ಸುಳ್ಯ ತಾಲೂಕು ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ವೀಣಾ ಕರ್ತವ್ಯಕ್ಕೆ ಹಾಜರು – ನಿಟ್ಟುಸಿರು ಬಿಟ್ಟ ಬಡ ಜನತೆ
ಸುಳ್ಯ ಸರಕಾರಿ ಆಸ್ಪತ್ರೆಯ ಸ್ಟಾಪ್ ನರ್ಸ್ ಗಳ ಆರೋಪದಿಂದ ಬೇಸತ್ತು ಕರ್ತವ್ಯಕ್ಕೆ ಗೈರಾಗಿದ್ದ ಪ್ರಸೂತಿ ತಜ್ಞೆಯಾಗಿರುವ ಡಾ. ವೀಣಾ ರವರು ಜು.16 ರಿಂದ ಸರಕಾರಿ ಆಸ್ಪತ್ರೆಗೆ ಕರ್ತವ್ಯಕ್ಕೆ ಮರು ಹಾಜರಾಗಿರುವುದಾಗಿ ತಿಳಿದುಬಂದಿದೆ.
ತನ್ನ ಮೇಲೆ ಬಂದ ಆರೋಪದಿಂದ ಮನನೊಂದಿದ್ದ ಡಾ.ವೀಣಾರವರು ಆಸ್ಪತ್ರೆಗೆ ಕರ್ತವ್ಯಕ್ಕೆ ಬಾರದೆ ಗೈರುಹಾಜರಾಗಿದ್ದರು.
ಜು.6ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಕರೆ ಆಧಾರದಲ್ಲಿರುವ ಪ್ರಸೂತಿ ತಜ್ಞೆ ಡಾ.ವೀಣಾರವರು ಕರ್ತವ್ಯಕ್ಕೆ ಬಾರದಿರುವ ವಿಚಾರ ತಿಳಿದು, ಪೂರ್ಣಾವಧಿ ಸರಕಾರಿ ಪ್ರಸೂತಿ ತಜ್ಞ ವೈದ್ಯರ ನೇಮಕಾತಿ ಸರಕಾರದಿಂದ ಸದ್ಯಕ್ಕೆ ಅಸಾಧ್ಯವಾಗಿರುವುದರಿಂದ ಡಾ.ವೀಣಾರವರ ಮನವೊಲಿಸುವಂತೆ ಹೇಳಿದ್ದರು. ಅದರಂತೆ ವೈದ್ಯಾಧಿಕಾರಿಗಳು ಡಾ.ವೀಣಾರವರ ಜತೆ ಮಾತನಾಡಿದ್ದು ಜು.16ರಿಂದ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆಂದು ತಿಳಿದುಬಂದಿದೆ.
- Tuesday
- December 3rd, 2024