- Thursday
- November 21st, 2024
ಮಿತ್ರ ಬಳಗ(ರಿ.) ಎಲಿಮಲೆ ಇದರ ಮಹಾಸಭೆಯು ಜು.21 ರಂದು ಬಳಗದ ಅಧ್ಯಕ್ಷರಾದ ಉದಯ ಕುಮಾರ್ ಚಳ್ಳ ಅವರ ಅಧ್ಯಕ್ಷತೆಯಲ್ಲಿ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ನಡೆಯಿತು. ಬಳಗದ ಕಾರ್ಯದರ್ಶಿಯಾದ ಕುಲದೀಪ್ ಹರ್ಲಡ್ಕ ವಾರ್ಷಿಕ ವರದಿಯನ್ನು ಮಂಡಿಸಿದರು. ನಂತರ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಉದಯ ಕುಮಾರ್ ಚಳ್ಳ, ಅಧ್ಯಕ್ಷರಾಗಿ ಜಯಂತ್ ಹರ್ಲಡ್ಕ, ಉಪಾಧ್ಯಕ್ಷರುಗಳಾಗಿ ನಾಗೇಶ್...
ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆಯು ಜು. 21ರಂದು ಸುಳ್ಯದ ಗ್ಯಾರೇಜು ಮಾಲಕರ ಸಂಘದ ಸಭಾಂಗಣದಲ್ಲಿ ಸಹಕಾರಿಯ ಅಧ್ಯಕ್ಷರಾದ ಜನಾರ್ಧನ ದೋಳ ಇವರ ಅಧ್ಯಕ್ಷತೆಯಲ್ಲಿ ಜರಗಿತು.2023ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು ಕೇವಲ ಒಂಬತ್ತು ತಿಂಗಳಿನಲ್ಲಿ ರೂ. 5,60,70,219 ವ್ಯವಹಾರ ನಡೆಸಿ ರೂ. 31,951 ಲಾಭ ಗಳಿಸಿದೆ. ಸಂಘವು...
ಅರಂತೋಡು ಪಂಚಾಯತ್ ವ್ಯಾಪ್ತಿಯ ಅರಮನೆಗಯ ತೂಗು ಸೇತುವೆಯ ಸಂಚಾರ ನಿರ್ಬಂಧಿಸಿದ್ದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿತ್ತು. ಈ ಬಗ್ಗೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಆರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಆಡ್ತಲೆ, ಸಹಕಾರಿ ಸಂಘ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಭವಾನಿ. ಸಿ. ಎ. ಪಂಚಾಯತ್ ಸದಸ್ಯರಾದ ವೆಂಕಟರಮಣ ಪೆತ್ತಾಜೆ ಇವರು ನಿಯೋಗ ಶಾಸಕರಿಗೆ ಮನವಿ...
ದೇವಚಳ್ಳ ಗ್ರಾಮದ ಕೇರ, ಅಂಬೆಕಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆ ಜು.21 ರಂದು ನೆರವೇರಿತು. ಅಂಬೆಕಲ್ಲು ಹೂವಪ್ಪ ಗೌಡ ಹಾಗೂ ವೆಂಕಟ್ರಮಣ ಗೌಡರು ರಿಬ್ಬನ್ ಕತ್ತರಿಸಿ ಉದ್ಘಾಟನೆ ನೆರವೇರಿಸಿದರು. ಕೃಷ್ಣಕುಮಾರ್ ದಂಪತಿಗಳು ದೀಪ ಬೆಳಗಿಸಿದರು. ಹುಕ್ರ ತೆಗಿನಕಾಯಿ ಒಡೆದರು. ವಿಶೇಷ ಅನುದಾನದಲ್ಲಿ ನಡೆದ ಕಾಮಗಾರಿ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ನಾಗೇಶ್ ಅಂಬೆಕಲ್ಲು,...
ಸುಳ್ಯ ದಸರಾ ಉತ್ಸವದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಶಾರದಾಂಬಾ ಮಹಿಳಾ ಸಮಿತಿಯ ಸಭೆ ಇಂದು ಬೂಡು ಶ್ರೀ ಭಗವತಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಮಹಿಳಾ ಸಮಿತಿಯ ಅಧ್ಯಕ್ಷೆ ಯಾದ ಶ್ರೀಮತಿ ಶಶಿಕಲಾ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಗೆ ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಮುಂದಿನ ಭಾನುವಾರ ನಡೆಯಲಿರುವ ಕ್ರೀಡಾ ದಸರಾದ ಅಂಗವಾಗಿ ನಡೆಯುವ...
ಸುಳ್ಯ ತಾಲೂಕು ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ವೀಣಾ ಕರ್ತವ್ಯಕ್ಕೆ ಹಾಜರು - ನಿಟ್ಟುಸಿರು ಬಿಟ್ಟ ಬಡ ಜನತೆ ಸುಳ್ಯ ಸರಕಾರಿ ಆಸ್ಪತ್ರೆಯ ಸ್ಟಾಪ್ ನರ್ಸ್ ಗಳ ಆರೋಪದಿಂದ ಬೇಸತ್ತು ಕರ್ತವ್ಯಕ್ಕೆ ಗೈರಾಗಿದ್ದ ಪ್ರಸೂತಿ ತಜ್ಞೆಯಾಗಿರುವ ಡಾ. ವೀಣಾ ರವರು ಜು.16 ರಿಂದ ಸರಕಾರಿ ಆಸ್ಪತ್ರೆಗೆ ಕರ್ತವ್ಯಕ್ಕೆ ಮರು ಹಾಜರಾಗಿರುವುದಾಗಿ ತಿಳಿದುಬಂದಿದೆ.ತನ್ನ ಮೇಲೆ ಬಂದ ಆರೋಪದಿಂದ...