Ad Widget

ಎಲಿಮಲೆ ಮಿತ್ರ ಬಳಗದ ಮಹಾಸಭೆ ; ನೂತನ ಅಧ್ಯಕ್ಷರಾಗಿ ಜಯಂತ್ ಹರ್ಲಡ್ಕ- ಕಾರ್ಯದರ್ಶಿಯಾಗಿ ಪ್ರಶಾಂತ್ ಅಂಬೆಕಲ್ಲು

ಮಿತ್ರ ಬಳಗ(ರಿ.) ಎಲಿಮಲೆ ಇದರ ಮಹಾಸಭೆಯು ಜು.21 ರಂದು ಬಳಗದ ಅಧ್ಯಕ್ಷರಾದ ಉದಯ ಕುಮಾರ್ ಚಳ್ಳ ಅವರ ಅಧ್ಯಕ್ಷತೆಯಲ್ಲಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ನಡೆಯಿತು. ಬಳಗದ ಕಾರ್ಯದರ್ಶಿಯಾದ ಕುಲದೀಪ್ ಹರ್ಲಡ್ಕ ವಾರ್ಷಿಕ ವರದಿಯನ್ನು ಮಂಡಿಸಿದರು. ನಂತರ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಉದಯ ಕುಮಾರ್ ಚಳ್ಳ, ಅಧ್ಯಕ್ಷರಾಗಿ ಜಯಂತ್ ಹರ್ಲಡ್ಕ, ಉಪಾಧ್ಯಕ್ಷರುಗಳಾಗಿ ನಾಗೇಶ್ ತಳೂರು, ಮಣಿಕಂಠ ಎಲಿಮಲೆ, ಪ್ರಸನ್ನ.ಎಸ್.ಎನ್, ದೀಕ್ಷಿತ್ ಚಿತ್ತಡ್ಕ, ಕಾರ್ಯದರ್ಶಿಯಾಗಿ ಪ್ರಶಾಂತ್ ಅಂಬೆಕಲ್ಲು, ಜತೆ ಕಾರ್ಯದರ್ಶಿಯಾಗಿ ತೀರ್ಥೇಶ್ ಗುಡ್ಡನಮನೆ, ಕೋಶಾಧಿಕಾರಿಯಾಗಿ ಕುಲದೀಪ್ ಹರ್ಲಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಶೃಜೇಶ್ ಕಲ್ಲುಪಣೆ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಮಿಥುನ್ ಕೇಪಳಕಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಚಳ್ಳ, ಪ್ರಚಾರ ಕಾರ್ಯದರ್ಶಿಯಾಗಿ ಜಯಂತ್ ಸುಳ್ಳಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜೀವನ್ ಕಲ್ಲುಪಣೆ, ಕೃತಿಕ್ ಕೇಪಳಕಜೆ, ಯಕ್ಷಿತ್ ಚಳ್ಳ, ರವಿಕಿರಣ್ ಕೇಪಳಕಜೆ, ತನುಷ್ ಬಾದ್ರಮನೆ, ಗೌತಮ್ ಕೇಪಳಕಜೆ, ವಿಕ್ರಾಂತ್ ಚಳ್ಳ, ರಾಜೇಶ್ ಎಲಿಮಲೆ, ಪ್ರದೀಪ್ ಹೊಟ್ಟುಚೋಡಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಬಳಗದ ಗೌರವ ಸಲಹೆಗಾರರಾದ ಎ.ವಿ ತೀರ್ಥರಾಮ, ಹಾಗೂ ಕೃಷ್ಣಯ್ಯ ಮೂಲೆತೋಟ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಿರ್ಗಮಿತ ಅಧ್ಯಕ್ಷರಾದ ಉದಯ ಕುಮಾರ್ ಚಳ್ಳ ತನ್ನ ಅವಧಿಯಲ್ಲಿನ ಯಶಸ್ವಿ ಕಾರ್ಯಕ್ರಮಗಳಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ನೂತನ ಅಧ್ಯಕ್ಷರಾದ ಜಯಂತ್ ಹರ್ಲಡ್ಕ ಅವರು ಮುಂದಿನ ಅವಧಿಗೆ ಎಲ್ಲರ ಸಹಕಾರವನ್ನು ಕೋರಿದರು.
ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಹರಿಪ್ರಸಾದ್ ಎಲಿಮಲೆ, ಕಿರಣ್ ಗುಡ್ಡೆಮನೆ, ಸತೀಶ್ ಗುಡ್ಡನಮನೆ, ಗಂಗಾಧರ, ತಾರನಾಥ್ ಅಡಿಗ, ಸುನಿಲ್ ಸುಳ್ಳಿ, ಪ್ರಕಾಶ್ ಕಜೆ ಉಪಸ್ಥಿತರಿದ್ದರು.
ಕುಲದೀಪ್ ಹರ್ಲಡ್ಕ ಸ್ವಾಗತಿಸಿ ಪ್ರಶಾಂತ್ ಅಂಬೆಕಲ್ಲು ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading