ಕೊಯಮತ್ತೂರು ನಿವಾಸಿ ಸತೀಶ್ ಎಂಬಾತನನ್ನು ಅವರ ತಾಯಿ ಕುಕ್ಕೆ ಸುಬ್ರಮಣ್ಯದಲ್ಲಿ ಬಿಟ್ಟು ಹೋದ ಘಟನೆ ನಡೆದಿರುತ್ತದೆ. ಈ ವ್ಯಕ್ತಿಯು ಸಾರ್ವಜನಿಕರಿಗೆ ಕುಕ್ಕೆ ಸುಬ್ರಹ್ಮಣ್ಯ ಪುಟ್ ಪಾತ್ ನಲ್ಲಿ ಪತ್ತೆಯಾಗುತ್ತಾನೆ. ಜೋರಾದ ಮಳೆಗೆ ಪುಟ್ ಪಾತ್ ನಲ್ಲಿ ಮಲಗಿಕೊಂಡು ಒದ್ದೆಯಾಗುತ್ತಿರುವುದನ್ನು ಗಮನಿಸಿದ ರಾಧಾ ಕೃಷ್ಣ, ಶಿವ ಭಟ್ ಮಾಧ್ಯಮ ಅವರು ಈ ವ್ಯಕ್ತಿಯನ್ನು ಮಾತನಾಡಿಸಿದಾಗ ತಮಿಳಲ್ಲಿ ಮಾತನಾಡುತ್ತಿದ್ದು ಯಾವ ಊರು ಕೇಳಿದಾಗ ಕೊಯಂಬತ್ತೂರು ಎಂದು ಹೇಳಿರುತ್ತಾನೆ.
ತಕ್ಷಣ ಗ್ರಾಮ ಪಂಚಾಯತ್ ಪಿಡಿಓ ಮಹೇಶ್ ಅವರನ್ನು ಸಂಪರ್ಕಿಸಿ ಒಬ್ಬ ವ್ಯಕ್ತಿ ಪುಟ್ ಪಾತ್ ಅಲ್ಲಿ ಒದ್ದೆಯಾಗಿ ಕೊಂಡು ಮಲಗಿದ್ದಾನೆ. ಎಂದಾಗ ಮಹೇಶ್ ಅವರು ಪಂಚಾಯತ್ ನಿಂದ ಇಬ್ಬರೂ ಅಧಿಕಾರಿಗಳನ್ನು ಕಳಿಸಿಕೊಟ್ಟಿರುತ್ತಾರೆ.
ಈತನ ಈ ದಯನೀಯ ಸ್ಥಿತಿಯನ್ನು ಕಂಡು ಮಳೆ ಇಲ್ಲದ ಒಂದು ಕಟ್ಟಡ ಬದಿಗೆ ಕರೆದುಕೊಂಡು ಬಂದು ಆತನಿಗೆ ತಿಂಡಿಯನ್ನು ತಿನ್ನಿಸಿ ಸ್ನಾನ ಮಾಡಿಸಿ ಹೊಸ ಬಟ್ಟೆಯನ್ನು ತೊಡಿಸಿ ಆತನನ್ನು ವಿಚಾರಿಸಿದಾಗ ಹರೀಶ್ ಕುಮಾರ್ ಕೊಯಮತ್ತೂರು, ಗಾಂಧಿನಗರ ಎಂದು ಹೇಳುತಿದ್ದ. ಕೊಯಂಬತ್ತೂರು ಪೊಲೀಸರನ್ನು ಪೋಲೀಸ್ ಹೆಲ್ಪ್ ಲೈನ್ ಮೂಲಕ ಸಂಪರ್ಕ ಮಾಡಿದಾಗ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಕೊನೆಯಲ್ಲಿ ಕೊಯಂಬತ್ತೂರು ಸ್ಥಳಿಯ ಮಾಧ್ಯಮವನ್ನು ಸಂಪರ್ಕಿಸಿದಾಗ(ಈರನೆಂಜಂ) ಮಹೇಂದ್ರನ್ ನಡೆಸುವ (NGO)ಸಂಸ್ಥೆ ಮಹೇಂದ್ರನ್ ಎಂಬುವರು ಸಂಪರ್ಕಕ್ಕೆ ಸಿಗುತ್ತಾರೆ. ಮಹೇಂದ್ರನ್ ಅವರು ಈ ವ್ಯಕ್ತಿಯ ಜೊತೆ ಫೋನಿನ ಮೂಲಕ ತಮಿಳು ಭಾಷೆಯಲ್ಲಿ ಮಾತನಾಡುತ್ತಾರೆ. ಈತನ ಊರು ಯಾವುದು ಎಂದು ಕೇಳಿದಾಗ ಕೊಯಂಬತ್ತೂರು ಗಾಂಧಿನಗರ ಆರ್.