- Thursday
- November 21st, 2024
ಪಿ ಎಮ್ ಶ್ರೀ ಶಾಲೆ ಗುತ್ತಿಗಾರು ಇದರ ಪೋಷಕರ ಸಭೆಯು ಇತ್ತೀಚೆಗೆ ನಡೆದಿದ್ದು ಇದರಲ್ಲಿ ನೂತನ ಎಸ್ ಡಿ ಎಂ ಸಿ ಸಮಿತಿ ರಚನೆ ಮಾಡಲಾಯಿತು.ಎಸ್ ಡಿ. ಎಂ.ಸಿ. ಯ ನೂತನ ಅಧ್ಯಕ್ಷರಾಗಿ ವೆಂಕಟ್ ದಂಬೆಕೋಡಿ ಅವರು ಎರಡನೇ ಅವಧಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಮತಿ ಪ್ರಸನ್ನ ಆಮೆ ಆಯ್ಕೆಯಾದರು. ಸದಸ್ಯರುಗಳಾಗಿ ಅಶೋಕ್ ನೆಕ್ರಾಜೆ, ದಿನೇಶ್ ಹಾಲೆ...
ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಇಂದು ರಾತ್ರಿ ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಸವಾರರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ . ಓರ್ವ ಸವಾರ ಆಡೂರು ಮೂಲದವರಾಗಿದ್ದು ಅವರ ತಲೆಗೆ ಗಾಯಗಳಾಗಿದ್ದು ಇನ್ನೋರ್ವ ಸವಾರನ ಕೈ ಕಾಲುಗಳಿಗೆ ಗಾಯಗಳಾಗಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ ಕೆಲ ದಿನಗಳ ಹಿಂದೆ...
ಆಟೋ ಚಾಲಕರ ಸಂಘ B.M.S ಕಲ್ಲುಗುಂಡಿ ಘಟಕದ ವತಿಯಿಂದ B.M.S ಸಂಸ್ಥಾಪಕರಾದ ದತ್ತೊಪಂತ್ ಅವರ ದಿನಾಚರಣೆಯನ್ನು ಸಂಘದ ಅದ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ ಅವರ ಉಪಸ್ಥಿತಿಯಲ್ಲಿ ವಿಷ್ಣುಮೂರ್ತಿ ಸಭಾಂಗಣದಲ್ಲಿ ಆಚರಿಸಲಾಯಿತು.ಪ್ರಾಸ್ತಾವಿಕವಾಗಿ ಕೇಶವ ಬಂಗ್ಲೆಗುಡ್ಡೆ ಮತ್ತು ರವಿಕುಮಾರ್ ನಿಡಿಂಜಿ ಅವರು ಸಂಘಟನೆ ಬೆಳೆದು ಬಂದ ರೀತಿ ಅವರ ಜೀವನ ಚರಿತ್ರೆ ಬಗ್ಗೆ ವಿವರಿಸಿದರು. ಸಂಘದ ಪಧಾದಿಕರಿಗಳು ಸದಸ್ಯರು ಉಪಸ್ಥಿತಿರಿದ್ದರು.
ಸುಬ್ರಹ್ಮಣ್ಯ ಜುಲೈ 24 : ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವತಿಯಿಂದ ಸುಬ್ರಹ್ಮಣ್ಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಘಟಕ ಹಾಗೂ ಇನ್ನರ್ ವೀಲ್ ಘಟಕ ಸುಬ್ರಹ್ಮಣ್ಯ ಇವುಗಳ ಸಹಕಾರದೊಂದಿಗೆ ಎರಡು ಗ್ರಾಮಗಳ ರೈತರಿಗೆ ಜೇನು ಕೃಷಿ, ಬಿದಿರು ಕೃಷಿ ಹಾಗೂ ಮಣ್ಣು ಪರೀಕ್ಷೆ ಮತ್ತು ಗೊಬ್ಬರದ...
ಮಡಪ್ಪಾಡಿ:- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಲ್ಲಿ ಶ್ರೀ ರಾಮ ಸಂಘದ ಧನ್ಯಕುಮಾರ್ ರವರ ತಂದೆಯವರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಮಂಜೂರು ಆದ ರೂ. 25,000/- ಮೊತ್ತದ ಚೆಕ್ ನ್ನು ಬಲ್ಕಜೆ ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಒಕ್ಕೂಟದ ಅಧ್ಯಕ್ಷರಾದ ವಸಂತ ಕುಮಾರ್ ರವರು,...
