ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಧಿಕಾರಿಗಳ ಸಭೆ ಕರೆದು ಸ್ಪಷ್ಟ ನಿರ್ದೆಶನ ನೀಡಿದ್ದರೂ ಕೆಲ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಅರಂತೋಡು ಗ್ರಾಮದ ಅಡ್ತಲೆ ನಿವಾಸಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ. ಲೋಕೋಪಯೋಗಿ, ಹಾಗೂ ಅರಣ್ಯ ಇಲಾಖೆಯು ಜನರ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಆರಂತೋಡು ಅಡ್ತಲೆ ಎಲಿಮಲೆ ಲೋಕೋಪಯೋಗಿ ರಸ್ತೆಯು ದಟ್ಟ ಅರಣ್ಯ ಮೂಲಕ ಹಾದು ಹೋಗುತ್ತಿದ್ದು, ಮಳೆಗಾಲದ ಪ್ರಕೃತಿ ವಿಕೋಪ ಸಂದರ್ಭ ಮರ, ಬಿದಿರು ಬೀಳುವುದು, ವಿದ್ಯುತ್ ಕಡಿತಗೊಳ್ಳುವುದು ಸರ್ವೇ ಸಾಮಾನ್ಯ. ಆದರೇ ಜನರ ಒತ್ತಡದಿಂದ ಎಚ್ಚೆತ್ತು ಮೆಸ್ಕಾಂ ಇಲಾಖೆ ಕೆಲಸ ಮಾಡುತ್ತಿದೆ. ಆದರೇ ಹಲವಾರು ಬಾರಿ ಮರ ಬಿದ್ದು ರಸ್ತೆ ಬ್ಲಾಕ್ ಆಗುವ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ, ಲೋಕೋಪಯೋಗಿ ಇಲಾಖೆ ಬೇಜಾವಾಬ್ದಾರಿ ನಡೆ ಪ್ರದರ್ಶಿಸುತ್ತಿದೆ. ತನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಮಾಡುತ್ತಿದೆ. ಜಿಲ್ಲಾಧಿಕಾರಿಗಳ ಕಟ್ಟು ನಿಟ್ಟಿನ ಆಜ್ಞೆ ಇದ್ದರು ಇನ್ನೂ ಎಚ್ಚತ್ತುಕೊಂಡಿಲ್ಲ ಎಂಬುದಕ್ಜೆ ಹಲವಾರು ಸಾಕ್ಷಿಗಳಿವೆ. ಕಳೆದ ರಾತ್ರಿ ವೈ ಎಮ್ ಕೆ ಬಳಿ ಬೃಹದಾಕಾರದ ಬಿದಿರು ಹಿಂಡಿಲು ವಿದ್ಯುತ್ ಲೈನ್ ಸಮೇತ ರಸ್ತೆಗೆ ಉರುಳಿ ಬಿದ್ದಿದೆ. ಸಂಜೆ ತನಕ ಇದನ್ನು ಸ್ಥಳೀಯ ನಿವಾಸಿಗಳು ಸೇರಿದಂತೆ, ಇಲಾಖೆಗಳ ಯಾವುದೇ ಅಧಿಕಾರಿಯು ತೆರವುಗೊಳಿಸುವಲ್ಲಿ ಪ್ರಯತ್ನಿಸಿಲ್ಲ.ಸಂಜೆ ತನಕ ಬಿದ್ದಿರುವ ಬಿದಿರನ್ನು ತೆರವು ಮಾಡದೆ ಇರುವುದನ್ನು ಮನಗಂಡು ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಹರಿಪ್ರಸಾದ್ ಅಡ್ತಲೆ, ಗಿರೀಶ್ ಕಲ್ಲುಗದ್ದೆ, ವಿನಯ್ ಅಡ್ತಲೆ,ಯವರನ್ನು ಸಂಪರ್ಕಿಸಿ ತೆರವು ಮಾಡಿರುತ್ತಾರೆ. ಕಿಶೋರ್ ಆಡಿಮರಡ್ಕ, ವಿಶ್ವನಾಥ ಕರ್ಕುಂಜ ಸಹಕರಿಸಿದರು
- Tuesday
- December 3rd, 2024