ತಾಹಿಕ ಸಭೆಯಲ್ಲಿ ಬ್ಯಾಂಕ್ ವ್ಯವಹಾರ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಯಿತು. ಸುಬ್ರಹ್ಮಣ್ಯ ಬ್ಯಾಂಕ್ ಆಫ್ ಬರೋಡ ಶಾಖೆಯ ಮ್ಯಾನೇಜರ್ ವಿಶ್ರುತ್ ಕುಮಾರ್ ಅವರು ಬ್ಯಾಂಕಿನ ವಿವಿಧ ಖಾತೆಗಳು, ವಾಣಿಜ್ಯ-ಕೃಷಿ ಸಾಲಗಳು, ಶಿಕ್ಷಣ ಸಾಲಗಳು ಸೇರಿದಂತೆ ಬ್ಯಾಂಕ್ ನಿಂದ ನೀಡುವ ಸೌಲಭ್ಯಗಳ ಬಗ್ಗೆ, ನಿರ್ವಹಣೆ ಬಗ್ಗೆ ಹಾಗೂ ವ್ಯವಹಾರಗಳ ಬಗ್ಗೆ ವಿವರವಾಗಿ ತಿಳಿಸಿದರು.
ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್ ವಹಿಸಿದ್ದರು. ವೇದಿಕೆಯಲ್ಲಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಚಿದಾನಂದ ಕುಳ, ಖಜಾಂಜಿ ಜಯಪ್ರಕಾಶ್ ಹಾಗೂ ಕ್ಲಬ್ ನ ಪೂರ್ವ ಅಧ್ಯಕ್ಷರುಗಳು ಸದಸ್ಯರು ಉಪಸ್ಥಿತರಿದ್ದರು.
- Friday
- November 22nd, 2024