Ad Widget

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಸಹಾಯಧನ ಹಸ್ತಾಂತರ

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಸುಳ್ಯ ಶಾಖೆಯ ಸಕ್ರಿಯ ಸದಸ್ಯರಾದ ಪ್ರದ್ಯುಮ್ನ ಅವರ ಕೃಷಿ ಸ್ಥಳದಲ್ಲಿ ಕೆಲಸಗಾರರಾಗಿದ್ದ ಯೋಗೀಶ್ ಪಿ ಅವರ ಆಕಸ್ಮಿಕ ಮರಣ ಪರಿಹಾರವಾಗಿ ಸಹಾಯಧನದ ಮೊತ್ತ ರೂ.50,000/- (ರೂಪಾಯಿ ಐವತ್ತು ಸಾವಿರ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಜು 20ರಂದು ದಿ.‌ ಯೋಗೀಶ್ ಪಿ ರವರ ತಾಯಿ ಮೀನಾಕ್ಷಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ನಿರ್ದೇಶಕರು, ಕ್ಯಾಂಪ್ಕೊ ಸುಳ್ಯ ಶಾಖೆಯಲ್ಲಿ ಪ್ರಪ್ರಥಮವಾಗಿ ಸದಸ್ಯರ ಕೃಷಿ ಸ್ಥಳದಲ್ಲಿ ಆಕಸ್ಮಿಕ ಮರಣ ಹೊಂದಿದ ಕೆಲಸಗಾರರಿಗೆ ಪರಿಹಾರ ನೀಡಲಾಗಿದೆ. ರೈತರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಪ್ಕೊ ಸಂಸ್ಥೆಗೆ ಅಡಿಕೆ ವ್ಯವಹಾರ ನಡೆಸುವ ಮೂಲಕ ಕ್ಯಾಂಪ್ಕೋ ದಲ್ಲಿ ದೊರೆಯುವ ವಿವಿಧ ವಿಶೇಷ ಪ್ರಯೋಜನಗಳ ಬಗ್ಗೆ ಅರಿತು ಅದರ ಸದುಪಯೋಗವನ್ನು ಪಡೆಯಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ಪ್ರದ್ಯುಮ್ನ (ಕ್ಯಾಂಪ್ಕೋ ಸದಸ್ಯರು ಹಾಗು ಆರ್‌ಎಸ್‌ಎಸ್ ಸಹಸಂಘಚಾಲಕರು),  ಕುಸುಮಧರ (ಅಧ್ಯಕ್ಷರು ಬಿಜೆಪಿ ನಗರ ಮಹಾಶಕ್ತಿ ಕೇಂದ್ರ, ಸುಳ್ಯ ), ಶ್ರೀ ನಾರಾಯಣ ಯಸ್,ಎಂ (ಪ್ರಧಾನ ಕಾರ್ಯದರ್ಶಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರ,ಸುಳ್ಯ ) ಅವಿನ್ ಕುಮಾರ್ ಪಿ (ಆರ್‌ಎಸ್‌ಎಸ್ ಐವರ್ನಾಡು ಮಂಡಲ ಪ್ರಮುಖ್), ಚಂದ್ರಶೇಖರ ನೆದಿಲಾ (ಬಿಜೆಪಿ ಕಾರ್ಯಾಲಯ ಸುಳ್ಯ ), ಕೆ ಕೆ ಬಾಲಕೃಷ್ಣ (ಬಿಜೆಪಿ ಹಿರಿಯ ಕಾರ್ಯದರ್ಶಿ), ಹರೀಶ್ ರೈ (ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯರು) ಪ್ರಕಾಶ್ ಕುಮಾರ್ ಶೆಟ್ಟಿ ಸೀನಿಯರ್ ಮ್ಯಾನೇಜರ್ ಕ್ಯಾಂಪ್ಕೋ ಪ್ರಾದೇಶಿಕ ಕಚೇರಿ, ಪುತ್ತೂರು, ಕ್ಯಾಂಪ್ಕೋ ಸುಳ್ಯ ಶಾಖೆಯ ಪ್ರಬಂಧಕರಾದ ವಿನೋದ್ ಕುಮಾರ್ ಎ, ಸಂತೋಷ್ ಪಿ, ಸೀನಿಯರ್ ಮ್ಯಾನೇಜರ್ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!