
10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಎಸ್ ಜಿ ಎಸ್ ಇಂಟರ್ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ರಿಸರ್ಚ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರ ಕರ್ನಾಟಕ ಸರ್ಕಾರ ಇವರ ಸಹಕಾರದಲ್ಲಿ 14 ಜುಲೈ 2024 ರಂದು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣ ಕ್ರೀಡಾಂಗಣ ನಡೆದ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕ್ಷಮಾ ಇವರು ಟ್ರೆಡಿಶನಲ್ ಯೋಗ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ(ಏಷ್ಯನ್ ಲೆವೆಲ್)ಅರ್ಹತೆ ಪಡೆದಿರುತ್ತಾರೆ.

ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ವಿಧಾತ್ ಗೌಡ ಎಂ ಟಿ ಇವರು ಟ್ರೆಡಿಶನಲ್ ಯೋಗ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಬ್ಬರು ಏಷ್ಯನ್ ಗೇಮ್ ಗೆ ಅರ್ಹತೆ ಪಡೆದಿದ್ದಾರೆ. ತೀರ್ಥರಾಮ ಯಂ ಪೂರ್ಣಿಮಾ ಮುಡೂರು ಇವರ ಮಕ್ಕಳು ಯೋಗ ಶಿಕ್ಷಕರು ವಾಣಿ ಎ ಮತ್ತು ಯೋಗೇನ ಚಿತ್ತಸ್ಯ ಯೋಗ ಕೆಂದ್ರದ ಯೋಗ ಶಿಕ್ಷಕರು ಪ್ರಶ್ವಿಜ ಸಂತೋಷ್ ಮುಂಡಕಜೆ ಇವರ ಶಿಷ್ಯರಾಗಿರುತ್ತಾರೆ.