ಶಾಲಾ ವರಾಂಡದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ಭಂಧಿಸಿ ಸರಕಾರ ಸುತ್ತೋಲೆ ಹೊರಡಿಸಿರುವುದನ್ನು ಖಂಡಿಸಿ ಸರ್ಕಾರದ ಧೋರಣೆ ವಿರುದ್ಧ ಸುಳ್ಯ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ಅಧಿವೇಶನ ಮುಕ್ತಾಯಕ್ಕೆ ಮುನ್ನ ಈ ಆದೇಶವನ್ನು ಹಿಂಪಡೆಯಬೇಕು ಎಂದು ಅಲ್ಲದೇ , ಈ ಭಾಗ ಕಾಂಗ್ರೆಸ್ ನಾಯಕರುಗಳು ಕೂಡ ಇದಕ್ಕೆ ಧ್ವನಿಗೂಡಿಸಬೇಕು ಎಂದು ಹೇಳಿದರು. ಹಿಂದಿನಿಂದಲೇ ಹಿರಿಯರು ಸಾಮರಸ್ಯದಿಂದ ಯಾವುದೇ ಫಲಾಪೇಕ್ಷವಿಲ್ಲದೇ ಶಾಲೆಗಳ ನಿರ್ಮಾಣಕ್ಕೆ ಕೈ ಜೊಡಿಸಿದ್ದು, ಇದೀಗ ಕಾಂಗ್ರೆಸ್ ಧರ್ಮಗಳ ಮಧ್ಯೆ ಕಂದಕವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ವಿನಯಕುಮಾರ್ ಮುಳುಗಾಡು, ಎ ವಿ ತೀರ್ಥರಾಮ ಪ್ರತಿಭಟನ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಕೇಶ್ ರೈ ಕೆಡೆಂಜಿ , ಸುಬೋದ್ ಶೆಟ್ಟಿ ಮೇನಾಲ, ಹೇಮಂತ್ ಕಂದಡ್ಕ , ವಿಕ್ರಂ ಎ ವಿ ಅಡ್ಪಂಗಾಯ , ಹರೀಶ್ ಕಂಜಿಪಿಲಿ , ಸುನಿಲ್ ಕೇರ್ಪಳ , ಜಯರಾಜ್ ಕುಕ್ಕೇಟಿ , ವಿನುತ ಪಾತಿಕಲ್ಲು , ಇಂದಿರಾ , ಎಸ್ ಎಂ ನಾರಾಯಣ , ಗುಣಾವತಿ ಕೊಲ್ಲಂತಡ್ಕ , ಪುಷ್ಪಾ ಮೇದಪ್ಪ, ಬೂಡು ರಾಧಾಕೃಷ್ಣ ಸೇರಿದಂತೆ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಯಗಳ ಕಾರ್ಯಕರ್ತರು ಉಪಸ್ಥಿತರಿದ್ದರು. ಲತೀಶ್ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು.