ಅಜ್ಜಾವರ: ಅಜ್ಜಾವರ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಿರಂತರವಾಗಿ ಐದು ದಿನಗಳಿಂದ ವಿದ್ಯುತ್ ವ್ಯತ್ಯಯವಾಗಿದ್ದು ಇದೀಗ ವಾರ್ಡ್ ಸಭೆಗಳು ಸೇರಿದಂತೆ ಮಳೆಯ ಪರಿಣಾಮ ತುರ್ತು ಕೆಲಸ ಕಾರ್ಯಗಳನ್ನು ಮಾಡಬೇಕಾದ ಕಛೇರಿಯಲ್ಲಿ ಬೆಳಕಿಲ್ಲದೆ ಕತ್ತಲೆಯಲ್ಲಿ ಕಳೆಯುವಂತಾಗಿದೆ.
ಅಲ್ಲದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಗ್ರಾಮ ವಿಪತ್ತು ತಂಡದ ಮುಖ್ಯಸ್ಥರಾಗಿದ್ದು ವಿದ್ಯುತ್ ಸಮಸ್ಯೆ ಮತ್ತು ಬಿ ಎಸ್ ಎನ್ ಎಲ್ ನೆಟ್ವರ್ಕ್ ಸಮಸ್ಯೆಯಿಂದಾಗಿ ದೂರವಾಣಿ ಕರೆಗೂ ಸಿಗದಂತಾಗಿದೆ. ಇನ್ನಾದರು ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತು ಸಮಸ್ಯೆಗಳನ್ನು ನಿವಾರಿಸುವರೇ ಎಂದು ಕಾದು ನೋಡಬೇಕಿದೆ.