- Tuesday
- January 28th, 2025
ಅಜ್ಜಾವರ: ಅಜ್ಜಾವರ ಗ್ರಾಮದಲ್ಲಿ ಕೇಂದ್ರ ಸರಕಾರಿ ಸಾಮ್ಯದ ಬಿಎಸ್ಎನ್ಎಲ್ ಸುಸಜ್ಜಿತ ಕಟ್ಟಡ ಮತ್ತು ಅತ್ಯಾಧುನಿಕ ಜನರೇಟರ್ ಸೇರಿದಂತೆ ಇತರೆ ಸಕಲ ವ್ಯವಸ್ಥೆಗಳು ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಇದೀಗ ಕಟ್ಟಡ ಸೇರಿದಂತೆ ಎಲ್ಲಾ ಸಾಧನಗಳು ಸರಿಯಾದ ನಿರ್ವಹಣೆಯಿಲ್ಲದೆ ಉಪಯೋಗಕ್ಕಿಲ್ಲ, ನೆಟ್ವರ್ಕ್ ಕೂಡ ತುಸು ದೂರವಾಗಿದೆ. ಅಜ್ಜಾವರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲಾ ಕಛೇರಿಗಳಿಗೆ ನೆಟ್ವರ್ಕ್ ಸಮಸ್ಯೆಗಳಿಂದಾಗಿ...
ಮಂಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿಯವರು ಇಂದು ಗುತ್ತಿಗಾರು ವಲಯ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ತಯಾರಾಗುವಂತೆ ಸಲಹೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎನ್ ಜಯಪ್ರಕಾಶ್ ರೈ, ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಮುಖರಾದ ಗಿರೀಶ್ ಕೊರಂಬಟ, ಎಸ್....
ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಲ್ಕುಂದ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಮಿಥುನ್ ಕುಲ್ಕುಂದ, ಉಪಾಧ್ಯಕ್ಷ ರಾಗಿ ಪ್ರದೀಪ್ ಬಸವನಮೂಲೆ, ಕಾರ್ಯದರ್ಶಿಯಾಗಿ ವಿನೋದ್ ಕುಲ್ಕುಂದ, ಜೊತೆ ಕಾರ್ಯದರ್ಶಿಯಾಗಿ ದಿವಿಶ್ ಕುಲ್ಕುಂದ, ಖಜಾಂಜಿಯಾಗಿ ಭರತ್ ಪಲ್ಲಿಗದ್ದೆ, ಕ್ರೀಡಾ ಕಾರ್ಯದರ್ಶಿಯಾಗಿ ರೋಹಿತ್ ಇಂಜಿರಾಡಿ ಮತ್ತು ಅಶ್ವಿಥ್ ಕುಲ್ಕುಂದ ಆಯ್ಕೆಯಾದರು.
ಸುಬ್ರಹ್ಮಣ್ಯ ಜುಲೈ 26 : ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಗುರುವಾರ ಸಂಜೆ ವಾರದ ಸಪ್ತಾಹಿಕ ಸಭೆಯಲ್ಲಿ ಬ್ಯಾಂಕ್ ವ್ಯವಹಾರ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಯಿತು. ಸುಬ್ರಹ್ಮಣ್ಯ ಬ್ಯಾಂಕ್ ಆಫ್ ಬರೋಡ ಶಾಖೆಯ ಮ್ಯಾನೇಜರ್ ವಿಶ್ರುತ್ ಕುಮಾರ್ ಅವರು ಬ್ಯಾಂಕಿನ ವಿವಿಧ ಖಾತೆಗಳು, ವಾಣಿಜ್ಯ-ಕೃಷಿ ಸಾಲಗಳು, ಶಿಕ್ಷಣ ಸಾಲಗಳು ಸೇರಿದಂತೆ ಬ್ಯಾಂಕ್ ನಿಂದ ನೀಡುವ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಜು.26 ಶುಕ್ರವಾರದಂದು ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇಲ್ಲಿ ಕಾರ್ಗಿಲ್ ವಿಜಯ ದಿವಸ್ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ನಿವೃತ್ತ ಯೋಧರಾದ ಪದ್ಮನಾಭ ಗೋಳ್ಯಾಡಿ ಅವರು ದೀಪ ಪ್ರಜ್ವಲನೆ ಮಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಎಂ.ಜೆ.ಎಫ್ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು....
ಸಂಪಾಜೆಯಲ್ಲಿ ಹಟ್ಟಿಯೊಂದರಿಂದ ಕಳೆದ ರಾತ್ರಿ ಗೋವುಗಳನ್ನು ಕದ್ದೊಯ್ದ ಘಟನೆ ಕಳೆದ ರಾತ್ರಿ ನಡೆದಿದೆ.ಸಂಪಾಜೆಯ ವಕೀಲರಾದ ಪುಷ್ಪರಾಜ್ ಅವರ ಹಟ್ಟಿಯಿಂದ ಎರಡು ದನಗಳನ್ನು ಕಳೆದ ರಾತ್ರಿ ಗೋಕಳ್ಳರು ಕದ್ದೊಯ್ದಿದ್ದು ಸುಳ್ಯ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈ ಭಾಗದಲ್ಲಿ ನಿರಂತರ ಕಳ್ಳತನ ನಡೆಯುತ್ತಿದ್ದರೂ ಪೋಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.
ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ಇಂದು ಆಚರಿಸಲಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಯೋಧರಾದ ಸುಬ್ರಹ್ಮಣ್ಯ ಹಾಗೂ ಕುಸುಮಾದರ ಆಗಮಿಸಿ ಕಾರ್ಗಿಲ್ ಯುದ್ಧದ ಬಗ್ಗೆ ವಿಸ್ತಾರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು ನಂತರ ಅವರನ್ನು ಶಾಲಾ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರಿ ನಿಯತ್ತಿ ಭಟ್ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಗಣೇಶ್...
ದೇವಚಳ್ಳ ಗ್ರಾಮದ ಮಣಿಯೂರು ಕಾಂಕ್ರೀಟ್ ರಸ್ತೆ ಯನ್ನು ಕೇರ ಸೀತಾರಾಮ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಚಂದ್ರಾವತಿ ರಾಮಣ್ಣ ಗೌಡ ಅಂಬೆಕಲ್ಲು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು. ಗುರುವ ಮಣಿಯೂರು ತೆಂಗಿನಕಾಯಿ ಒಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು,ಸದಸ್ಯರಾದ ಪ್ರಶಾಂತ್ ಮೆದು, ದುರ್ಗಾದಾಸ್ ಮೆತ್ತಡ್ಕ, ಸೂರ್ಯನಾರಾಯಣ ಮೂಲೆತೋಟ, ಜಯಪಾಲ ಅಂಬೆಕಲ್ಲು, ಮನಮೋಹನ್ ಅಂಬೆಕಲ್ಲು,...
ಸುಳ್ಯ:ಸುಳ್ಯ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಹಿರಿಯ ಸಹಕಾರಿ ನಿತ್ಯಾನಂದ ಮುಂಡೋಡಿ ಹಾಗೂ ಉಪಾಧ್ಯಕ್ಷರಾಗಿ ಪಿ.ಎಸ್.ಗಂಗಾಧರ ಪುನರಾಯ್ಕೆಯಾಗಿದ್ದಾರೆ. ಜು. 26ರಂದು ಸೊಸೈಟಿಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು.ಚುನಾವಣಾಧಿಕಾರಿ ಸಹಕಾರಿ ಸಂಘಗಳ ಅಧಿಕಾರಿ ಶಿವಲಿಂಗಯ್ಯರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ದೇಶಕರುಗಳಾದ ಪಿ.ಸಿ.ಜಯರಾಮ, ಎಸ್.ಸಂಶುದ್ದೀನ್, ಸೋಮಶೇಖರ ಕೊಯಿಂಗಾಜೆ, ಸುರೇಶ್ ಎಂ.ಎಚ್., ವಿನೂಪ್ ಮಲ್ಲಾರ, ಲಿಜೋ ಜೋಸ್ ಗುತ್ತಿಗಾರು,...
ಕಾರ್ಗಿಲ್ ನಲ್ಲಿ ನಮ್ಮ ಯೋಧರು ಮಾಡಿದ ಸಾಧನೆಯು ನಮಗೆಲ್ಲರಿಗೂ ಹೆಮ್ಮೆ.ಅತ್ಯಂತ ಕಾಠಿಣ್ಯ ಪ್ರದೇಶವಾದ ಕಾಗ್ರಿಲ್ ನಲ್ಲಿ ನಡೆದ ಯುದ್ಧದಲ್ಲಿ ನಮ್ಮ ಯೋಧರ ಅಪ್ರತಿಮ ಪರಾಕ್ರಮವು ವಿಜಯ ದುಂದುಬಿಯನ್ನು ಭಾರಿಸುವಂತೆ ಮಾಡಿದೆ.ಈ ವಿಜಯವು ಸರ್ವ ಭಾರತೀಯರಿಗೆ ಹೆಮ್ಮೆಯ ಪ್ರತೀಕವಾಗಿದೆ.ಯುವ ವಿದ್ಯಾರ್ಥಿಗಳಾದ ತಾವುಗಳು ಭವಿಷ್ಯದಲ್ಲಿ ಭಾರತೀಯ ಸೇನೆಗೆ ಸೇರಿ ಯೋಧರಾಗಿ ದೇಶಸೇವೆ ಮಾಡುವ ಸಂಕಲ್ಪ ಮಾಡಬೇಕಾಗಿದೆ.ದೇಶ ಸೇವೆಗೆ ದೊರಕುವ...
Loading posts...
All posts loaded
No more posts