
ಅರಂತೋಡು ಪಂಚಾಯತ್ ವ್ಯಾಪ್ತಿಯ ಅರಮನೆಗಯ ತೂಗು ಸೇತುವೆಯ ಸಂಚಾರ ನಿರ್ಬಂಧಿಸಿದ್ದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿತ್ತು. ಈ ಬಗ್ಗೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಆರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಆಡ್ತಲೆ, ಸಹಕಾರಿ ಸಂಘ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಭವಾನಿ. ಸಿ. ಎ. ಪಂಚಾಯತ್ ಸದಸ್ಯರಾದ ವೆಂಕಟರಮಣ ಪೆತ್ತಾಜೆ ಇವರು ನಿಯೋಗ ಶಾಸಕರಿಗೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿರುವ ಮಾನ್ಯ ಶಾಸಕರಾದ ಕುl ಭಾಗಿರಥಿ ಮುರುಳ್ಯ ರವರು ವಾರಾಹಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಪ್ರಸನ್ನ ಶೇಟ್, ಕಿರಣ್ ಪಡ್ತಿ ಜತೆ ಜು. 21ರಂದು ಅರಮನೆಗಯಕ್ಕೆ ಭೇಟಿ ನೀಡಿ ಕಿಂಡಿ ಆಣೆಕಟ್ಟು, ಸೇತುವೆ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಬಿ, ಜೆ. ಪಿ. ನಿಕಟಪೂರ್ವ ಮಂಡಲ ಅಧ್ಯಕ್ಷ ರಾದ ಹರೀಶ್ ಕಂಜಿಪಿಲಿ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಆರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಮತ್ತು ಅರಮನೆ ಗಾಯದ ನಿವಾಸಿಗಳು ಉಪಸ್ಥಿತರಿದ್ದರು.