ಎಸ್.ಪುರಂ ಇಂದು ಮಹೇಂದ್ರನ್ ಅವರ ಜೊತೆ ಮಾತನಾಡುತ್ತಾರೆ. ತಾಯಿ ಸರಸ್ವತಿ ಬೊಂಡ ಬಜ್ಜಿ ಮರುತ್ತಾರೆ, ತಂದೆ ಇಲ್ಲ, ಇಬ್ಬರು ತಂಗಿಯರಿದ್ದಾರೆ ಎಂದು ಹೇಳುತ್ತಾನೆ. ಈ ಮಾಹಿತಿಯನ್ನು ಆಧರಿಸಿ ಮಹೇಂದ್ರನ್ ಅವರು ಈ ವ್ಯಕ್ತಿಯ ಹೆಸರು ಸತೀಶ್ ಎಂದು ಆರ್.ಎಸ್.ಪುರಂ ನಿವಾಸಿ ಎಂದು ಪತ್ತೆ ಮಾಡಿ ಕುಕ್ಕೆ ಸುಬ್ರಹ್ಮಣ್ಯ ಮಾಧ್ಯಮವನ್ನು ಸಂಪರ್ಕಿಸುತ್ತಾರೆ. ಪಿಡಿಓ ಅವರು ತಿಳಿಸಿದ ಮೇರೆಗೆ ಈ ವ್ಯಕ್ತಿಯ ರಕ್ಷಣೆಗೆ ತಕ್ಷಣ ಧಾವಿಸಿದ ಸೀನಿಯರ್ ಚೇಂಬರ್ ಅಧ್ಯಕ್ಷ ಡಾ|ರವಿ ಕಕ್ಕೆ ಪದವು ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ ಅವರು ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಅಧಿಕಾರಿ ಜುಬಿನ್ ಮಹಾಪಾತ್ರ ಅವರನ್ನು ಸಂಪರ್ಕ ಮಾಡಿ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡುತ್ತಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಒಪ್ಪಿಗೆ ಪತ್ರ, ಗ್ರಾಮ ಪಂಚಾಯಿತ್ ನಿಂದ ಒಪ್ಪಿಗೆ ಪತ್ರವನ್ನು ಪಡೆದು ರಸ್ತೆ ಬದಿಯಲ್ಲಿ ಪತ್ತೆಯಾದ ಸತೀಶ್ ಎಂಬ ವ್ಯಕ್ತಿಯನ್ನು ಹಾಗೂ ಇನ್ನೊಬ್ಬ ಮಾತು ಬಾರದೆ ಮಾನಸಿಕವಾಗಿ ಬಳಲುತ್ತಿದ್ದ ಇನ್ನೊಬ್ಬ ವ್ಯಕ್ತಿಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಆಂಬುಲೆನ್ಸ್ ವಾಹನದ ಮೂಲಕ ಬೆಂಗಳೂರಿನ ಜನಸ್ನೇಹಿ ಸೇವಾ ಆಶ್ರಮಕ್ಕೆ ಕಳಿಸಿ ಕೊಟ್ಟಿರುತ್ತಾರೆ.
