ಕೊಡಿಯಾಲ ಗ್ರಾಮಕ್ಕೆ ಖಾಯಂ ಲೈನ್ ಮೆನ್ ನಿಯೋಜಿಸಬೇಕೆಂದು ಕೊಡಿಯಾಲ ಗ್ರಾಮಸ್ಥರು ಬೆಳ್ಳಾರೆ ಮೆಸ್ಕಾಂ ಜೆ.ಇ ಯವರಿಗೆ ಜು.19 ರಂದು ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೊಡಿಯಾಲ ಗ್ರಾಮವು ಬಹು ವಿಸ್ತಾರ ಹಾಗೂ ಹೆಚ್ಚು ಜನಸಂಖ್ಯೆ ಇದ್ದು ಇಲ್ಲಿ ಹಲವಾರು ಡಿ.ಸಿ.ಗಳಿಂದ ತುಂಬಾ ಮನೆ ಹಾಗೂ ಪಂಪುಶೆಡ್ ಗಳಿಗೆ ವಿದ್ಯುತ್ ಸಂಪರ್ಕ ಇರುವ ಪ್ರದೇಶವಾಗಿರುತ್ತದೆ. ಆದರೆ ಈ ಗ್ರಾಮದಲ್ಲಿ ಕಾರ್ಯನಿರ್ವಹಿಸಲು ಒಬ್ಬನೇ ಒಬ್ಬ ಲೈನ್ ಮ್ಯಾನ್ ಇರುವುದಿಲ್ಲ. ದೂರದ ಬೆಳ್ಳಾರೆ ಯಿಂದ ಇಲ್ಲಿಗೆ ಬಂದು ಕಾರ್ಯನಿರ್ವಹಿಸಲು ವಿಳಂಬವಾಗುತ್ತದೆ.
ಆದುದರಿಂದ ಕೊಡಿಯಾಲಕ್ಕೆ ಖಾಯಂ ಆಗಿ ಕೊಡಿಯಾಲದಲ್ಲಿಯೇ ಇರುವಂತೆ ಒಬ್ಬ ಲೈನ್ ಮ್ಯಾನ್ ನಿಯೋಜಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ, ಸದಸ್ಯೆ ವಿಜಯ, ಲೋಕೇಶ ತಾಳಿದಡಿ, ವಿಠಲ ಗೌಡ ಕಲ್ಪಡ, ಬಾಲಕೃಷ್ಣ ಕಲ್ಪಡ, ಭಾಸ್ಕರ ಕಲ್ಪಡ,ಸುಂದರ ಪೋಲಾಜೆ, ಕಿಶೋರ್ ಪೊಟ್ರೆ, ಮುಕುಂದ ಕೇಶವ, ರಾಮಚಂದ್ರ ಪೊಟ್ರೆ, ಪುಟ್ಟಣ್ಣ ಗೌಡ ಪೊಟ್ರೆ, ಯುವರಾಜ್ ಕೆ.ಕೆ, ಇಸ್ಮಾಯಿಲ್ ಮಾಲೆಂಗ್ರಿ,ಇಸ್ಮಾಯಿಲ್ ಬಿ.ಎಂ.ಮಾಲೆಂಗ್ರಿ, ಭಾಸ್ಕರ ತೋಟ, ಆನಂದ ಪೊಟ್ರೆ,ಅಬ್ದುಲ್ ಖಾದರ್ ಮಾಲೆಂಗ್ರಿ, ಇಸಾಕ್ ಮಾಲೆಂಗ್ರಿ ಉಪಸ್ಥಿತರಿದ್ದರು.
- Tuesday
- December 3rd, 2024