ಸುಬ್ರಹ್ಮಣ್ಯ ಜುಲೈ 20: ಕುಕ್ಕೆ ಸುಬ್ರಹ್ಮಣ್ಯದ ಅಕ್ಷರ ವಸತಿಗೃಹದ ಕೆಳಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕ್ ಬ್ಯಾಂಕ್ ಆಫ್ ಬರೋಡ ಇದರ 117ನೆಯ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಬ್ಯಾಂಕ್ ಆಫ್ ಬರೋಡದ ಸಂಸ್ಥಾಪಕರಾದ ಮಹಾರಾಜ್
ಶ್ರೀ ಸಹ್ಯಾಜಿ ಗಾಯಕ್ವಾಡ್, ವಿಜಯ ಬ್ಯಾಂಕ್ ಸಂಸ್ಥಾಪಕರಾದ ಶ್ರೀ ಅತ್ತಾವರ ಬಾಲಕೃಷ್ಣ ಶೆಟ್ಟಿ, ದೇನ ಬ್ಯಾಂಕ್ ಸಂಸ್ಥಾಪಕರಾದ ಶ್ರೀ ಪ್ರಾಣಲಾಲ್ ದೇವಕರಣ ನಾನ್ ಜಿ ಇವರುಗಳ ಫೋಟೋವನ್ನು ಇಟ್ಟು ದೀಪ ಹಚ್ಚಿ ಗೌರವ ಸೂಚಿಸಲಾಯಿತು. ದೀಪ ಪ್ರಜ್ವಲನವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಚೇರಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿಗಾರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಸುಬ್ರಹ್ಮಣ್ಯ ಶಾಖೆಯ
ಮ್ಯಾನೇಜರ್ ವಿಶ್ರುತ್ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ರೋಟರಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಉದ್ಯಮಿ ಶಿವಕುಮಾರ್ ಕಾಮತ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್, ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.