ಸುಬ್ರಹ್ಮಣ್ಯ ಜುಲೈ 24 : ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವತಿಯಿಂದ ಸುಬ್ರಹ್ಮಣ್ಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಘಟಕ ಹಾಗೂ ಇನ್ನರ್ ವೀಲ್ ಘಟಕ ಸುಬ್ರಹ್ಮಣ್ಯ ಇವುಗಳ ಸಹಕಾರದೊಂದಿಗೆ ಎರಡು ಗ್ರಾಮಗಳ ರೈತರಿಗೆ ಜೇನು ಕೃಷಿ, ಬಿದಿರು ಕೃಷಿ ಹಾಗೂ ಮಣ್ಣು ಪರೀಕ್ಷೆ ಮತ್ತು ಗೊಬ್ಬರದ ಬಗ್ಗೆ ಮಾಹಿತಿ ಕಾರ್ಯಕ್ರಮವು ಸಂಘದ ಸಭಾಭವನದಲ್ಲಿ ಬುಧವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಗ್ರಾಮ ಜನ್ಯ ರೈತ ಉತ್ಪಾದಕ ಸಂಘ ಪುತ್ತೂರು ಇಲ್ಲಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ಜೇನು ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಬಿದಿರು ಕೃಷಿಯ ಬಗ್ಗೆ ಗ್ರಾಮ ಜನ್ಯದ ನಿರ್ದೇಶಕರಾದ ರಾಮ್ ಪುಲಿಕ್ ಕರಿಯಲ ಹಾಗೂ ಮಣ್ಣು ಪರೀಕ್ಷೆ ಮತ್ತು ಗೊಬ್ಬರದ ಬಗ್ಗೆ ಮಡಿಕೇರಿಯ ಮಾದೇಟಿರ ತಿಮ್ಮಯ್ಯ ಮಾಹಿತಿ ನೀಡಿದರು.
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಎಲ್ಲರನ್ನು ಸ್ವಾಗತಿಸಿದರು .
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಚಂದ್ರಶೇಖರ ನಾಯರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಕುಮಾರ ಬಾಳುಗೋಡು, ಸೀನಿಯರ್ ಚೇಂಬರ್ ಅಧ್ಯಕ್ಷರಾದ ಡಾlರವಿ ಕಕ್ಕೆಪದವು ಹಾಗೂ ಇನ್ನರ್ ವೀಲ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳು, ಪ್ರಸಕ್ತ ನಿರ್ದೇಶಕರುಗಳು, ಸದಸ್ಯರುಗಳು ಹಾಗೂ ಎರಡು ಗ್ರಾಮಗಳ ರೈತರು ಭಾಗವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್ ಕಟ್ಟೆಮನೆ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಮಾಧವ ದೇವರಗದ್ದೆ ವಂದಿಸಿದರು.