ಕಾಲದ ಅರಿವು ಮೂಡಿಸುವ ಹೊಸ ಸಂದರ್ಭವನ್ನು ಸೃಷ್ಟಿಸಿರುವ ಆಟಿ ತಿಂಗಳು ಪ್ರಕೃತಿ ಒಡ್ಡುವ ಸವಾಲುಗಳಿಗೆ ಪ್ರಕೃತಿಯಿಂದಲೇ ಉತ್ತರ ನೀಡುವ ವಿಶಿಷ್ಟ ತಿಂಗಳು ಎಂದು ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ಳಾರೆ...
ದೇವ:- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾತೃ ಭೂಮಿ ಸಂಘದ ವಿಪಿನ್ ರವರ ತಂದೆ ಚಂದ್ರಶೇಖರರವರ ಅನಾರೋಗ್ಯ ನಿಮಿತ್ತ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಲ್ಲಿ ಮಂಜೂರು ಆದ ರೂ. 17,000/- ಮೊತ್ತದ ಚೆಕ್ ನ್ನು ವಲಯ ಒಕ್ಕೂಟದ ಅಧ್ಯಕ್ಷರಾದ ಯೋಗೀಶ್ ದೇವರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೇಸರಿ ಸಂಘದ ಹುಕ್ರಪ್ಪರವರ ಪತ್ನಿ ಕುಸುಮಾವತಿರವರ ಅನಾರೋಗ್ಯ ನಿಮಿತ್ತ ಸಂಪೂರ್ಣ ಸುರಕ್ಷಾದಲ್ಲಿ ಮಂಜೂರು ಆದ ರೂ. 15,000/- ಮೊತ್ತದ ಚೆಕ್ ನ್ನು ಕಮಿಲ ಮೊಗ್ರ ಬಳ್ಳಕ್ಕ ಒಕ್ಕೂಟದ ಅಧ್ಯಕ್ಷರಾದ ಮಧುಕರರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು, ಸೇವಾಪ್ರತಿನಿಧಿಯವರಾದ ಅಶ್ವಿನಿರವರು,...
" ಅಭಿನಯ ಎಂಬುದು ಒಂದು ಸುಂದರ ಪರಿಕಲ್ಪನೆ " ಎಂಬ ಧ್ಯೇಯ ವಾಕ್ಯದೊಂದಿಗೆ 25 ಜುಲೈ 2024 ಗುರುವಾರ ಗುತ್ತಿಗಾರಿನಲ್ಲಿ ವಿದ್ಯಾರ್ಥಿಗಳ ಅಭಿನಯ ರಂಗ ಶಿಕ್ಷಣ ತರಗತಿಗಳು ಪ್ರಾರಂಭಗೊಳ್ಳಲಿದೆ. ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದ, ರಂಗ ಭೂಮಿಯ ಹಲವು ಪ್ರಕಾರಗಳು ಹಾಗೂ ಸ್ಪಷ್ಟ ಮಾತುಗಾರಿಕೆ, ಸ್ಪಷ್ಟ ಉಚ್ಚಾರಣೆ, ವೇದಿಕೆ ಧೈರ್ಯ, ರಂಗ...
ಏನೆಕಲ್ಲು ಗ್ರಾಮದ ದೇವರಹಳ್ಳಿ ದೊಡ್ಡಮನೆ ಲಿಂಗಪ್ಪ ಗೌಡ(ಜಯರಾಮ ಮಾಣಿಬೈಲು) ಎಂಬುವವರು ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರಿಗೆ 64 ವರ್ಷ ವಯಸ್ಸಾಗಿತ್ತು.ಇವರು ದೇವರಹಳ್ಳಿಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು. ಅಲ್ಲದೇ ಮಾಣಿಬೈಲು ಕುಟುಂಬದ ಊರಿನ ದೈವದ ಪೂಜಾರಿಯಾಗಿ ಸೇವೆ ಮಾಡಿದ್ದರು.ಮೃತರು ಪತ್ನಿ, ಓರ್ವ ಪುತ್ರ, ಸಹೋದರ-ಸಹೋದರಿಯರು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
Loading posts...
All posts loaded
No more posts