- Thursday
- November 21st, 2024
ಭಾರೀ ಮಳೆ ಮುಂದುವರಿದಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿಪೂರ್ವ ಕಾಲೇಜು(12 ತರಗತಿಯವರೆಗೆ) ಗಳಿಗೆ ನಾಳೆ ಜುಲೈ 20 ರಂದು ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
ಸುಳ್ಯ ತಾಲೂಕಿನ ಎಲ್ಲಾ ಗಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಸಭೆಯು ಜು.22 ರಂದು ಪೂ.10.30 ಕ್ಕೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಗ್ರಾ.ಪಂ.ಗಳ ಒಕ್ಕೂಟದ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಎಲ್ಲಾ ಅಧ್ಯಕ್ಷ,ಉಪಾಧ್ಯಕ್ಷರುಗಳು ಆಗಮಿಸಬೇಕೆಂದು ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟದ ಪ್ರ.ಕಾರ್ಯದರ್ಶಿ ಕೇಶವ ಅಡ್ತಲೆ ಹಾಗೂ ಸಂಚಾಲಕರಾದ...
ತೀರ್ಥಸ್ನಾನಕ್ಕಾಗಿ ನದಿ ತಟಕ್ಕೆ ತೆರಳದಂತೆ ಭಕ್ತಾದಿಗಳಿಗೆ ಸೂಚನೆಕುಕ್ಕೆ ಸುಬ್ರಹ್ಮಣ್ಯ-ಪುತ್ತೂರು ರಸ್ತೆಯಲ್ಲಿ ಹರಿದ ನೀರು-ಸಂಚಾರಕ್ಕೆ ತೊಂದರೆ ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ನಾಲ್ಕೈದು ದಿನಗಳಿಂದ ನಿರಂತರವಾಗಿ ಸ್ನಾನಘಟ್ಟ ಮುಳುಗಡೆಯಾಗುತ್ತಿದ್ದು, ತೀರ್ಥಸ್ನಾನಕ್ಕಾಗಿ ನದಿ ತಟಕ್ಕೆ ತೆರಳದಂತೆ ಭಕ್ತಾದಿಗಳಿಗೆ ಸೂಚನೆ ನೀಡಲಾಗಿದ್ದು, ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿಗಳನ್ನು ನೇಮಿಸಿ ಎಚ್ಚರಿಕೆ ವಹಿಸಲಾಗಿದೆ ಎಂದು...
ಭಾರಿ ಮಳೆಗೆ ಬೃಹತ್ ಮರ ರಸ್ತೆಗೆ ಬಿದ್ದ ಘಟನೆ ಪಂಜದ ಪಲ್ಲೋಡಿ ಪೆಟ್ರೋಲ್ ಪಂಪು ಬಳಿ ನಡೆದಿದೆ. ರಸ್ತೆಯ ಮಧ್ಯಕ್ಕೆ ಮರ ಬಿದ್ದ ಪರಿಣಾಮ ಈಗ ರಸ್ತೆ ಬಂದ್ ಆಗಿದ್ದು ಪಂಜ ಸುಬ್ರಹ್ಮಣ್ಯ ಸಂಪರ್ಕ ಕಡಿತಗೊಂಡಿದೆ.
ಹರಿಹರ ಬಾಳುಗೋಡು ರಸ್ತೆಯಲ್ಲಿರುವ ಪದಕ ಸೇತುವೆ ಕಳೆದೆರಡು ದಿನಗಳಿಂದ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಇಂದು ಹೆಚ್ಚು ನೀರು ಹರಿದು ಬರುತ್ತಿದ್ದು ಸೇತುವೆ ಕೊಚ್ಚಿ ಹೋಗುವ ಭೀತಿ ಜನರಲ್ಲಿ ಉಂಟಾಗಿದೆ.
ಅಜ್ಜಾವರ: ಅಜ್ಜಾವರ ಗ್ರಾಮ ಪಂಚಾಯತ್ ಕಛೇರಿಯಲ್ಲಿ ನಿರಂತರವಾಗಿ ಐದು ದಿನಗಳಿಂದ ವಿದ್ಯುತ್ ವ್ಯತ್ಯಯವಾಗಿದ್ದು ಇದೀಗ ವಾರ್ಡ್ ಸಭೆಗಳು ಸೇರಿದಂತೆ ಮಳೆಯ ಪರಿಣಾಮ ತುರ್ತು ಕೆಲಸ ಕಾರ್ಯಗಳನ್ನು ಮಾಡಬೇಕಾದ ಕಛೇರಿಯಲ್ಲಿ ಬೆಳಕಿಲ್ಲದೆ ಕತ್ತಲೆಯಲ್ಲಿ ಕಳೆಯುವಂತಾಗಿದೆ. ಅಲ್ಲದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಗ್ರಾಮ ವಿಪತ್ತು ತಂಡದ ಮುಖ್ಯಸ್ಥರಾಗಿದ್ದು ವಿದ್ಯುತ್ ಸಮಸ್ಯೆ ಮತ್ತು ಬಿ ಎಸ್ ಎನ್ ಎಲ್...
ಉಬರಡ್ಕ ಗ್ರಾಮದ ಮಂಜಿಕಾನ ದಿಂದ ಬದನೆಕಜೆಗೆ ಹೋಗುವ ರಸ್ತೆ ಜಲಾವೃತಗೊಂಡು ಬ್ಲಾಕ್ ಆಗಿದೆ. ತೋಡೊಂದು ಹರಿಯುತ್ತಿದ್ದ ನೀರು ವಿಪರೀತವಾಗಿದ್ದರಿಂದ ರಸ್ತೆ ಬ್ಲಾಕ್ ಆಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ಸಣ್ಣದಾದ ಕಾಲು ಸೇತುವೆ ಮಾಡಲಾಗಿದ್ದು, ಇದನ್ನು ಬಳಸಿ ಈ ಭಾಗದ ಜನರು ಸಂಚರಿಸುತ್ತಿದ್ದಾರೆ.
ಸುಬ್ರಹ್ಮಣ್ಯ: ಹಿಂದಿ ಚಲನಚಿತ್ರ ರಂಗದ ನಿರ್ದೇಶಕಿ ಹಾಗೂ ನಟಿ ಏಕ್ತ ಕಪೂರ್ ಜು.18 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಆಗಮಿಸಿ ಆಶ್ಲೇಷ ಬಲಿ, ನಾಗ ಪ್ರತಿಷ್ಠಾ ಪೂಜೆಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು. ಅವರೊಂದಿಗೆ ಮುಂಬೈ ರವಿ ಕೋಟಿಯನ್ ಜೊತೆಗಿದ್ದರು.ದೇವಸ್ಥಾನದ ವತಿಯಿಂದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್ ಹಾಗೂ ಕೃಷ್ಣಮೂರ್ತಿ ಭಟ್ ಬರಮಾಡಿಕೊಂಡರು.