- Wednesday
- April 2nd, 2025

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ದಿನಾಂಕ 19-07-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು (12ನೇ ತರಗತಿವರೆಗೆ) ದಿನಾಂಕ 19-07-2024 ರಂದು...

ಅಜ್ಜಾವರ ಸರಕಾರಿ ಪ್ರೌಢಶಾಲೆಯಯಲ್ಲಿ ೨೦೨೪ರಲ್ಲಿ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಫಾತಿಮತ್ ಜುಮೈಲಾ ಮೇನಾಲ ಮತ್ತು ವೈಷ್ಣವಿ ಮೇನಾಲ ರವರಿಗೆ ತುಳು ಒಕ್ಕೂಟ ಕುವೈತ್ ವತಿಯಿಂದ ರೂ.೧೦ ಸಾವಿರದಂತೆ ವಿದ್ಯಾರ್ಥಿ ವೇತನ ವಿತರಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಗೋಪಿನಾಥ್ ಮೆತ್ತಡ್ಕ ವಹಿಸಿದ್ದರು. ತುಳು ಒಕ್ಕೂಟ ಕುವೈತ್...
ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ,ಸ್ನೇಹಿತರ ಕಲಾ ಸಂಘ ಮತ್ತು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಜಂಟಿ ಆಶ್ರಯದಲ್ಲಿ ಜು.21ರಂದು ಆದಿತ್ಯವಾರ ಆಟಿದ ಪೊಲಬು ಮತ್ತು ಕೆಸರುಗದ್ದೆ ಕ್ರೀಡಾಕೂಟ ಬೆಳ್ಳಾರೆ ಸಮೀಪದ ಪಡ್ಪು ಕೃಷಿಕ ಶೇಷಪ್ಪ ಗೌಡರ ಮನೆಯಲ್ಲಿ ನಡೆಯಲಿದೆ. ಆ ದಿನ ಬೆಳಿಗ್ಗೆ ರಂಗ ಕಲಾವಿದ, ಚಲನಚಿತ್ರ ನಟ ರವಿ ರಾಮಕುಂಜ ಕಾರ್ಯಕ್ರಮವನ್ನು ಉದ್ಘಾಟೀಸಲಿದ್ದಾರೆ....

ಅಜ್ಜಾವರ ಸರಕಾರಿ ಪ್ರೌಢಶಾಲೆಯಯಲ್ಲಿ ೨೦೨೪ರಲ್ಲಿ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಫಾತಿಮತ್ ಜುಮೈಲಾ ಮೇನಾಲ ಮತ್ತು ವೈಷ್ಣವಿ ಮೇನಾಲ ರವರಿಗೆ ತುಳು ಒಕ್ಕೂಟ ಕುವೈತ್ ವತಿಯಿಂದ ರೂ.೧೦ ಸಾವಿರದಂತೆ ವಿದ್ಯಾರ್ಥಿ ವೇತನ ವಿತರಿಸಿ, ಗೌರವಿಸಲಾಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಗೋಪಿನಾಥ್ ಮೆತ್ತಡ್ಕ ವಹಿಸಿದ್ದರು. ತುಳು ಒಕ್ಕೂಟ ಕುವೈತ್ ಇದರ...

ಅಜ್ಜಾವರ ಗ್ರಾಮದ ಮೇನಾಲದಲ್ಲಿ ಬೈಕ್ ಹಾಗೂ ಸ್ಕೂಟಿ ನಡುವೆ ಅಪಘಾತವಾಗಿರುವ ಘಟನೆ ಇಂದು ವರದಿಯಾಗಿದೆ. ಅಜ್ಜಾವರ ಕುಡೆಂಬಿ ಸಮಂತ್ ಎಂಬವರು ಕೆಲಸ ಬಿಟ್ಟು ಮನೆಯ ಕಡೆ ಹೋಗುತ್ತಿದ್ದು ಅಜ್ಜಾವರ ಕಡೆಯಿಂದ ಬರುತ್ತಿದ್ದ ಚಿತ್ರಕುಮಾರ್ ಎಂಬವರ ಸ್ಕೂಟಿ ಮೇನಾಲದಲ್ಲಿ ಡಿಕ್ಕಿಯಾಯಿತು. ಪರಿಣಾಮ ಸಮಂತ್ ರ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಚಿತ್ರಕುಮಾರ್ ರ ಕೈಗೂ ಸಣ್ಣಪುಟ್ಟ ಗಾಯವಾಗಿದೆ. ಸಮಂತ್...

