Ad Widget

ಸುಬ್ರಹ್ಮಣ್ಯ: ರಾತ್ರಿ ವೇಳೆ ಕುಮಾರಧಾರ ನದಿಯಲ್ಲಿ ತೇಲಿ ಬಂದ ಆನೆ ಮೃತ ದೇಹ

ನೀರಿನ ಮಟ್ಟವನ್ನು ವೀಕ್ಷಿಸಲು ತೆರಳಿದ್ದವರಿಗೆ ಕಾಣಿಸಿದ ಮೃತದೇಹ

ಕುಮಾರಧಾರ ನದಿಯ ನೆರೆ ನೀರಿನಲ್ಲಿ ಆನೆಯ ಮೃತದೇಹ ತೇಲಿ ಬಂದ ಘಟನೆ ಸೋಮವಾರ ತಡರಾತ್ರಿ ನಡೆದಿತ್ತು.
ನಿನ್ನೆ(ಜು.15) ಮುಂಜಾನೆಯಿಂದ ಭಾರೀ ಮಳೆಯಾಗುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಕುಮಾರಧಾರ ನದಿಯ ನೀರಿನ ಮಟ್ಟವನ್ನು ವೀಕ್ಷಿಸಲು ತಡರಾತ್ರಿ ಮನ್ಮಥ ಬಟ್ಟೋಡಿ ಮತ್ತಿತರರು ತೆರಳಿದ ಸಂದರ್ಭದಲ್ಲಿ ನೆರೆ ನೀರಿನಲ್ಲಿ ತೇಲಿ ಬರುತ್ತಿರುವುದು ಕಂಡುಬಂದಿದ್ದು, ಸೂಕ್ಷ್ಮವಾಗಿ ಗಮನಿಸಿದಾಗ ಆನೆಯ ಮೃತದೇಹ ಎಂಬುವುದು ತಿಳಿದುಬಂದಿದೆ. ಆನೆಯ ಮೃತದೇಹ ಕೆಲದಿನಗಳ ಹಿಂದೆಯೇ ಎಲ್ಲಿಯೋ ಸತ್ತು ಮಳೆಯಿಂದಾಗಿ ಈ ಭಾಗಕ್ಕೆ ತೇಲಿ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹ ನೀರಿನಲ್ಲಿ ತೇಲಿ ಹೋಗಿದೆ ಎಂದು ತಿಳಿದುಬಂದಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!