
ರೋಟರಿ ಕ್ಲಬ್ ವತಿಯಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿಯ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳ ವಿತರಣೆಯನ್ನು ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ರೊ. ಯೋಗಿತಗೋಪಿನಾಥ್ ವಹಿಸಿದ್ದರು.
ಶಾಲೆಯ ಹಳೆ ವಿದ್ಯಾರ್ಥಿಯು ಆಗಿರತಕ್ಕಂತಹ ರೊ ಚಂದ್ರಶೇಖರ್ ಪೇರಾಲುರವರು ಸಂಪೂರ್ಣ ಪುಸ್ತಕಗಳ ಪ್ರಾಯೋಜಕರಾಗಿ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸಿ ಹಾರೈಸಿದರು. ನೆಹರು ಸ್ಮಾರಕ ಪದವಿಬ್ ಪೂರ್ವ ಕಾಲೇಜು ಅರಂತೋಡು ಇದರ ನಿವೃತ್ತ ಪ್ರಾಂಶುಪಾಲರಾದ ರೊ. ರಮ ವೈ. ಕೆ. ಯವರು ಪುಸ್ತಕವನ್ನು ಮಕ್ಕಳಿಗೆ ಹಸ್ತಾಂತರಿಸಿದರು. ಹಾಗೂ ತಮ್ಮಲ್ಲಿರುವ ಕೆಲವು ಒಳ್ಳೆಯ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ನೀಡಿದರು.
ಕಾರ್ಯದರ್ಶಿ ರೊ ಡಾ ಹರ್ಷಿತ ಪುರುಷೋತ್ತಮ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ನಿಕಟ ಪೂರ್ವಾಧ್ಯಕ್ಷ ರೊ ಆನಂದ ಖಂಡಿಗ , ರೊ ಡಾ ರಾಮ್ ಮೋಹನ್, ರೊ ಸನತ್ ಪರಿಯಡ್ಕ , ರೊ ಮಧುಸೂಧನ್, ರೊ ಲತಾಮಧುಸೂಧನ್, ರೊ ಸತೀಶ್ ಕೆ ಜಿ . ರೊ ಮಧುರ ಜಗದೀಶ್ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಿಲ್ಪಾ ,ಶಾಲ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಶ್ರೀ ಮೋಹನ್ ದಾಸ್ ಕುಕ್ಕುಡೇಲು ಮತ್ತು ಹಳೇವಿದ್ಯಾರ್ಥಿಸಂಘದ ಅಧ್ಯಕ್ಷರು ಶ್ರೀ ದೇವಿದಾಸ್ ಕುಕ್ಕುಡೇಲು ಉಪಸ್ಥಿತರಿದ್ದರು.