ದೇವಚಳ್ಳ ಗ್ರಾಮದ ವಾಲ್ತಾಜೆಯ ಮೂರು ಕಡೆಗಳಲ್ಲಿ ಬಹು ಬೇಡಿಕೆಯ ಒಟ್ಟು ನೂರು ಮೀಟರ್ ಗಳ ವಾಲ್ತಾಜೆ ಉಳ್ಳಾಕಳು ರಸ್ತೆಯ ಕಾಂಕ್ರೀಟ್ ಕಾಮಗಾರಿ ಗ್ರಾಮಪಂಚಾಯತ್ ಹಾಗೂ ವಿಶೇಷ ಅನುದಾನದೊಂದಿಗೆ ಪೂರ್ಣಗೊಂಡು ಅದರ ಉದ್ಘಾಟನಾ ಕಾರ್ಯಕ್ರಮ ಜು.17dರಂದು ನೆರವೇರಿತು. ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಗಳನ್ನು ಗ್ರಾಮದ ಹಿರಿಯರಾದ ಶ್ರೀ ಮತಿ ಧರ್ಮಾವತಿ ಮುಂಡೋಡಿ, ಶ್ರೀ ಮಹಾಬಲ ಮುಂಡೋಡಿ, ಶ್ರೀ ಮತಿ ಶಾರದ ವಾಲ್ತಾಜೆ ಯವರು ನೆರವೇರಿಸಿದರು. ಕಂದ್ರಪ್ಪಾಡಿ ರಾಜ್ಯದೈವ ಪರುಷದೈವದ ಆಡಳಿತ ಮುಕ್ತೇಸರರಾದ ಕಾಳಿಕಪ್ರಸಾದ್ ಮುಂಡೋಡಿ ಯವರು ದೀಪ ಬೆಳಗಿ ಶುಭಹಾರೈಸಿದರು. ಪ್ರವೀಣ್ ಮುಂಡೋಡಿ ಯವರು ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅದ್ಯಕ್ಷರಾದ ಶೀ ಶೈಲೇಶ್ ಅಂಬೆಕಲ್ಲುರವರು ಅನುದಾನ ಮತ್ತು ಕಾಮಗಾರಿಯ ಕುರಿತು ಮಾಹಿತಿ ನೀಡಿದರು. ಊರವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಯಾವುದೇ ಸರಕಾರಿ ಕಾಮಗಾರಿಗಳು ನಡೆದ ಬಳಿಕ ಅದನ್ನು ಹೇಗೆ ಉಳಿಸಿಕೊಂಡು ನಿರ್ವಹಿಸಬೇಕೆಂದು ತಿಳಿಹೇಳಿದರು. ಈ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಇಲ್ಲದೆ, ಯಾವುದೇ ಪ್ರಚಾರವಿಲ್ಲದೆ ನಡೆದದ್ದು ವಿಶೇಷ. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಶ್ರೀ ಭವಾನಿಶಂಕರ ಮುಂಡೋಡಿ, ಅಶೋಕ್ ವಾಲ್ತಾಜೆ, ರಸ್ತೆ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತಿತರಿದ್ದರು.
- Saturday
- November 23rd, 2024