ಹಳ್ಳಿಗಳ ಅಭಿವೃದ್ಧಿಗೆ ರಸ್ತೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಮಾವಿನಕಟ್ಟೆ ದೇವ ಕಂದ್ರಪ್ಪಾಡಿ ಮುಖಾಂತರ ಗುತ್ತಿಗಾರು ಸಂಪರ್ಕಿಸುವ ರಸ್ತೆಯ ಕನ್ನಡಕಜೆ ಎಂಬಲ್ಲಿ ರಸ್ತೆ ಎರಡು ವರ್ಷಗಳ ಹಿಂದೆ ಕಾಂಕ್ರೀಟಿಕರಣಗೊಂಡು ಅಭಿವೃದ್ದಿ ಕಂಡಿದೆ. ಆದರೇ ಅದರ ಮುಂದುವರಿದ ರಸ್ತೆಯು ಕೇವಲ 100 ಮೀ ನಷ್ಟು ಕಾಂಕ್ರಿಟೀಕರಣಗೊಳ್ಳಲು ಬಾಕಿ ಇದ್ದು ಅಭಿವೃದ್ಧಿಯ ಮಧ್ಯೆ ಕಪ್ಪು ಚುಕ್ಕೆಯಂತಿದೆ. ಕಳೆದ ಎರಡು ವರ್ಷಗಳಿಂದ ಈ ರಸ್ತೆಯಲ್ಲಿ ತೆರಳುವ ಜನರು ಹರಸಾಹಸ ಪಡುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಆದಷ್ಟೂ ಬೇಗ ಗಮನ ಹರಿಸುವಂತಾಗಲಿ.
- Tuesday
- December 3rd, 2024