ವಿದ್ಯುತ್ ಲೈನ್ ನ ಕಂಬಗಳು ಮುರಿದು ಬಿದ್ದಾಗ ತುರ್ತು ಕಾಮಗಾರಿಗಳನ್ನು ಮಾಡಿದ ಗುತ್ತಿಗೆದಾರರಿಗೆ ಬಿಲ್ ನಲ್ಲಿ ಮೊದಲಿಗಿಂತ ಕಡಿತ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇಲಾಖೆ ಸ್ಪಂದಿಸಿಲ್ಲವೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಕಾಮಗಾರಿ ನಡೆಸದೇ ಮುಷ್ಕರ ನಡೆಸಲು ನಿರ್ಧರಿಸಿತ್ತು. ಇಂದು ಸುಬ್ರಹ್ಮಣ್ಯದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಗುತ್ತಿಗೆದಾರರ ಸಮಸ್ಯೆ ಬಗ್ಗೆ ಮೆಸ್ಕಾಂ ಅದೀಕ್ಷಕ ಅಭಿಯಂತರರು ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಅಧಿಕಾರಿಗಳ ಭರವಸೆ ಹಾಗೂ ಗ್ರಾಹಕರ ಹಿತದೃಷ್ಠಿಯಿಂದ ಎಲ್ಲಾ ಕಾಮಗಾರಿಗಳನ್ನು ಇಂದಿನಿಂದ ಪ್ರಾರಂಭಿಸಲು ಸಭೆಯಲ್ಲಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ತೀರ್ಮಾನಿಸಿದರು.
ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಪೈಕ, ಜಿಲ್ಲಾ ಕಾರ್ಯಕಾರಿ ಸಮಿತಿಯ ಮಾಯಿಲಪ್ಪ ಸಂಕೇಶ, ತಾಲೂಕು ಕಾರ್ಯದರ್ಶಿ ಹರೀಶ್ಚಂದ್ರ ಕೇಪಳಕಜೆ, ಖಜಾಂಜಿ ಮಧುಕಿರಣ್ ಸಂಘದ ಹಿರಿಯರಾದ ವಸಂತ ಕೆದಿಲ, ಪ್ರದೀಪ್ ಪ್ರಭು, ಕಾರ್ಯಕಾರಿ ಸಮಿತಿಯ ಚಿದಾನಂದ ಮಾಪಲಕಜೆ, ಸತ್ಯ ನಾರಾಯಣ ದಯಾನಂದ ಕನ್ನಡ್ಕ, ರಾಮ ಜೋಯಿಸ, ಧನಂಜಯ ಬಳ್ಪ, ಅಭಿಲಾಷ್ ಕಡಬ ದಯಾನಂದ ಕೊಂಬಾರು ಮತ್ತು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.