ಅಜ್ಜಾವರ: ಅಜ್ಜಾವರ ಗ್ರಾಮದ ಪಡ್ಡಂಬೈಲು ಕರ್ಲಪ್ಪಾಡಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆಗಳ ಹಿಂಡು ದಾಳಿಯಿಡುತ್ತಿದ್ದು ನಿನ್ನೆ ಮತ್ತು ಜೂ 15 ರಾತ್ರಿ ಆನೆಗಳ ಹಿಂಡು ಮೇದಿನಡ್ಕ ದಿಂದ ಬಂದು ವಿಶಾಖ್ ಪಡ್ಡಂಬೈಲು ಇವರ ತೋಟದಲ್ಲಿನ ಬಾಳೆಗಳನ್ನು ಸಂಪೂರ್ಣ ಹಾನಿಮಾಡಿದ್ದು ಇತ್ತ ಜೂ 16 ರಾತ್ರಿಯು ಶಂಕರ ಪಾಟಾಳಿ ಪಡ್ಡಂಬೈಲು, ಶಿವರಾಮ ನಾರ್ಕೊಡು, ಅವೀನ್ ಪಡ್ಡಂಬೈಲು, ಅರುಣ್ ಕುಮಾರ್, ವಿಶ್ವನಾಥ ಪೂಜಾರಿ, ಚಿನ್ನಪ್ಪ ಗೌಡ ಪಡ್ಡಂಬೈಲು ಸೇರಿದಂತೆ ಇತರರ ತೋಟಕ್ಕೆ ದಾಳಿಯಿಟ್ಟು ಅಲ್ಲಿದ್ದ ಬಾಳೆ, ತೆಂಗು, ಅಡಿಕೆ ಮರಗಳಿಗೆ ಅಪಾರ ಹಾನಿ
ಮಾಡಿದ್ದು ಸೋಲಾರ್ ಬೇಲಿಗಳ ನಿರ್ಮಣ ಕಳೆದ ಬಾರಿ ನಿರ್ಮಿಸಿದ್ದು ಸ್ಥಳೀಯರು ಅದಕ್ಕೆ ಸುತ್ತಿಕೊಂಡಿರುವ ಕಾಡುಗಳನ್ನು ತೆರವು ಗೊಳಿಸದ ಹಿನ್ನಲೆಯಲ್ಲಿ ಈ ಸೋಲಾರ್ ಬೇಲಿ ಕಾರ್ಯ ಪ್ರವುತವಾಗದೇ ಇದ್ದು ಇಂದು ಸ್ಥಳೀಯರಾದ ವಿನಯ್ ಕರ್ಲಪ್ಪಾಡಿ , ಸದಾನಂದ ಪಡ್ಡಂಬೈಲು , ಸಚಿನ್ ಪಡ್ಡಂಬೈಲು ಸೇರಿದಂತೆ ಇತರರು ಸೋಲಾರ್ ಬೇಲಿಗಳು ಹಾದು ಹೋಗುವಲ್ಲಿ ಸೊಪ್ಪು ಬಳ್ಳಿಗಳನ್ನು ತೆರವುಗೊಳಿಸಿದ್ದು ಇದೇ ಮಾದರಿಯಲ್ಲಿ ಪರಿಸರವಾಸಿಗಳು ಅರಣ್ಯ ಇಲಾಖೆ ಜೊತೆಯಲ್ಲಿ ಸಹಕರಿಸಿದರೆ ಆನೆಗಳು ಕೃಷಿ ತೋಟಗಳಿಗೆ ಬರದಂತೆ ತಡೆಯಬಹುದು ಅಲ್ಲದೇ ಸೋಲಾರ್ ಬೇಲಿಗಳನ್ನು ಚಾರ್ಜ್ ಮಾಡುವುದಾಗಿ ಅರಣ್ಯ ರಕ್ಷಕಿ ಗೀತಾ ತಿಳಿಸಿದ್ದು ಆನೆ ಕೃಷಿ ನಾಶ ಪಡಿಸಿದ ತೋಟಗಳಿಗೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.