ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆಯು ಜು. 21ರಂದು ಸುಳ್ಯದ ಗ್ಯಾರೇಜು ಮಾಲಕರ ಸಂಘದ ಸಭಾಂಗಣದಲ್ಲಿ ಸಹಕಾರಿಯ ಅಧ್ಯಕ್ಷರಾದ ಜನಾರ್ಧನ ದೋಳ ಇವರ ಅಧ್ಯಕ್ಷತೆಯಲ್ಲಿ ಜರಗಿತು.
2023ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು ಕೇವಲ ಒಂಬತ್ತು ತಿಂಗಳಿನಲ್ಲಿ ರೂ. 5,60,70,219 ವ್ಯವಹಾರ ನಡೆಸಿ ರೂ. 31,951 ಲಾಭ ಗಳಿಸಿದೆ. ಸಂಘವು ರೂ. 5,90,500 ‘ಎ’ ತರಗತಿ ಪಾಲುಬಂಡವಾಳ ಹೊಂದಿದ್ದು, ರೂ. 1.09 ಕೋಟಿಗೂ ಮಿಕ್ಕಿ ವಿವಿಧ ಠೇವಣಾತಿಯನ್ನು ಹೊಂದಿದ್ದು 2023-24ನೇ ಆರ್ಥಿಕ ವರ್ಷದಲ್ಲಿ ಒಟ್ಟು ರೂ. 5,05,449 ಆದಾಯ ಗಳಿಸಿದೆ ಎಂದು ಸಭೆಯನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸಹಕಾರಿಯ ಅಧ್ಯಕ್ಷ ಜನಾರ್ಧನ ದೋಳ ಹೇಳಿದರು. ಸೊಸೈಟಿಯ ವೃತ್ತಿಪರ ನಿರ್ದೇಶಕರಾದ ಡಾ. ಪುರುಷೋತ್ತಮ ಕಟ್ಟೆಮನೆ ಸ್ವಾಗತಿಸಿ, ಸತೀಶ್ ಕೆ.ಜಿ. ವಂದಿಸಿದರು. ಶ್ರೀಮತಿ ಭವಾನಿ ಬಿಳಿಮಲೆ ಮತ್ತು ಶ್ರೀಮತಿ ಯಶೋಧ ಪೇರಡ್ಕ ಪ್ರಾರ್ಥಿಸಿದರು. ಪ್ರಕಾಶ್ ಕೇರ್ಪಳ ಮಹಾಸಭೆಯ ನೋಟೀಸ್ ಅನ್ನು ಓದಿ ದಾಖಲಿಸಿದರು. 2024-25ನೇ ಸಾಲಿಗೆ ತಯಾರಿಸಿದ ಮುಂಗಡ ಪತ್ರವನ್ನು ಸಹಕಾರಿ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಅಚ್ರಪ್ಪಾಡಿ ಮಂಡಿಸಿದರು. 2023-24ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ಸಭೆಗೆ ಮಂಡಿಸಿದರು. ದೀಕ್ಷಿತ್ ಕುಮಾರ್ ಪಾನತ್ತಿಲ 2024-25ನೇ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿ ಬಗ್ಗೆ ಮಾಹಿತಿ ನೀಡಿದರು. ಸಹಕಾರಿಯ ವೃತ್ತಿಪರ ನಿರ್ದೇಶಕ ಆನಂದ ಗೌಡ ಖಂಡಿಗ ಮತ್ತು ನಿರ್ದೆಶಕರಾದ ಮಹೇಶ್ ಮೇರ್ಕಜೆ ಸಹಕಾರಿಯ ಬೆಳವಣಿಗೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಹಕಾರಿಯ ಸದಸ್ಯರಾದ ಸುರೇಶ್ ಅಮೈ, ಶಿವರಾಮ ಕೇರ್ಪಳ, ಮೇಘರಾಜ್ ಕೆವಿಜಿಪಿ, ಮಲ್ಲೇಶ್ ಬೆಟ್ಟಂಪಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸೊಸೈಟಿ ಆಶ್ರಯದಲ್ಲಿ ಪ್ರಾರಂಭಗೊಂಡ ಸ್ವ-ಸಹಾಯ ಸಂಘಗಳ ಉದ್ಘಾಟನೆ ನಡೆಯಿತು. ಅದೃಷ್ಟ ಚೀಟಿಯಲ್ಲಿ ಆಯ್ಕೆಯಾದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ರಾಘವ ಗೌಡ ಮದುವೆಗದ್ದೆ, ಶ್ರೀಮತಿ ಹರ್ಷಿತಾ ಕುದ್ಪಾಜೆ, ಸಚಿನ್ ಕುಮಾರ್ ಬಳ್ಳಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿದ್ದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
- Thursday
- November 21st, 2024