Ad Widget

ಗುತ್ತಿಗಾರು : ಮಕ್ಕಳ ರಂಗ ಶಿಕ್ಷಣ,ಅಭಿನಯ ತರಬೇತಿ ಡ್ರಾಮಾ ಕ್ಲಾಸ್ ಪ್ರಾರಂಭ


” ಅಭಿನಯ ಎಂಬುದು ಒಂದು ಸುಂದರ ಪರಿಕಲ್ಪನೆ ” ಎಂಬ ಧ್ಯೇಯ ವಾಕ್ಯದೊಂದಿಗೆ
25 ಜುಲೈ 2024 ಗುರುವಾರ ಗುತ್ತಿಗಾರಿನಲ್ಲಿ ವಿದ್ಯಾರ್ಥಿಗಳ ಅಭಿನಯ ರಂಗ ಶಿಕ್ಷಣ ತರಗತಿಗಳು ಪ್ರಾರಂಭಗೊಳ್ಳಲಿದೆ.

ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದ, ರಂಗ ಭೂಮಿಯ ಹಲವು ಪ್ರಕಾರಗಳು ಹಾಗೂ ಸ್ಪಷ್ಟ ಮಾತುಗಾರಿಕೆ, ಸ್ಪಷ್ಟ ಉಚ್ಚಾರಣೆ, ವೇದಿಕೆ ಧೈರ್ಯ, ರಂಗ ಜ್ಞಾನದೊಂದಿಗೆ ಪೌರಾಣಿಕ, ಐತಿಹಾಸಿಕ, ಜಾನಪದ ರಂಗ ಪಠ್ಯ ಆಯ್ದು ಕೊಂಡು,ವಿದ್ಯಾರ್ಥಿಗಳ ನಾಟಕ ತರಬೇತಿ ನಡೆಸಿ ಪ್ರದರ್ಶನ ನೀಡಿ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
ಪ. ಪಂಗಡ ಸಭಾಭವನ ಗುತ್ತಿಗಾರು  ಇಲ್ಲಿ ಪ್ರತಿ ಗುರುವಾರ ಸಂಜೆ 4:30 ರಿಂದ 6:00 ರ ವರೆಗೆ ನಡೆಯುವ ಈ ಮಕ್ಕಳ ಅಭಿನಯ ರಂಗ ಶಿಕ್ಷಣ ತರಬೇತಿ ಕಾರ್ಯಾಗಾರದಲ್ಲಿ ಸೇರ್ಪಡೆಗೊಳ್ಳುವ ಆಸಕ್ತ ವಿದ್ಯಾರ್ಥಿಗಳು 9686714517 ಈ ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!