ಗುತ್ತಿಗಾರು ಕಡೆಗೆ ಬರುತ್ತಿದ್ದ ಪ್ರಸಾದ್ ಆಯಿಲ್ ಮಿಲ್ ಅವರ ಕಾರು ಹಾಗೂ ಎಲಿಮಲೆ ಕಡೆಗೆ ಹೋಗುತ್ತಿದ್ದ ಅರಂತೋಡಿನ ಜೀಪು ಮಧ್ಯೆ ಅಪಘಾತವಾದ ಘಟನೆ ವಳಲಂಬೆ ಸಮೀಪದ ಕಾಜಿಮಡ್ಕದಲ್ಲಿ ಇಂದು ನಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿ ಓರ್ವರಿಗೆ ಗಾಯಗಳಾಗಿದೆ.

ಇಂದು ರಾತ್ರಿಯಿಂದ ಜುಲೈ 22ರ ಬೆಳಿಗ್ಗೆ 6 ಗಂಟೆ ವರೆಗೆ ರಾತ್ರಿ ಎಂಟು ಗಂಟೆಯಿಂದ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇದ. ಕೊಡಗು ಜಿಲ್ಲಾಧಿಕಾರಿಗಳ ಆದೇಶಕರ್ತೋಜಿ ಗ್ರಾಮ ಬಳಿ ಹೆದ್ದಾರಿ ದುರಸ್ತಿ ಕಾರ್ಯ ಹಿನ್ನಲೆ ಮಂಗಳೂರು ಮಡಿಕೇರಿ ಹೆದ್ದಾರಿ ಬಂದ್ ಮಾಡಲಾಗುವುದು. ಇಂದು ರಾತ್ರಿ 8 ಗಂಟೆಯಿಂದ 22 ರ ಬೆಳಗ್ಗೆ 6 ಗಂಟೆವರೆಗೆಹೆದ್ದಾರಿ ಯಲ್ಲಿ ...

ಒಂದು ಕ್ಷಣದ ಖುಷಿಗಾಗಿ ಅಮೂಲ್ಯವಾದ ಪ್ರಾಣವನ್ನು ಅಪಾಯಕ್ಕೆ ಒಡ್ಡದಿರಿ...ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿ, ಚರಾಚರಗಳ ಉಳಿವಿಗೆ ಮಳೆ ಅತ್ಯಗತ್ಯ. ಆದರೆ ಮನುಷ್ಯರಾದ ನಾವುಗಳು ಇಂದು ನಮ್ಮ ಉಳಿವಿಗಾಗಿ ಸುರಿಯುವ ಮಳೆಯಲ್ಲಿಯೇ ಹುಚ್ಚಾಟ ಮಾಡಿ ನಮ್ಮ ಪ್ರಾಣಕ್ಕೆ ನಾವೇ ಕುತ್ತು ತಂದುಕೊಳ್ಳುತ್ತಿದ್ದೇವೆ.ಹೌದು, ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ನದಿ-ಜಲಪಾತ, ಹಳ್ಳ-ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ...

ಸಂಪಾಜೆ ಗ್ರಾಮದ ಪಡುಮಜಲು ಮನೆಯವರಾಗಿದ್ದು, ಮಂಗಳೂರಿನಲ್ಲಿ ನೆಲೆಸಿರುವ ಅವಿನ್ ಎಂಬವರ ಪತ್ನಿ ಶಿಲ್ಪಾ ಅಸೌಖ್ಯದಿಂದಾಗಿ ಇಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 32 ವರ್ಷ ವಯಸ್ಸಾಗಿತ್ತು.ಅವರು ಕೆಲ ಸಮಯಗಳಿಂದ ಅಸೌಖ್ಯತೆಯಿಂದ ಬಳಲುತ್ತಿದ್ದರೆನ್ನಲಾಗಿದೆ.ಕೊಲ್ಲಮೊಗ್ರು ಗ್ರಾಮದ ಆಲ್ಕಬೆ ಚೆನ್ನಪ್ಪ ಗೌಡ ಎಂಬವರ ಪುತ್ರಿ. ಇವರ ಪತಿ ಅವಿನ್ ಮಂಗಳೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಲ್ಪಾರವರು ನರ್ಸ್ ಕೆಲಸ ಮಾಡುತ್ತಿದ್ದರು.ಮೃತರು...

ಕುಂಬರ್ಚೋಡು ಮಾಣಿ ಮೈಸೂರು ಹೆದ್ದಾರಿ ಬಳಿ ರಸ್ತೆಗೆ ವಾಲಿಕೊಂಡು ಬೀಳುವ ಸ್ಥಿತಿಯಲ್ಲಿ ಅಪಾಯಕಾರಿ ಮರವೊಂದು ಅಪಾಯದ ಮುನ್ಸೂಚನೆ ನೀಡುತ್ತಿದೆ. ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಮರವು ವಾಹನಗಳ ಮೇಲೆ ಬಿದ್ದರೆ ಜೀವ ಹಾನಿ ಸಂಭವಿಸುವ ಸಂದರ್ಭ ಇದ್ದು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಮರವನ್ನು ತೆರೆಗುಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

All posts loaded
No more posts