
ಸುಬ್ರಹ್ಮಣ್ಯ: ಹಿಂದಿ ಚಲನಚಿತ್ರ ರಂಗದ ನಿರ್ದೇಶಕಿ ಹಾಗೂ ನಟಿ ಏಕ್ತ ಕಪೂರ್ ಜು.18 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಆಗಮಿಸಿ ಆಶ್ಲೇಷ ಬಲಿ, ನಾಗ ಪ್ರತಿಷ್ಠಾ ಪೂಜೆಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಅವರೊಂದಿಗೆ ಮುಂಬೈ ರವಿ ಕೋಟಿಯನ್ ಜೊತೆಗಿದ್ದರು.
ದೇವಸ್ಥಾನದ ವತಿಯಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್ ಹಾಗೂ ಕೃಷ್ಣಮೂರ್ತಿ ಭಟ್ ಬರಮಾಡಿಕೊಂಡರು.