ಸುಳ್ಯದ ಶ್ರೀರಾಂ ಪೇಟೆಯ ಗೋಪಿಕಾ ಬಿಲ್ಡಿಂಗ್ ನಲ್ಲಿ ಅಪೋಲೋ ಹಾಸ್ಪಿಟಲ್ ಗ್ರೂಪ್ ನ ಅಪೋಲೋ ಫಾರ್ಮಸಿ ಇಂದು ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೋ.ಯೋಗಿತಾ ಗೋಪಿನಾಥ್ ಉದ್ಘಾಟಿಸಿದರು. ಗೋಪಿಕಾ ಬಿಲ್ಡಿಂಗ್ ನ ಮಾಲಕರಾದ ಎಂ.ಪಿ.ಗೋಪಿನಾಥ್, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲರಾದ ಎಂ.ಬಿ.ಸದಾಶಿವ , ಪ್ರಣಾವ್ ಗೋಪಿನಾಥ್ ಉಪಸ್ಥಿತರಿದ್ದರು.
ಸಂಸ್ಥೆಯ ವತಿಯಿಂದ ಎಂ.ಪಿ.ಗೋಪಿನಾಥ್, ಯೋಗಿತಾ ಗೋಪಿನಾಥ್ ಮತ್ತು ಎಂ.ಬಿ.ಸದಾಶಿವರನ್ನು ಸನ್ಮಾನಿಸಲಾಯಿತು.
ಸುಳ್ಯ ಸಂಸ್ಥೆ ಮೇಲ್ವಿಚಾರಕ ಪ್ರಭು ರವರು ನಿರ್ವಹಿಸಿದರು. ಸಂಸ್ಥೆಯ ಪುತ್ತೂರು ಮತ್ತು ಸುಳ್ಯ ಶಾಖೆಯ ಸಿಬ್ಬಂದಿಗಳು, ಸುಪ್ರೀತ್ ಮೋಂಟಡ್ಕ, ವಿನುತಾ ನಾರಾಯಣ ಕೇರ್ಪಳ, ಲತಾಶ್ರೀ ಸುಪ್ರೀತ್ ಮೋoಟಡ್ಕ,ಸ್ನಿಗ್ಧ ಮೋಂಟಡ್ಕ, ಸಿಬ್ಬಂದಿ ವರ್ಗ ಮೊದಲಾದವರು,ಸ್ಥಳೀಯರು ಉಪಸ್ಥಿತರಿದ್ದರು.