
ಸಂಪಾಜೆ: ಸಂಪಾಜೆ ಗ್ರಾಮದ ರಾಜರಾಂಪುರ ಕಾಲನಿಯಲ್ಲಿ ಮನೆ ಬಳಿ ಭಾರಿ ಗಾತ್ರದ ಗುಂಡಿ ನಿರ್ಮಾಣ ಆಗಿದ್ದು ಗುಂಡಿಯ ಒಳಗಡೆ ದೂರದಿಂದ ಭೂಮಿ ಒಳಗೆ ಹರಿದು ಬರುತ್ತಿರುವ ನೀರು ಕಾಣಿಸುತ್ತಿದ್ದು ಸದ್ಯ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜನಪ್ರತಿನಿಧಿಗಳು ಭೇಟಿ ನೀಡಿ ಇದೀಗ ಮನೆ ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಿಂದ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.