ಬೆಂಗಳೂರಿಗೆ ಕಳಿಸಿಕೊಟ್ಟ ಮೇಲೆ ಕೊಯಂಬತ್ತೂರು (ಈರನೆಂಜಂ) ಮಹೇಂದ್ರನ್ ನಡೆಸುವ (NGO)ಸಂಸ್ಥೆ
ಮುಖ್ಯಸ್ಥ ಮಹೇಂದ್ರನ್ ಅವರು ಮಾಧ್ಯಮಕ್ಕೆ ಫೋನ್ ಮಾಡಿ ಸತೀಶ್ ಎಂಬ ವ್ಯಕ್ತಿಯ ತಾಯಿ ಪತ್ತೆಯಾಗಿದ್ದಾರೆ. ಅವರು ಈಗ ಎಲ್ಲಿದ್ದಾರೆ ಎಂದು ಕೇಳಿದಾಗ ಅವರನ್ನು ನಾವು ರಕ್ಷಣೆ ಮಾಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಆಂಬುಲೆನ್ಸ್ ವಾಹನದ ಮೂಲಕ ಬೆಂಗಳೂರು ಜನಸ್ನೇಹಿ ಸೇವಾಶ್ರಮಕ್ಕೆ ಕಳಿಸಿಕೊಟ್ಟಿದ್ದೇವೆ ಎಂದು ಮಾಹಿತಿಯನ್ನು ನೀಡಿದ್ದೇವೆ.
ಜನಸ್ನೇಹಿ ಆಶ್ರಮಕ್ಕೆ ಬಂದು ಸತೀಶ್ ಅವರನ್ನು ಕರಕೊಂಡು ಹೋಗಿ ಎಂದು ಮಾಹಿತಿಯನ್ನು ಹಾಗೂ ಪತ್ರಗಳನ್ನು ಅವರಿಗೆ ಕಳಿಸಿ ಕೊಡಲಾಗಿದೆ
ಇಬ್ಬರೂ ಮಾನಸಿಕವಾಗಿ ಬಳಲುತ್ತಿದ್ದ ವ್ಯಕ್ತಿಗಳನ್ನ ರಕ್ಷಣೆ ಮಾಡಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿ ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ಹಾಗೂ AEO ಯೇಸುರಾಜ್ ಅವರು ತಕ್ಷಣ ಸ್ಪಂದಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಪಟ್ಟ ಆಂಬುಲೆನ್ಸ್ ವಾಹನವನ್ನು ನೀಡಿರುತ್ತಾರೆ.ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ ಅವರು ಅಧಿಕಾರಿಗಳ ಜೊತೆ ಮಾತನಾಡಿ ತಕ್ಷಣ ವ್ಯವಸ್ಥೆಯನ್ನ ಮಾಡಿರುತ್ತಾರೆ.
ಈ ಎಲ್ಲಾ ಕೆಲಸದಲ್ಲಿ ಮುಂದೆ ನಿಂತು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಸ್ಥಾಪಕರಾದ ಡಾ|ರವಿ ಕಕ್ಕೆ ಪದವು ರಕ್ಷಣೆ ಕಾರ್ಯ ಮಾಡಿರುತ್ತಾರೆ.
ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಕಾರ್ತಿಕ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ಮಹೇಶ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಧಾಕೃಷ್ಣ, ವೀರೇಶ್, ದೇವಿ ಪ್ರಸಾದ್ ಸ್ನಾನ ಮಾಡಿಸಿ ಊಟ ಕೊಟ್ಟು ಆರೈಕೆ ಮಾಡಿರುತ್ತಾರೆ.ಶಿವ ಭಟ್ ಸಹಕರಿಸಿದ್ದಾರೆ.
- Tuesday
- December 3rd, 2024